Breaking News

ಲೋಕಸಭಾ ಉಪಚುನಾವಣೆಯ ಕುರಿತು ಬಿ ಎಸ್ ವೈ ಅಸಮಧಾನ..!

were-these-by-elections-necessary-bsy

ಶಿಖಾರಿಪುರ: ಶಿವಮೊಗ್ಗ, ಬಳ್ಳಾರಿ ಮತ್ತು ಮಂಡ್ಯ ಈ ಮೂರೂ ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಸುವ ಕುರಿತು ಬಿಜೆಪಿ ರಾಜ್ಯಅಧ್ಯಕ್ಷ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಹಲವಾರು ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಈ ಮೂರೂ ಕ್ಷೇತ್ರಗಳಿಗೆ ಉಪಚುನಾವಣೆ ಇರುವುದಿಲ್ಲ ಎಂದು ಭಾವಿಸಿದ್ದೆವು. ಕೇವಲ ಐದು ತಿಂಗಳಿಗಾಗಿ ಚುನಾವಣೆಯನ್ನು ಎದುರಿಸಬೇಕಾಗಿದೆ. ಹೀಗಾಗಿ ಈ ಚುನಾವಣೆಯ ಬಗ್ಗೆ ಯಾರಿಗೂ ಆಸಕ್ತಿಯೇ ಇಲ್ಲ. ಗೆದ್ದ ಅಭ್ಯರ್ಥಿಗಳು ತಮ್ಮ ಕ್ಷೇತ್ರದ ಅಭಿವ್ರದ್ಧಿಗಾಗಿ ಕೇವಲ ಐದು ತಿಂಗಳಲ್ಲಿ ಅನುಧಾನವನ್ನು ತರಲೂ ಸಾಧ್ಯವಿಲ್ಲ.ಇದೊಂದು ಅನಗತ್ಯ ಚುನಾವಣೆ. ಆದರೆ ಚುನಾವಣಾ ಆಯೋಗದ ಕ್ರಮವನ್ನು ಸ್ವಾಗತಿಸಬೇಕಾಗಿದೆ ಎಂದು ಶಿಕಾರಿಪುರದಲ್ಲಿ ಮಾತನಾಡುತ್ತ ಯಡಿಯೂರಪ್ಪ ಅವರು ಹೇಳಿದರು. 

ಇದಲ್ಲದೇ ಜಗದೀಶ್ ಶಟ್ಟರ್ ಅವರು ಸಹ ಹುಬ್ಬಳ್ಳಿಯಲ್ಲಿ ಮಾತನಾಡಿ ಲೋಕಸಭಾ ಚುನಾವಣೆ ಸನಿಹದಲ್ಲಿರುವಾಗ ಈ ಉಪಚುನಾವಣೆಯನ್ನು ನಿರೀಕ್ಷಿಸಿರಲಿಲ್ಲ.ಲೋಕಸಭಾ ಚುನಾವಣೆಗೆ ಇನ್ನು ಕೇವಲ ಆರು ತಿಂಗಳುಗಲಿರುವಾಗ ಉಪಚುನಾವಣೆ ನಡೆಸುವುದು ಸೂಕ್ತವಲ್ಲ. ಈ ಕುರಿತು ವೈಜ್ಞಾನಿಕ ತೀರ್ಮಾನದ ಅಗತ್ಯವಿದೆ ಎಂದರು. ನಾವು ಚುನಾವಣೆಗೆ ಸಿದ್ದವಾಗಿದ್ದೇವೆ, ಎಲ್ಲ ಕ್ಷೇತ್ರಗಳಲ್ಲಿಯೂ ಬಿಜೆಪಿ ಜಯ ಸಾದಿಸಲಿದೆ ಎಂದರು. 




SPONSORED CONTENT



No comments