ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದೇವರಾಜ್ ಮತ್ತು ಪ್ರಜ್ವಲ್.
ಮೈಸೂರು: ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿರುವಾಗ ಅಪಘಾತವಾಗಿ ಆಸ್ಪತ್ರೆ ಸೇರಿರುವ ನಾಲ್ವರಲ್ಲಿ ದೇವರಾಜ್ ಮತ್ತು ಪ್ರಜ್ವಲ್ ಇಂದು ಸಂಜೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದರು.
ಗಾಯಗೊಂಡು ಆಸ್ಪತ್ರೆ ಸೇರಿರುವ ದರ್ಶನ ಹಾಗು ಆಂಟೋನಿ ಅವರಿಗೆ ಚಿಕಿತ್ಸೆ ಮುಂದುವರೆದಿದ್ದು, ಇನ್ನೂ ಒಂದೆರಡು ದಿನಗಳ ಚಿಕಿತ್ಸೆ ಅವಶ್ಯಕತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದೇವರಾಜ್ ಮತ್ತು ಪ್ರಜ್ವಲ್ ಮಾತನಾಡಿ ಸ್ನೇಹಿತರ ಮನೆಯಲ್ಲಿ ಊಟಮಾಡಿಕೊಂಡು ಬರುವಾಗ ಕಾರು ಸ್ಕಿಡ್ ಆಗಿ ಅಪಘಾತವಾಯಿತು ಎಂದು ತಿಳಿಸಿದರು. ಅದೃಷ್ಟವಶಾತ್ ಯಾರಿಗೂ ದೊಡ್ಡ ಮಟ್ಟದ ತೊಂದರೆಯಾಗಿಲ್ಲ, ಕೆಲದಿನಗಳು ವಿಶ್ರಾಂತಿ ತೆಗೆದುಕೊಳ್ಳಲು ವೈದ್ಯರು ತಿಳಿಸಿದ್ದಾರೆ ಎಂದು ಹೇಳಿದರು.
ದೇವರಾಜ್ ಅವರಿಗೆ ಎಡಗೈಗೆ ಸಣ್ಣ ಪ್ರಮಾಣದ ಹೊಡೆತ ಬಿದ್ದಿದೆ. ಎದೆಯ ಬಾಗದಲ್ಲಿ ಚಿಕ್ಕ ಪುಟ್ಟ ಗಾಯಗಳಾಗಿವೆ. ಪ್ರಜ್ವಲ್ ಅವರಿಗೆ ಹಣೆಯ ಮೇಲೆ ಚಿಕ್ಕ ಗಾಯವಾಗಿದ್ದು ಎಡಗೈ ಪೆಟ್ಟಾಗಿದೆ. ಬಹುತೇಕ ಚೇತರಿಸಿಕೊಂಡಿರುವ ಇವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ನಿನ್ನೆಯಂತೆಯೇ ಇಂದು ಕೂಡ ದರ್ಶನ ಅವರನ್ನು ನೋಡಲು ಆಸ್ಪತ್ರೆಯ ಬಳಿಯಲ್ಲಿ ಜನ ಜಮಾಯಿಸಿದ್ದರು. ಆದರೆ ಯಾರಿಗೂ ಅವರನ್ನು ಭೇಟಿಯಾಗಲು ಅವಕಾಶವನ್ನು ಸಿಗಲಿಲ್ಲ. ದರ್ಶನ ಜೊತೆಯಲ್ಲಿ ಸೆಲ್ಪಿತೆಗೆದುಕೊಳ್ಳಲು ಬರುವುದರಿಂದ ತೊಂದರೆಯಾಗುತ್ತದೆ ಎಂದು ಅವರ ಕೊಠಡಿಯ ಸುತ್ತಮ್ಮುತ್ತ ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿದೆ. ಆಸ್ಪತ್ರೆಯ ಮುಂಬಾಗದಲ್ಲಿಯೂ ಪೊಲೀಸ್ ಬಿಗಿಭಧ್ರತೆಯನ್ನು ಒದಗಿಸಲಾಗಿದೆ.
No comments