ಓಟ್ ಬ್ಯಾಂಕ್ ರಾಜಕಾರಣ ಭಾರತವನ್ನು ಗೆದ್ದಲು ಹುಳುವಿನಂತೆ ತಿನ್ನುತ್ತಿದೆ- ಪ್ರಧಾನಿ ಮೋದಿ
ಭೋಪಾಲ್: ಪಂಡಿತ್ ದೀನದಯಾಳ್ ಉಪಾಧ್ಯಾಯ ಜನ್ಮದಿನದ ನಿಮಿತ್ತ ಮಧ್ಯಪ್ರದೇಶದ ಭೋಪಾಲ್ ನಲ್ಲಿ ಆಯೋಜಿಸಲಾಗಿದ್ದ ಬೃಹತ್ ರಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಕಾಂಗ್ರೆಸ್ ಕೇವಲ ಓಟ್ ಬ್ಯಾಂಕ್ ರಾಜಕಾರಣವನ್ನು ಮಾಡಲು ನಮ್ಮ ಮೇಲೆ ಆರೋಪವನ್ನು ಮಾಡುತ್ತಿದೆ. 125 ವರ್ಷಗಳಷ್ಟು ಹಳೆಯ ಪಕ್ಷ ತನ್ನ ಅಸ್ತಿತ್ವಕ್ಕಾಗಿ ಹೆಣಗಾಡುತ್ತಿದೆ ಎಂದು ಹೇಳಿದರು.
ಪಂಡಿತ್ ದೀನ್ ದಯಾಳ್ ಉಪಾಧ್ಯಾಯ, ಮಹಾತ್ಮಾ ಗಾಂಧಿ ಮತ್ತು ಲೋಹಿಯಾ ಅವರನ್ನು ಸ್ಮರಿಸುತ್ತ , ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎಂಬುದು ಕೇವಲ ಬರವಸೆಯಲ್ಲ ಅದನ್ನು ಈಡೇರಿಸಲು ನಾವು ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದ್ದೇವೆ. ಆದರೆ ಕಾಂಗ್ರೆಸ್ ಕೇವಲ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ದೇಶದಲ್ಲಿ ಈ ಓಟ್ ಬ್ಯಾಂಕ್ ರಾಜಕಾರಣವನ್ನು ಕಿತ್ತೆಸೆಯುವುದೇ ನಮ್ಮ ಗುರಿ ಎಂದು ಹೇಳಿದರು.
ಇಸ್ಲಾಮಿಕ್ ದೇಶಗಳೇ ಕಿತ್ತೆಸೆದಿರುವ ತ್ರಿವಳಿ ತಲಾಕ್ ನ್ನು ನಿಷೇಧಿಸಲು ಕಾಂಗ್ರೆಸ್ ಅಡ್ಡಿ ಮಾಡುವ ಮೂಲಕ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ೧೨೫ ವರ್ಷಗಳಷ್ಟು ಹಳೆಯ ಪಕ್ಷ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಸಣ್ಣ ಸಣ್ಣ ಪಕ್ಷಗಳೊಟ್ಟಿಗೆ ಮೈತ್ರಿ ಮಾಡಿಕೊಳ್ಳಲು ಪ್ರಯತ್ನಿಸಿದ್ದು, ಅದೂ ಕೂಡ ವಿಫಲವಾಗಿದೆ. ಇದೆಲ್ಲ ಸಾಲದು ಎಂಬಂತೆ ಈಗ ವಿದೇಶಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಹೊರಟಿದೆ, 2019 ರ ಲೋಕಸಭಾ ಚುನಾವಣೆಯಲ್ಲಿ ಅದಕ್ಕೆಲ್ಲ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
No comments