ಅಮೆಜಾನ್ ನಿಂದ ಹಿಂದಿ ವೆಬ್ಸೈಟ್ ಗೆ ಚಾಲನೆ.
ಭಾರತದಲ್ಲಿ ಅತೀ ವೇಗವಾಗಿ ಇ-ಕಾಮರ್ಸ್ ವೆಬ್ ಸೈಟ್ ಗಳು ಬೆಳೆಯುತ್ತಿರುವುದು ಈ ಕ್ಷೇತ್ರದಲ್ಲಿ ಹೆಚ್ಚಿನ ಪೈಪೋಟಿಯನ್ನು ಏರ್ಪಡಿಸಿದೆ. ದೇಶಿಯ ಇ-ಕಾಮರ್ಸ್ ತಾಣವಾದ ಪ್ಲಿಪ್ ಕಾರ್ಟ್ ನ್ನು ಹಿಂದಿಕ್ಕುವ ಸಲುವಾಗಿ ಅಮೆಜಾನ್ ಇಂಡಿಯಾವು ದೇಶಿಯ ಭಾಷೆಗಳಲ್ಲಿ ತನ್ನ ಜಾಲತಾಣವನ್ನು ಬಿಡುಗಡೆ ಮಾಡಲು ಹೊರಟಿದೆ.
ಭಾರತದಲ್ಲಿ ತನ್ನ ವ್ಯವಹಾರವನ್ನು ಅಭಿವೃದ್ಧಿ ಪಡಿಸಿಕೊಳ್ಳಲು ಸದ್ಯ ಹಿಂದಿ ಭಾಷೆಯ ತಾಣವನ್ನು ಮತ್ತು ಮೊಬೈಲ್ ಆಪ್ ಗಳನ್ನು ಬಿಡುಗಡೆ ಮಾಡುವ ಮೂಲಕ ತನ್ನತ್ತ ಸೆಳೆಯಲು ಹೊರಟಿದೆ. ದೇಶಿಯ ಮಾರುಕಟ್ಟೆಯಲ್ಲಿ ಪ್ಲಿಪ್ ಕಾರ್ಟ್, ಸ್ನ್ಯಾಪ್ ಡೀಲ್ , ಪ್ಲಿಪ್ ಕಾರ್ಟ್ ಗಳು ಸೇರಿದಂತೆ ಭಾರತದಲ್ಲಿ ಜನಪ್ರಿಯತೆ ಹೊಂದಿರುವ ಯಾವುದೇ ಇ-ಕಾಮರ್ಸ್ ಸೈಟಗಳು ಸ್ಥಳೀಯ ಭಾಷೆಗಳಲ್ಲಿ ವೆಬ್ ಸೈಟ ಹೊಂದಿಲ್ಲ. ಆದ್ದರಿಂದ ಈಗಾಗಲೇ ಜನಪ್ರಿಯತೆ ಹೊಂದಿರುವ ವೆಬ್ ಸೈಟಗಳು ಸ್ವಲ್ಪ ಮಟ್ಟಿನ ಹಿನ್ನಡೆಯನ್ನು ಅನುಭವಿಸುವ ಸಾಧ್ಯತೆಗಳು ಕಂಡುಬರುತ್ತಿವೆ. ಅಮೆಜಾನ್ ಇಂಡಿಯಾ ಸ್ಥಳೀಯ ಭಾಷೆಗಳಲ್ಲಿ ವೆಬ್ ಸೈಟ ಮತ್ತು ಮೊಬೈಲ್ ಆಪ್ ಬಿಡುಗಡೆ ಮಾಡುವ ಮೂಲಕ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳಲು ಹೊರಟಿದೆ. ಇದು ಎಷ್ಟರ ಮಟ್ಟಿಗೆ ಉಪಯೋಗವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
No comments