Breaking News

ಆಧಾರ್ ಮಾನ್ಯತೆ ಎತ್ತಿಹಿಡಿದ ಸುಪ್ರೀಂಕೋರ್ಟ್.

The-Supreme-Court-upholds-Aadhaar-status

ನವದೆಹಲಿ: ಬಹುನಿರೀಕ್ಷಿತ ಆಧಾರ್ ಸಿಂಧುತ್ವ ಕುರಿತಾದ ಮಹತ್ವದ ತೀರ್ಪು ಇಂದು  ಸುಪ್ರೀಂಕೋರ್ಟ್ ನ   ಪಂಚ ಸದಸ್ಯ ಪೀಠದಿಂದ ಹೊರಬಿದ್ದಿದ್ದು, ಆಧಾರ್ ಗೆ  ಸಂವಿಧಾನಿಕ ಮಾನ್ಯತೆ ದೊರೆತಿದೆ. 

ಆಧಾರ್ ಸಿಂಧುತ್ವ ಕುರಿತಂತೆ ಮಹತ್ವದ ತೀರ್ಪು ಇಂದು  ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪಂಚ ಸದಸ್ಯ ಪೀಠದಿಂದ  ಹೊರಬಂದಿದೆ. ಈ  ಮೂಲಕ  ಸರಕಾರಿ ಯೋಜನೆಗಳಿಗೆ ಆಧಾರ್ ಕಡ್ಡಾಯವಾದಂತಾಗಿದೆ. ಸರಕಾರಿ ಆಸ್ಪತ್ರೆಗಳು, ಬ್ಯಾಂಕ್ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಆಧಾರ್ ಕಡ್ಡಾಯವಲ್ಲ ಎಂದು ಸುಪ್ರೀಂ ಹೇಳಿದೆ. ಅಲ್ಲದೇ ಪಾನ್ ಕಾರ್ಡ್  ಗಳಿಗೆ ಆಧಾರ್ ಲಿಂಕ್ ಮಾಡುವುದು ಅವಶ್ಯ ಎಂದು ಹೇಳಿದೆ. 

ಆಧಾರ್ ನ ಮಾಹಿತಿಯನ್ನು ಯಾರೂ ತಿರುಚಲು ಮತ್ತು ನಕಲು ಮಾಡಲು ಸಾಧ್ಯವಿಲ್ಲ. ಆಧಾರ್ ಮಾಹಿತಿಯನ್ನು ದುರ್ಭಳಕೆ ಮಾಡಿಕೊಳ್ಳುವುದು ಕಾನೂನುರೀತಿಯ ಅಪರಾಧ. ದುರ್ಭಳಕೆಯ ಅವಕಾಶಗಳಿದ್ದರೆ ಅದನ್ನು ಸರಿಪಡಿಸಿ, ಅದರಲ್ಲಿರುವ ಲೋಪದೋಷಗಳನ್ನು ಸರಿಪಡಿಸುವಂತೆ ಕೇಂದ್ರಕ್ಕೆ ಆದೇಶ ನೀಡಿದೆ. 




SPONSORED CONTENT



No comments