ಮಧ್ಯಪ್ರದೇಶ:ಕಾಂಗ್ರೇಸ್ ರೋಡ್ ಶೋ ವೇಳೆ ಬಲೂನ್ ಗೆ ಬೆಂಕಿ ಹತ್ತಿ ಸ್ಫೋಟ..!
ರಾಹುಲ್ ಗಾಂಧಿ ರೋಡ್ ಶೋ ವೇಳೆ ಬಲೂನ್ ಗೆ ಬೆಂಕಿ ತಗುಲಿ ಸ್ಪೋಟಗೊಂಡ ದೃಶ್ಯ |
ಜಬಲ್ ಪುರ: ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯ ಪ್ರಚಾರದ ಕಾವು ಹೆಚ್ಚಾಗಿದ್ದು, ನಿನ್ನೆ ಶನಿವಾರ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಚಾರದ ರೈಲಿ ವೇಳೆ ಬಲೂನ್ ಗೊಂಚಲಿಗೆ ಬೆಂಕಿ ಹತ್ತಿ ಸ್ಪೋಟಗೊಂಡು ಸುದ್ದಿಯಾಗಿದೆ.
ರಾಹುಲ್ ಗಾಂಧಿ ಅವರು ಪ್ರಚಾರದ ವೇಳೆ ತೆರೆದ ವಾಹನದಲ್ಲಿ ಹೋಗುತ್ತಿದ್ದರು. ಕಾರ್ಯಕರ್ತರು ಸಂತೋಷದಿಂದ ಕುಣಿದು ಕುಪ್ಪಲಿಸುತ್ತ ತೆರಳುತ್ತಿರುವ ವೇಳೆ ಒಬ್ಬರು ಗ್ಯಾಸ್ ತುಂಬಿದ ಬಲೂನಿನ ಗೊಂಚಲು ಹಿಡಿದು ಬಂದರು. ಸಮೀಪದಲ್ಲಿಯೇ ರಾಹುಲ್ ಗಾಂಧಿಗೆ ಮತ್ತೊಬ್ಬರು ಆರತಿ ಬೆಳಗಲು ಪ್ರಾರಂಭಿಸಿದಾಗ ಬೆಂಕಿ ಬಲೂನ್ ಗೆ ಹೊತ್ತಿಕೊಂಡು ಸಣ್ಣ ಪ್ರಮಾಣದ ಸ್ಪೋಟ ಉಂಟಾಗಿದೆ.
ಒಮ್ಮೆಲೇ ಬೆಂಕಿ ಹೊತ್ತಿಕೊಂಡು ಸ್ಪೋಟ ಗೊಂದದ್ದರಿಂದ ರಾಹುಲ್ ಗಾಂಧಿಯವರೂ ಕೆಲ ಕ್ಷಣ ಬೆಚ್ಚಿ ಬಿದ್ದರು. ಈ ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ತೊಂದರೆ ಆಗದೇ ಮುಕ್ತಾಯ ಕಂಡಿದೆ.
No comments