Breaking News

ಸುಧಾಮೂರ್ತಿ ಅವರಿಂದ ನಾಳೆ ತುಲಾ ಲಗ್ನದಲ್ಲಿ ಮೈಸೂರು ದಸರೆಯ ಉದ್ಘಾಟನೆ.

Mysore-Dasara-inaugurated-tomorrow-from-Sudhamurthy-2018

ಮೈಸೂರು : ಮಹಿಳಾ ಸಾಧಕಿ ಇನ್ಫೋಸಿಸ್ ಫೌಂಡೇಶನ್ ನ ಮುಖ್ಯಸ್ಥೆ ಸುಧಾಮೂರ್ತಿ ಅವರಿಂದ ನಾಳೆ ಬೆಳಿಗ್ಗೆ ತುಲಾ ಲಗ್ನದಲ್ಲಿ ಮೈಸೂರು ದಸರೆಗೆ ಚಾಲನೆ ನೀಡಲಾಗುವುದು.

ಮೈಸೂರು ದಸರಾ ಉತ್ಸವ 2018 ರ ಪ್ರಾರಂಭಕ್ಕೆ ವಿಶೇಷ  ಉದ್ಘಾಟಕರಾಗಿ ಶ್ರೀಮತಿ ಸುಧಾಮೂರ್ತಿಯವರನ್ನು ಆಯ್ಕೆ ಮಾಡಲಾಗಿತ್ತು. ಅದರಂತೆ ಇಂದು ಮೈಸೂರಿಗೆ  ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿಯವರು  ಬಂದಿಳಿದಿದ್ದಾರೆ. ಅವರು ಮಾಧ್ಯಮದೊಂದಿಗೆ ಮಾತನಾಡಿ,'' ದಸರಾ ಉದ್ಘಾಟನೆ ಮಾಡಲು ಅವಕಾಶ ನೀಡಿರುವುದು ತುಂಬಾ ಖುಷಿ ಅನಿಸುತ್ತಿದೆ. ಇದು ಮಹಿಳಾ ಸಾಧನೆಗೆ ಸಂದ ಗೌರವ ಎಂದುಕೊಳ್ಳುತ್ತೇನೆ. ನಾನು 8 ನೇ ತರಗತಿಯಲ್ಲಿರುವಾಗ ಮೈಸೂರು ದಸರೆಗೆ ಬಂದಿದ್ದೆ, ಈಗ ಮತ್ತೆ ಬಂದಿರುವುದು ತುಂಬಾ ಸಂತೋಷವೆನಿಸುತ್ತದೆ. ದಸರಾ ಹಬ್ಬವೆಂದರೆ ವಿಶೇಷ ಇದು ಇತಿಹಾಸದೊಂದಿಗೆ ಬೆಸೆದುಕೊಂಡಿರುವ ಹಬ್ಬ. ಈ ದಸರಾ ಹಬ್ಬದ ಕುರಿತು ಯುವಜನತೆ ತಿಳಿದುಕೊಳ್ಳುವಂತೆ ಪಠ್ಯ ಪುಸ್ತಕದಲ್ಲಿ ಅಳವಡಿಸಬೇಕು'' ಎಂದರು. 
TVs & Appliances

ವಿಜೃಂಭಣೆಯಿಂದ ಆಚರಿಸಲ್ಪಡುವ ದಸರಾ ಹಬ್ಬ ನಾಳೆಯಿಂದ ಪ್ರಾರಂಭವಾಗಲಿದ್ದು, ಬೆಳಿಗ್ಗೆ ಚಾಮುಂಡಿ ಬೆಟ್ಟದಲ್ಲಿ 7.5ನಿಮಿಷದಿಂದ 7.35 ನಿಮಿಷಗಳ ಒಳಗೆ ಸಲ್ಲುವ ತುಲಾ ಲಗ್ನದಲ್ಲಿ ಸುಧಾಮೂರ್ತಿ ಅವರಿಂದ ಮೈಸೂರು ದಸರಾ 2018 ಕ್ಕೆ ಚಾಲನೆ ದೊರೆಯಲಿದೆ. 




SPONSORED CONTENT



No comments