Breaking News

ಬ್ಯಾಂಕಿನಲ್ಲಿ ಠೇವಣಿ ಇಟ್ಟಿದ್ದರೂ ಮನ್ನಾ ಆಗುತ್ತೆ ನಿಮ್ಮ ಸಾಲ..!

your-loan-will-be-waiver-if-you-deposit-in-the-bank

ಬೆಂಗಳೂರು : ರಾಜ್ಯ ಸರಕಾರ ಸಾಲಮನ್ನಾ ಯೋಜನೆಯಡಿಯಲ್ಲಿ ಸಹಕಾರಿ ಸಂಘಗಳಲ್ಲಿ ತೆಗೆದುಕೊಂಡ ಕೃಷಿ ಸಾಲಗಳ ಮನ್ನಾ ಯೋಜನೆಯ ನಿಯಮಗಳನ್ನು ತಿದ್ದುಪಡಿ ಮಾಡಿದೆ. ಅದರಂತೆ ಠೇವಣಿ ಇಟ್ಟಿದ್ದರೂ ಸಾಲಮನ್ನಾ ಯೋಜನೆಯ ಲಾಭ ದೊರೆಯಲಿದೆ ಎಂದು ಸಹಕಾರಿ ಸಚಿವ ಬಂಡೆಪ್ಪ ಕಾಶಂಪುರ್ ಅವರು ತಿಳಿಸಿದ್ದಾರೆ. 

ರಾಜ್ಯ ಸರಕಾರ ಒಂದು ಲಕ್ಷದ ವರೆಗೆ ಸಾಲ ಮನ್ನಾ ಘೋಷಣೆ ಮಾಡಿದ್ದರೂ, ಠೇವಣಿ ಇಟ್ಟಿರುವ ರೈತರಿಗೆ ಅವು ಸಿಗದೇ ಆ ಮೊತ್ತವನ್ನು ಸಾಲದ ಬಾಕಿಯಲ್ಲಿ ಕಳೆದು ಉಳಿದ ಮೊತ್ತವನ್ನು ಮನ್ನಾ ಮಾಡಬೇಕೆಂದು ಸರಕಾರ ಈ ಮೊದಲು ಷರತ್ತು ವಿಧಿಸಿತ್ತು. ಸದ್ಯ ಈ ಷರತ್ತನ್ನು ತಿದ್ದುಪಡಿ ಮಾಡಲಾಗಿದ್ದು, 2019 ರ ಜುಲೈ ವೇಳೆಗೆ ಸಹಕಾರಿ ಸಂಘಗಳ ಸಂಪೂರ್ಣ ಸಾಲ ಮನ್ನಾ ಆಗಲಿದೆ. ಅಲ್ಲದೇ ದಸರಾ, ದೀಪಾವಳಿಯ ಒಳಗೆ "ಋಣಮುಕ್ತ ಪ್ರಮಾಣ ಪತ್ರ" ನೀಡಲಾಗುವುದು ಎಂದು ಹೇಳಿದರು. 




SPONSORED CONTENT



No comments