ದರ್ಶನಗೆ ಆಕ್ಸಿಡೆಂಟ್ ಆಗಿದ್ದೆಗೆ..? ಈಗ ಹೇಗಿದ್ದಾರೆ..?
ಮೈಸೂರು: ರವಿವಾರ ನಟ ದರ್ಶನ ಅವರು ಸ್ನೇಹಿತರೊಂದಿಗೆ ಮೈಸೂರಿಗೆ ಆಗಮಿಸಿದ್ದರು. ಅಲ್ಲಿ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಅವರು ಮೈಸೂರಿನ ಮ್ರಘಾಲಯದ ಕೆಲ ಪ್ರಾಣಿಗಳನ್ನೂ ದತ್ತು ಪಡೆದುಕೊಂಡರು. ಅರಮನೆಯಲ್ಲಿ ದಸರಾ ಮೆರವಣಿಗೆಯ ಆನೆಗಳೊಂದಿಗೆ ಕೆಲ ಸಮಯ ಕಳೆದು, ಮಾವುತರೊಂದಿಗೆ ಊಟವನ್ನು ಮಾಡಿಕೊಂಡು ಬಂದಿದ್ದರು. ಇನ್ನೂ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿಕೊಂಡು ತಡರಾತ್ರಿಯಲ್ಲಿ ನಟ ದೇವರಾಜ್ , ಪ್ರಜ್ವಲ್ ದೇವರಾಜ್ ಮತ್ತು ಗೆಳೆಯ ಆಂಟೋನಿಯೊಂದಿಗೆ ಕಾರ್ ಡ್ರೈವ್ ಮಾಡಿಕೊಂಡು ಮೈಸೂರಿನಿಂದ ಬೆಂಗಳೂರಿಗೆ ಹೊರಟಿದ್ದರು. ಬೆಳಗಿನ ಜಾವ 3 ರ ಸುಮಾರಿಗೆ ಜೆಎಸ್ ಎಸ್ ಅರ್ಬನ್ ಹಾತ್ ಬಳಿಯ ತಿರುವಿನಲ್ಲಿ ನಿಯಂತ್ರಣ ತಪ್ಪಿ ರಸ್ತೆಯ ಡಿವೈಡರ್ ಗೆ ಹೊಡೆದು ಕಾರು ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ.
ತಕ್ಷಣದಲ್ಲಿಯೇ ಎಲ್ಲರನ್ನೂ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ. ಅಪಗಾತದಲ್ಲಿ ದರ್ಶನ ಅವರ ಬಲಗೈ ಮುರಿದಿದ್ದು ಶಸ್ತ್ರ ಚಿಕಿತ್ಸೆ ನಡೆಸಿ ಸರಿಪಡಿಸಲಾಗಿದೆ. ದೇವರಾಜ್ ಅವರ ಕೈ ಬೆರಳು ಮುರಿದಿದ್ದು, ಎದೆ ಹಾಗು ತಲೆಯ ಭಾಗಗಳಿಗೆ ಚಿಕ್ಕ ಪುಟ್ಟ ಗಾಯಗಳಾಗಿವೆ. ಪ್ರಜ್ವಲ್ ಅವರ ಕತ್ತಿನ ಬಾಗದಲ್ಲಿ ಮತ್ತು ಆಂಟೋನಿಯವರ ಕೈ ಮತ್ತು ಕಾಲುಗಳಿಗೆ ಗಾಯಗಳಾಗಿವೆ.
ಬೆಳ್ಳಂಬೆಳಗ್ಗೆ ಕೊಲಂಬಿಯಾ ಏಷಿಯಾ ಆಸ್ಪತ್ರೆಯ ಮುಂದೆ ಅಭಿಮಾನಿಗಳು ಜಮಾಯಿಸತೊಡಗಿದ್ದಾರೆ. ಇದರಿಂದ ಎಚ್ಚೆತ್ತ ಪೊಲೀಸರು ಬಂದೋಬಸ್ತನ್ನು ಬಿಗಿ ಗೊಳಿಸಿದ್ದಾರೆ. ದರ್ಶನ ಅವರು ವಾಟ್ಸ್ ಆಪ್ ನ ಮೂಲಕ ಆಡಿಯೋ ರೆಕಾರ್ಡ್ ಮಾಡಿ "ನನ್ನ ಅನ್ನದಾತರಿಗೆ, ಅರ್ಥಾತ್ ಅಭಿಮಾನಿಗಳಿಗೆ ತಿಳಿಸುವುದೇನೆಂದರೆ ನನಗೇನು ಆಗಿಲ್ಲ ನಾಳೆ ನಾನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದೇನೆ ಆ ನಂತರ ನಿಮ್ಮೆಲ್ಲರನ್ನು ಕಾಣುತ್ತೇನೆ ದಯವಿಟ್ಟು ಯಾರೂ ಆಸ್ಪತ್ರೆಯ ಹತ್ತಿರ ಬರಬೇಡಿ ಆಸ್ಪತ್ರೆಯಲ್ಲಿರುವ ನನ್ನಿಂದ ಈತರ ರೋಗಿಗಳಿಗೆ ತೊಂದರೆಯಾಗುವುದು ಸರಿಯಲ್ಲ ದಯವಿಟ್ಟು ಶಾಂತಿಯಿಂದಿರಿ" ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ನನ್ನ ಅನ್ನದಾತರಿಗೆ ಅರ್ಥಾತ್ ನನ್ನ ಅಭಿಮಾನಿಗಳಿಗೆ ತಿಳಿಸುವುದೇನೆಂದರೆ ನನಗೆ ಏನು ಆಗಿಲ್ಲ ನಾಳೆ ನಾನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದೇನೆ ಆ ನಂತರ ನಿಮ್ಮೆಲ್ಲರನ್ನು ಕಾಣುತ್ತೇನೆ ದಯವಿಟ್ಟು ಯಾರೂ ಆಸ್ಪತ್ರೆಯ ಹತ್ತಿರ ಬರಬೇಡಿ ಆಸ್ಪತ್ರೆಯಲ್ಲಿರುವ ಬೇರೆ ರೋಗಿಗಳಿಗೆ ನನ್ನಿಂದ ತೊಂದರೆಯಾಗುವುದು ಸರಿಯಲ್ಲ ದಯಮಾಡಿ ಶಾಂತಿಯಿಂದಿರಿ’ pic.twitter.com/x0cDN0PWGJ— D Company(R)Official (@Dcompany171) September 24, 2018
No comments