Breaking News

ಉತ್ತರಾಖಂಡ್ ನಲ್ಲಿ ಹೂಡಿಕೆದಾರರ ಸಭೆಯನ್ನು ಉದ್ಘಾಟಿಸಿದ ನರೇಂದ್ರ ಮೋದಿ.

narendra-modi-inaugurates-uttarakhand-investors-summit-201

ಉತ್ತರಾಖಂಡ್: ಪ್ರಧಾನಿ ನರೇಂದ್ರ ಮೋದಿ ಉತ್ತರಾಖಂಡ್ ನ ಹೂಡಿಕೆದಾರರ ಸಮಾವೇಶವನ್ನು ಉದ್ಘಾಟಿಸಿದರು. ಅಲ್ಲದೇ ಮಾತನಾಡುತ್ತ ಹೂಡಿಕೆ ಮಾಡಲು ಇದು ಅತ್ಯುತ್ತಮ ತಾಣವೆಂದು ಹೇಳಿದರು.

ಹೂಡಿಕೆದಾರರನ್ನು ಒಗ್ಗೂಡಿಸುವ ಮತ್ತು ಸೆಳೆಯುವ ಉದ್ದೇಶದಿಂದ ಕೇಂದ್ರ ಮತ್ತು  ರಾಜ್ಯ ಸರಕಾರಗಳು ಹಲವು ಯೋಜನೆಗಳನ್ನು ಹಮ್ಮಿಕೊಂಡಿವೆ. ಆಯುಷ್ಮಾನ್ ಭರತ್ ಪ್ರಪಂಚದಾದ್ಯಂತ ಅತಿದೊಡ್ಡ ಯೋಜನೆಯಾಗಿದೆ. ಈ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ಹೂಡಿಕೆಯ ಅವಕಾಶಗಳು ತೆರೆದುಕೊಂಡಿವೆ.

ಇದೆ ಸಂದರ್ಭದಲ್ಲಿ ಮಾತನಾಡುತ್ತ ನಾವು ತೆರಿಗೆ ವ್ಯವಸ್ಥೆಯನ್ನು ಸುಧಾರಿಸಿದ್ದೇವೆ. ತೆರಿಗೆ ವ್ಯವಸ್ಥೆ ವೇಗವಾಗಿ ಮತ್ತು ಪಾರದರ್ಶಕವಾಗಿ ರುವಂತೆ ನೋಡಿಕೊಳ್ಳಲಾಗುತ್ತಿದೆ. ವ್ಯಾಪಾರದಲ್ಲಿ ದಿವಾಳಿತನವನ್ನು ದುರಮಾದುವಂತಹ ಅನೇಕ ನಿಯಮಗಳನ್ನು ತರಲಾಗಿದೆ ಎಂದರು.

ಕಳೆದ ಎರಡು ವರ್ಷಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸುಗಮ ವ್ಯಾಪಾರ ವ್ಯವಹಾರ ನಡೆಸುವಂತೆ ಅನುಕೂಲ ಮಾಡಲು 10,000 ಕ್ಕೂ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕಳೆದ ವರ್ಷ 10,000 ಕಿ.ಮಿ.ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲಾಗಿದೆ. ಇದರರ್ತ ದಿನಕ್ಕೆ 27 ಕಿ.ಮೀ. ನಷ್ಟು ವೇಗವನ್ನು ನೀಡಲಾಗಿದೆ. ಇದು ಹಿಂದಿನ ಸರಕಾರಗಳಿಗಿಂತಲೂ  ಎರಡು ಪಟ್ಟು ಹೆಚ್ಚಾಗಿದೆ. ಇಂದು ವಿಶ್ವದ ಪ್ರಮುಖ ಬ್ರಾಂಡ್ ಗಳು ಭಾರತದ ಮೆಕ್ ಇನ್ ಇಂಡಿಯಾ ಯೋಜನೆಯ ಭಾಗವಾಗಿದೆ. ಈ ಮೂಲಕ ಭಾರತ ಅಟೋಮೊಬೈಲ್ ಕ್ಷೇತ್ರದಲ್ಲಿ ಚಿಲುಮೆಯಂತೆ ಹೊರಹೊಮ್ಮಲು ಸಾದ್ಯವಾಗುತ್ತಿದೆ ಎಂದರು.

ಉತ್ತರಾಖಂಡ್ ನಲ್ಲಿ ಹೂಡಿಕೆಯ ವ್ಯವಸ್ಥೆಯನ್ನು ಸಂಪೂರ್ಣ ಆನ್ ಲೈನ್ ಮಾಡಲಾಗಿದೆ. ಇದರಿಂದಾಗಿ ಹುಡಿಕೆದಾರರು ತಮ್ಮ ಯೋಜನೆಗಳ ಪ್ರಾರಂಭಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆಯುವ ಅವಶ್ಯಕತೆಯಿಲ್ಲ ಎಂದು ನರೇಂದ್ರ ಮೋದಿಯವರು  ಹೇಳಿದರು. 




SPONSORED CONTENT



No comments