ರಾಹುಲ್ ಗಾಂಧಿಯ ಕೈಲಾಸ ಮಾನಸ ಸರೋವರ ಯಾತ್ರೆಯ ಚಿತ್ರಗಳು ಪೋಟೋಶಾಪ್ ನಿಂದ ಮಾಡಲಾಗಿದೆ- ಸಚಿವ ಗಿರಿರಾಜ್
ಬಿಜೆಪಿಯ ಸಂಸದ ಮತ್ತು ಸಹಾಯಕ ಸಚಿವರು ಆದ ಗಿರಿರಾಜ್ ಸಿಂಗ್ ಅವರು, ರಾಹುಲ್ ಗಾಂಧಿಯವರ ಮಾನಸ ಸರೋವರ ಯಾತ್ರೆಯ ಚಿತ್ರಗಳು ಪೋಟೋಶಾಪ್ ನಿಂದ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ರಾಹುಲ್ ಗಾಂಧಿಯವರು ತಾನು ಕೈಲಾಸ ಮಾನಸ ಸರೋವರ ಪ್ರವಾಸದಲ್ಲಿ ಇರುವುದಾಗಿಯೂ, ಶಿವನ ದರ್ಶನ ಮಾಡಲು ತೆರಳುತ್ತಿರುವುದಾಗಿಯು ಹೇಳಿಕೊಂಡಿರುವ ಹಿನ್ನೆಲೆಯಲ್ಲಿ ಮಾನಸ ಸರೋವರ ಯಾತ್ರೆಯ ಕೆಲವು ಚಿತ್ರಗಳನ್ನು ಬಿಡುಗಡೆ ಮಾಡಿದ್ದರು.
ಇವುಗಳಲ್ಲದೆ ಇತರ ಯಾತ್ರಿಕರ ಜೊತೆಯಲ್ಲಿರುವ ಕೆಲವು ಚಿತ್ರಗಳನ್ನು ಸಹ ಬಿಟ್ಟಿದ್ದರು. ಯಾವುಗಳನ್ನು ಗಮನಿಸಿದ ಸಂಸದ ಹಾಗು ಸಚಿವ ಗಿರಿರಾಜ್ ಸಿಂಗ್ ಅವರು, "ರಾಹುಲ್ ಗಾಂಧಿ ಯಾತ್ರಿಕರೊಂದಿಗೆ ತೆಗೆಸಿಕೊಂಡಿರುವ ಚಿತ್ರದಲ್ಲಿ ರಾಹುಲ್ ಅವರು ಹಿಡಿದಿರುವ ಆದಾರ ಕೋಲಿನ ನೇರಳೆ ಕಂಡು ಬರುತ್ತಿಲ್ಲ, ಅವರ ಈ ಚಿತ್ರಗಳು ಪೋಟೋ ಶಾಪ್ ಮಾಡಲ್ಪಟ್ಟಿವೆ" ಎಂದು ಟ್ವೀಟ್ ಮಾಡಿದ್ದಾರೆ.
ಇದೇ ವೇಳೆ ಬಿಜೆಪಿಯ ಸಾಮಾಜಿಕ ಮಾಧ್ಯಮ ತಂಡದ ರಾಷ್ಟ್ರೀಯ ಪ್ರಭಾರೆಯಾಗಿರುವ ಪ್ರೀತಿ ಗಾಂಧಿಯವರು ಟ್ವೀಟ್ ಮಾಡಿ , "ರಾಹುಲ್ ನೀವು ಇಂಟರ್ ನೆಟ್ ನಿಂದ ಪೋಟೋ ಗಳನ್ನೂ ಡೌನ್ಲೋಡ್ ಮಾಡಿಕೊಂಡು ಬಿದುತ್ತಿದ್ದಿರಾ..? ಮಾನಸ ಸರೋವರ ಯಾತ್ರೆಯನ್ನು ಕೈಗೊಂಡಿದ್ದಿರಾ..? ಎಂದು ಕೇಳಿದ್ದಾರೆ.
"ರಾಹುಲ್ ಗಾಂಧಿಯವರ ಯಾತ್ರೆಯ ಪೋಟೋಗಳು ಕೇವಲ ಕೈಲಾಸ ಪರ್ವತ ಮತ್ತು ಮಾನಸ ಸರೋವರದ ಪೋಟೋ ಗಳೇ ಆಗಿವೆ. ಅದರಲ್ಲಿ ಎಲ್ಲಿಯೂ ರಾಹುಲ್ ಅವರು ಕಾಣುವುದೇ ಇಲ್ಲ, ಈ ರೀತಿಯ ಪೋಟೋಗಳನ್ನು ಯಾರು ಬೇಕಾದರೂ ಡೌನ್ಲೋಡ್ ಮಾಡಿ ಹಾಕಬಹುದಾಗಿದೆ. ಎಂದು ವ್ಯಂಗ್ಯವಾಡಿದ್ದಾರೆ.
No comments