Breaking News

"ಮಸೀದಿ ಇಸ್ಲಾಮಿನ ಅವಿಭಾಜ್ಯ ಅಂಗವಲ್ಲ" ಎಂಬ 1994 ರ ತೀರ್ಪನ್ನು ಎತ್ತಿಹಿಡಿದ ಸುಪ್ರೀಂ...!

will-ayodhya-case-go-to-a-constitution-bench

ನವದೆಹಲಿ : ಮಸೀದಿ ಇಸ್ಲಾಮಿನ ಅವಿಭಾಜ್ಯ ಅಂಗವಲ್ಲ ಎಂಬ 1994ರಲ್ಲಿ ನೀಡಿದ್ದ ತೀರ್ಪನ್ನು ಎತ್ತಿಹಿಡಿದು, ಅಯೋಧ್ಯೆ ರಾಮಮಂದಿರ ವಿವಾದವನ್ನು ವಿಸ್ತೃತ ಪೀಠಕ್ಕೆ ವರ್ಗಾವಣೆಯನ್ನು ಮಾಡಲು ನಿರಾಕರಿಸಿದೆ.  

 ಮಸೀದಿಯಲ್ಲಿ ನಮಾಜು ಮಾಡುವುದು ಇಸ್ಲಾಮಿನ ಅವಿಬಾಜ್ಯ ಭಾಗವಲ್ಲ ಎಂಬ ಹಿಂದಿನ ಸುಪ್ರೀಂ ಕೋರ್ಟ್ ನ ತೀರ್ಪನ್ನು ಮುಂದಿನ ವಿಕಾರಣೆಗಾಗಿ ಸಾಂವಿಧಾನಿಕ ಪೀಠಕ್ಕೆ ಹಸ್ತಾಂತರ ವಿಚಾರವಾಗಿ ತೀರ್ಪನ್ನು ನೀಡಿದ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಹಳೆಯ ತೀರ್ಪನ್ನು ಎತ್ತಿ ಹಿಡಿದಿದೆ. 

1994 ರ ಇಸ್ಮಾಯಿಲ್ ಫಾರೂಖಿ ತೀರ್ಪನ್ನು ಎತ್ತಿಹಿಡಿದ ಕೋರ್ಟ್, ಮಸೀದಿಯಲ್ಲೇ ನಮಾಝನ್ನು ಮಾಡಬೇಕೆಂದೇನೂ ಇಲ್ಲಾ ಮಸೀದಿಯ ಹೊರಗೂ ಮಾಡಬಹುದು. ಮಸೀದಿಯ ಸ್ಥಳಾಂತರ ಮಾಡುವುದರಿಂದ ಪ್ರಾರ್ಥನೆಗೆ ಏನೂ ತೊಂದರೆಯಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.  

ಇಂದು ನೀಡಿದ ತೀರ್ಪಿನಲ್ಲಿ ಮುಖ್ಯ ನ್ಯಾಯಮೂರ್ತಿ  ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿ ಅಶೋಕ ಭೂಷಣ್ ಹಳೆಯ ತೀರ್ಪು ಸರಿಯಾಗಿದ್ದು ಅದನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವ ಅವಶ್ಯಕತೆ ಇಲ್ಲವೆಂದು ವಾಧಿಸಿದರೆ , ನ್ಯಾಯಮೂರ್ತಿ ಅಬ್ದುಲ್ ನಜೀರ್ ಇಬ್ಬರೂ ಸಹೋದ್ಯೋಗಿಗಳ ತೀರ್ಪಿಗೆ ತನ್ನ ಸಹಮತವಿಲ್ಲ ಎಂದು ವಾದಿಸಿದರು.  





SPONSORED CONTENT



No comments