Breaking News

ಮೊಬೈಲ್ ಖರೀದಿಸುವವರಿಗೆ ಸಿಹಿಸುದ್ದಿ..! ಶೇ.62 ರ ವರೆಗೆ ಡಿಸ್ಕೌಂಟ್.

ನಮ್ಮ  ಪೇಜನ್ನು ಲೈಕ್ ಮಾಡಿ (ನ್ಯೂಸ್ ಡೆಸ್ಕ್ )


ಮೊಬೈಲ್ ಖರೀದಿಸುವ ಆಲೋಚನೆಯಲ್ಲಿರುವವರಿಗೆ ಒಂದು ಸಿಹಿಸುದ್ದಿ ..! ಅದೇನೆಂದರೆ  ಈ ಹಬ್ಬಗಳ ಸೀಸನ್ ನಲ್ಲಿ  ಪ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ ಎಂಬ ಮಹಾ ಸೆಲ್ ದಿನವನ್ನು ಪ್ರಾರಂಭಿಸಲಿದೆ. ಇಲ್ಲಿ ಕೆಲವು ಮೊಬೈಲ್ ಕಂಪನಿಗಳು ಶೇ. 62 ರಷ್ಟು ಡಿಸ್ಕೌಂಟ್ ನೀಡುವುದಾಗಿ ಘೋಷಿಸಿವೆ.

mobile-phone-firms-slash-prices-up-62-on-flipkart-festive

ಹೌದು .. ನೀವು ಓದುತ್ತಿರುವುದು ನಿಜ..! ಪ್ಲಿಪ್ ಕಾರ್ಟ್ನಲ್ಲಿ   ಇದೆ ಅಕ್ಟೋಬರ್ 11 ರಿಂದ 14 ರವರೆಗೆ ಬಿಗ್ ಬಿಲಿಯನ್  ಡೇ ಆರಭಿಸಲಿದ್ದು, ಭಾರಿ ರಿಯಾಯತಿಗಳನ್ನು ಘೋಷಿಸಿದೆ.


ಶೇ. 62 ರಷ್ಟು ಡಿಸ್ಕೌಂಟ್ 

ಮೊಬೈಲ್ ಗಳ ಖರೀದಿಯ ಮೇಲೆ ಶೇ. 62 ರಷ್ಟು ಭಾರಿ ಡಿಸ್ಕೌಂಟ್ ದೊರೆಯಲಿದ್ದು, ಸ್ಮಾರ್ಟ್ ಫೋನ್ಗಳ ಮಾರಾಟ  ಪ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ ನಲ್ಲಿ  ಅತೀ ಹೆಚ್ಚಾಗಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಈಗಾಗಲೇ ಕೆಲವು ಮೊಬೈಲ್ ಕಂಪನಿಗಳು ತಮ್ಮ ಡಿಸ್ಕೌಂಟ್ ನ್ನು  ರಿವಿಲ್ ಮಾಡಿದ್ದು, ಖರೀದಿದಾರರನ್ನು ತನ್ನತ್ತ ಸೆಳೆಯುತ್ತಿದೆ. .

ನೋಕಿಯಾ ಫೋನ್ ಗಳ ಮೇಲೆ ರಿಯಾಯಿತಿ

ನೋಕಿಯಾ ಕಂಪನಿಯು ಈ ಬಿಗ್ ಬಿಲಿಯನ್ ಡೇಗಾಗಿ ವಿಶೇಷ ರಿಯಾಯಿತಿ ಘೋಷಿಸಿದೆ. ತನ್ನ ಅತೀ ಹೆಚ್ಚು ಮಾರಾಟವಾಗುತ್ತಿರುವ  ನೋಕಿಯಾ 6.1ಪ್ಲಸ್ ನ್ನು  ರೂ. 17,600 ರ ಬದಲಾಗಿ 14,999 ಕ್ಕೆ ಮಾರಾಟ ಮಾಡುತ್ತಿದೆ. ಹಾಗೆಯೇ ಇತ್ತೀಚಿಗೆ ಬಿಡುಗಡೆಯಾದ  ನೋಕಿಯಾ 5.1ಪ್ಲಸ್ ನ್ನು ರೂ. 13,199  ರ ಬದಲಾಗಿ 10,499  ಕ್ಕೆ ಮಾರಾಟ ಮಾಡುತ್ತಿದೆ.  ಬಜೆಟ್ ಸ್ಮಾರ್ಟ್ ಫೋನ್ ಎಂದೇ ಹೆಸರಾದ ನೋಕಿಯ ಯು ಎಸಿಇ ಫೋನನ್ನು ಕೇವಲ 5,499 ಕ್ಕೆ ನೀಡಲಿದೆ.    
ಇದನ್ನೂ ಓದಿರಿ: ಮೊದಲ ಸೆಲ್ ನೊಂದಿಗೆ ಸದ್ದು ಮಾಡಿದ ನೋಕಿಯಾ 5.1 ಪ್ಲಸ್



ರೆಡ್ ಮಿ ಫೋನುಗಳ ಮೇಲೆ ರಿಯಾಯಿತಿ 

ಶಿಯೋಮಿ ಕಂಪನಿಯು ಸಹ ಈ ಮಾರಾಟ ಮೇಳಕ್ಕೆ ತನ್ನ ಫೋನುಗಳ ಮೇಲೆ ವಿಶೇಷ ರಿಯಾಯಿತಿಯನ್ನು ನೀಡಿದೆ.  ತನ್ನ ಎಮ್ ಐ ಮಿಕ್ಸ್  2 ನ   6 ಜಿಬಿಯ ಫೋನ್ ಬೆಲೆ ರೂ. 37,999 ಆಗಿದ್ದು, ಅದನ್ನು ಕೇವಲ ರೂ. 22,999 ಕ್ಕೆ ನೀಡಲಿದೆ. ಭಾರತದಲ್ಲಿ ಅತೀ ಹೆಚ್ಚು ಮಾರಾಟ ಕಂಡ ರೆಡ್ಮಿ ನೋಟ್ 5 ಪ್ರೋ ಸಹ ವಿಶೇಷ ರಿಯಾಯಿತಿಯೊಂದಿಗೆ ಬರಲಿದೆ. ಅಲ್ಲದೇ ರೆಡ್ಮಿ 5 ಎ  ಕೇವಲ ರೂ. 5,999 ಕ್ಕೆ ನೀಡಲಿದೆ. ಇತ್ತೀಚಿಗೆ ಬಿಡುಗಡೆಯಾದ ರೆಡ್ಮಿ  6 ನ್ನು 7,999 ಕ್ಕೆ ಮಾರಾಟ ಮಾಡಲಿದೆ.
ಇದನ್ನೂ ಓದಿರಿ: ಟಾಪ್ ಎಂಡ್ ಫೋನ್ ಗಳಿಗೂ ಸೆಡ್ಡು ಹೊಡೆಯುವ ರೆಡ್ ಮಿ 6 ಪ್ರೋ ಸ್ಮಾರ್ಟ್ ಫೋನ್..!

ಆಸೂಸ್ ಫೋನುಗಳ ಮೇಲೆ ರಿಯಾಯಿತಿ 

ಇತ್ತೀಚಿಗೆ ಸ್ವಲ್ಪ ಹೆಚ್ಚೇ ಸದ್ದು ಮಾಡುತ್ತಿರುವ ಅಸೂಸ್  ಮೊಬೈಲ್ ತಯಾರಕ ಕಂಪನಿ ಸಹ ಈ ಮಾರಾಟ ಮೇಳದಲ್ಲಿ ಬಾಗವಹಿಸಲಿದೆ. ತನ್ನ ಅಸುಸ್  ಜೆನ್ಫೊನ್ 5 ಝೆಡ್  ಫೋನನ್ನು 29,999 ರಿಂದ ರಿಯಾಯಿತಿ ನೀಡಿ ಕೇವಲ ರೂ. 24,999ಕ್ಕೆ ಮಾರಲಿದೆ.  ಹೆಚ್ಚು ಮಾರಾಟ ಕಂಡ ಅಸುಸ್ ನ  ಜೆನ್ಫೊನ್ ಮ್ಯಾಕ್ಸ್ ಪ್ರೋ ಎಮ್ 1 ಫೋನನ್ನು 3 ಜಿಬಿ ರಾಮ್ ಫೋನನ್ನು ರೂ. 9,999, 4 ಜಿಬಿ ರಾಮ್  ಫೋನನ್ನು ರೂ. 10,999 ಮತ್ತು  6 ಜಿಬಿ ರಾಮ್  ಫೋನನ್ನು ರೂ. 12,999 ಕ್ಕೆ ಮಾರಾಟ ಮಾಡಲಿದೆ.



ಸ್ಯಾಮ್ ಸಂಗ್  ಫೋನುಗಳ ಮೇಲೆ ರಿಯಾಯಿತಿ 

ಸ್ಯಾಮ್ ಸಂಗ್ ತನ್ನ ಗ್ಯಾಲಕ್ಸಿ ಎಸ್ 8 ಫೋನಿನ ಮೇಲೆ ಭಾರಿ ರಿಯಾಯಿತಿ ನೀಡಿದ್ದು, ರೂ. 45,990 ರ ಫೋನನ್ನು ಕೇವಲ ರೂ. 29,990 ಕ್ಕೆ ನೀಡಲಿದೆ. ಸ್ಯಾಮ್ ಸಂಗ್ ಗ್ಯಾಲಕ್ಸಿ ಆನ್ 6 ನ್ನು ಲೋವೆಸ್ಟ್ ಪ್ರೈಸ್ ಎವರ್ ಸೆಲ್ನಲ್ಲಿ ಕೇವಲ ರೂ. 11,990 ಕ್ಕೆ ಸೆಲ್ ಮಾಡಲಿದೆ ಎಂದು ತಿಳಿಸಿದೆ. ಸ್ಯಾಮ್ ಸಂಗ್ ಜೆ 3 ಪ್ರೋ ವನ್ನು ಕೇವಲ ರೂ. 6,190 ಕ್ಕೆ, ಸ್ಯಾಮ್ ಸಂಗ್ ಒನ್ ನೆಕ್ಸ್ಟ್ ನ್ನು 9,990 ಮತ್ತು ಸ್ಯಾಮ್ ಸಂಗ್ ಒನ್ 8 ಗಳ ಮೇಲು ಸಹ ವಿಶೇಷ ರಿಯಾಯಿತಿಯನ್ನು ನೀಡುತ್ತದೆ.


ಹಾನರ್ ಫೋನುಗಳ ಮೇಲೆ ರಿಯಾಯಿತಿ 

ಹಾನರ್ ಸಹ ಈ ಸೇಲ್ ನಲ್ಲಿ ರಿಯಾಯಿತಿಯನ್ನು ನೀಡಿ ಗ್ರಾಹಕರನ್ನು ಸೆಳೆಯುವ ಪ್ರಯತ್ನಕ್ಕೆ ಸನ್ನದ್ದವಾಗಿದ್ದು, ಹಾನರ್ 9 ಎನ್  4 ಜಿಬಿ ಫೋನನ್ನು ಕೇವಲ ರೂ. 11,990 ಕ್ಕೆ ಮತ್ತು ಹಾನರ್ 10 ನ್ನು 24,999 ಕ್ಕೆ ಮಾರಲು ರೆಡಿಯಾಗಿದೆ.

ಈ ಬಿಗ್ ಬಿಲಿಯನ್ ಡೇ ಸೆಲ್ ನಲ್ಲಿ ಇನ್ನೂ ಅನೇಕ ರಿಯಾಯಿತಿಗಳು ದೊರೆಯಲಿದ್ದು, ಅವುಗಳನ್ನು ತಿಳಿದು ಕೊಳ್ಳಲು ಹಾಗೂ ಈ ಆಫರ್ ನಲ್ಲಿ ಕೊಳ್ಳಲು 11ರ ವರೆಗೆ ಕಾಯಲೇ ಬೇಕಾಗಿದೆ. ಈ ಸೆಲ್ ನ ಮೂಲಕ ಪ್ಲಿಪ್ ಕಾರ್ಟ್ ಗ್ರಾಹಕರು ಹೆಚ್ಚಿನ ತಂತ್ರಜ್ಞಾನದ ಫೋನುಗಳನ್ನು ಕಡಿಮೆ ದರದಲ್ಲಿ ಕೊಳ್ಳಲು ಒಂದು ಉತ್ತಮ ಅವಕಾಶವಿದೆ.



ನಿಮ್ಮ ಅಭಿಪ್ರಾಯವನ್ನು ಈ ಕೆಳಗಿನ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ .. ನಿಮ್ಮ ಯಾವುದೇ ಪ್ರಶ್ನೆಗಳಿಗೆ ಉತ್ತರವನ್ನು ಇಲ್ಲಿ ಪಡೆಯಬಹುದು... ಕಾಮೆಂಟ್ ಮಾಡಿ ತಿಳಿಸಿ.. 

No comments