Breaking News

ತೆಂಗಿನ ಸಮಗ್ರ ಪೋಷಕಾಂಶಗಳ ನಿರ್ವಹಣೆ

            ತೆಂಗಿನ ಮರವು (ಕೋಕೋಸ್ ನ್ಯೂಸಿಫೆರಾ)ಅರಿಕೇಸಿಯಾ (Arecaceae )ಕುಟುಂಬಕ್ಕೆ ಸೇರಿದ ಮರವಾಗಿದೆ. ಇದು ಆಹಾರದಿಂದ ಸೌಂದರ್ಯ ವರ್ಧಕಗಳವರೆಗೆ  ಅನೇಕ ಸಾಂಪ್ರದಾಯಿಕ ಬಳಕೆಗೆ  ಸಾಕ್ಷಿಯಾಗಿದೆ. ತೆಂಗಿನ ಮರದ ಪ್ರತಿಯೊಂದು ಭಾಗವು ಮಾನವನ ಉಪಯೋಗಕ್ಕೆ ಯೋಗ್ಯವಾಗಿದ್ದು, ಇದರಿಂದಾಗಿ ಮಾನವ ಕಲ್ಪವೃಕ್ಷ ವೆಂದುಕರೆದಿದ್ದಾನೆ.


loading...



ತೆಂಗನ್ನು ತಮಿಳುನಾಡು,ಕೇರಳ , ಕರ್ನಾಟಕ ಮತ್ತು ಆಂಧ್ರಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ನಾವು ಇಂದು ಈ ಬಹು ಉಪಯೋಗಿ ತೆಂಗಿನ ಕುರಿತಾಗಿ,ಅದರ ಸಮಗ್ರ ನಿರ್ವಹಣೆಯ ಕುರಿತಾಗಿ ಹಂತ ಹಂತವಾಗಿ ತಿಳಿದುಕೊಳ್ಳೋಣ .
  • ತೆಂಗಿನ ಮರಗಳಿಗೆ ಸೆಪ್ಟೆಂಬರ್-ಅಕ್ಟೊಬರ್ ತಿಂಗಳಲ್ಲಿ  ಮರದಿಂದ ಒಂದೂವರೆ ಅಡಿ ಬಿಟ್ಟು ಐದು ಅಡಿಗಳವರೆಗೆ ಮಣ್ಣನ್ನು ಸಡಿಲ ಮಾಡುವುದು ಅಗತ್ಯವಾಗಿದೆ.
  • ತೆಂಗಿನ ಗಿಡಗಳಿಗೆ ಸಾರಜನಕ ಗೊಬ್ಬರಗಳನ್ನು ವರ್ಷಕ್ಕೆ ಎರಡು ಬಾರಿ ಒಂದೊಂದು ಕೆ.ಜಿ.ಯಂತೆ ಮುಂಗಾರಿಗೆ ಮುನ್ನ ಮತ್ತು ಸೆಪ್ಟೆಂಬರ್-ಅಕ್ಟೊಬರ್ ತಿಂಗಳಲ್ಲಿ  ಕೊಡಬೇಕು. 
  • ಪೊಟ್ಯಾಷ್ ಅಂಶವಿರುವ ಗೊಬ್ಬರಗಳನ್ನು  ಮುಂಗಾರು ಮತ್ತು ಸೆಪ್ಟೆಂಬರ್-ಅಕ್ಟೊಬರ್ ತಿಂಗಳಲ್ಲಿ 600ಗ್ರಾಂ. ನಂತೆ  ಕೊಡಬೇಕು. 
  • ರಂಜಾಕ, ಡಿ.ಎ.ಪಿ.- 800 ಗ್ರಾಂ. ಪ್ರತಿ ಗಿಡಕ್ಕೆ ಅಥವಾ ಸೂಪರ್ ಪಾಸ್ಪೇಟ್ 1.5 ಗ್ರಾಂ. ನ್ನು ಎರಡು ಸಮ ಕಂತುಗಳಲ್ಲಿ ನೀಡಬೇಕು. 
  • ರಂಜಕ ಕರಗಿಸುವ ಜೀವಾಣು ಪಿ.ಎಸ.ಬಿ. ಮತ್ತು ಜೈವಿಕ ಪೀಡೆನಾಶಕ ಸುಡೋಮೋನಾಸ್  ಅಥವಾ ಟ್ರೈಕೋಡರ್ಮಾ ಗಳನ್ನೂ ಕಾಂಪೋಸ್ಟ್ ನೊಂದಿಗೆ ಮಿಶ್ರಮಾಡಿ ಕೊಡಬೇಕು. 
  • ಲಘು ಪೋಷಕಾಂಶ ಗಳ ನಿರ್ವಹಣೆ ಅತ್ಯವಶ್ಯಕ, ಬೋರಾನ್ ಮತ್ತು ಸತುವಿನ ಕೊರತೆಯಿಂದ ತೆಂಗಿನ ಹೂವುಗಳು ಮತ್ತು ಚಿಕ್ಕ ಕಾಯಿಗಳು ಉದುರುತ್ತವೆ. 
  • ಸತು 150 ಗ್ರಾಂ. ಮತ್ತು ಬೋರಾಕ್ಸ್ 50ಗ್ರಾಂ.ನ್ನು ಮೀರಿ ಬಳಸುವುದರಿಂದ ಮಾನವನ ಮೇಲೆ ದುಷ್ಪರಿಣಾಮ ಬೀರುತ್ತವೆ. 
  • ಲಘು ಪೋಷಕಾಂಶ ಮತ್ತು ಜೈವಿಕ  ಗೊಬ್ಬರಗಳನ್ನು ಕಾಂಪೋಸ್ಟ್ ಅಥವಾ ಕೊಟ್ಟಿಗೆ ಗೊಬ್ಬರಗಳ ಜೊತೆಗೆ ಮಿಶ್ರಮಾಡಿ ಕೊಡಬೇಕು. 
  • ರಾಸಾಯನಿಕ ಗೊಬ್ಬರಗಳನ್ನು ನೀಡಿದ ಮೇಲೆ  ತೇವಾಂಶವನ್ನು ಕಾಪಾಡುವುದು ಅವಶ್ಯಕ. 
  • ತೆಂಗಿನ ಗರಿಗಳನ್ನು ತೆಂಗಿನ ಮರಗಳ ಬುಡದಲ್ಲಿ ಹಾಕುವುದು ಉತ್ತಮ,ಗರಿಗಳಲ್ಲಿ ಹೆಚ್ಚಿನ ಪ್ರಮಾಣದ ಪೊಟ್ಯಾಷ್ ಅಂಶವಿರುತ್ತವೆ. 
ಈ ಮೇಲಿನ ಎಲ್ಲ ಅಂಶಗಳನ್ನು ಅನುಸರಿಸುವುದರಿಂದ  ಮತ್ತು ನಿಯಮಿತವಾಗಿ ನೀರನ್ನು ನೀಡುವುದರಿಂದ ರೈತರು  ಹೆಚ್ಚಿನ ಇಳುವರಿಯನ್ನು ಪಡೆಯಬಹುದಾಗಿದೆ. ಆ ಮೂಲಕ ನಮ್ಮ ರೈತರು ಸದ್ರಡರಾಗಬೇಕೆಂಬುದೆ ನಮ್ಮ ಆಶಯ. 
ಇಂತಹ ಇನ್ನು ವಿವಿಧ ಮಾಹಿತಿಗಾಗಿ ನಮ್ಮ ಸೈಟನ್ನು ಫಾಲೋ ಮಾಡಿ...  ಮತ್ತು ಪೋಸ್ಟ್ ಹಾಕಿದಾಗ ನೋಟಿಫಿಕೇಶನ್ ಪಡೆಯಲು Subscribe ಮಾಡಿ..... 

No comments