ಕೊಲ್ಕತ್ತದ 40 ಹಳೆಯ ಮಾಜೆರ್ ಹಾಟ್ ಮೇಲ್ಸೇತುವೆ ಕುಸಿತ
ಕಲ್ಕತ್ತಾ : ಇಂದು ಮದ್ಯಾಹ್ನ 4.45 ರ ಸುಮಾರಿಗೆ ದಕ್ಷಿಣ ಕೊಲ್ಕತ್ತಾದ ಆಲಿಪೋರ್ ನ ಮಾಜೆರ್ ಹಾಟ್ ಎಂಬ 40 ವರ್ಷ ಹಳೆಯದಾದ ಮೇಲ್ಸೇತುವೆ ಕುಸಿದ ಘಟನೆ ಸಭಾವಿಸಿದೆ. ಸೇತುವೆಯ ಅಡಿಯಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ನಡೆದಿದ್ದು, 25 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಘಟನೆಯು ಸುಮಾರುನ್ 4.45 ಗಂಟೆಗೆ ಸಂಭವಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕದಳ, ಏನ್.ಡಿ.ಆರ್.ಎಪ್. ತಂಡ, ಆಂಬುಲೆನ್ಸ್ ಮತ್ತು ಹತ್ತಿರದ ಪೋಲಿಸ್ ತಂಡಗಳು ಬಾಗಿಯಾಗಿವೆ. ಸಚಿವ ಪಿರಾದ್ ಹಕೀಮ್ ಮಾತನಾಡಿ ಸುಮಾರು ೪೦ ವರ್ಷಗಳಷ್ಟು ಹಳೆಯದಾದ ಮೇಲ್ಸೇತುವೆ ಕುಸಿದಿದೆ. ಅಡಿಯಲ್ಲಿ ಸಿಲುಕಿರುವವರ ರಕ್ಷಣೆ ನಡೆಸಲಾಗುತ್ತಿದೆ ಅಲ್ಲದೆ ಕುಸಿಯಲು ಕಾರಣವೇನು ಎಂಬ ಬಗ್ಗೆ ತಜ್ಞರ ತಂಡ ವಿಕ್ಷಿಸುತ್ತದೆ ಎಂದು ಹೇಳಿದರು.
ಡಾರ್ಜಿಲಿಂಗ್ ನಲ್ಲಿರುವ ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಲ್ಕತ್ತಾಕ್ಕೆ ವಾಪಾಸಾಗಲು ಪ್ರಯತ್ನಿಸಿದರಾದರೂ ಸಂಜೆ ಯಾವುದೇ ವಿಶೇಷ ವಿಮಾನದ ಲಭ್ಯತೆ ಇಲ್ಲದೆ ಬರಲು ಸಾಧ್ಯವಾಗಲಿಲ್ಲ, ಆದರೆ ಘಟನಾ ಸ್ಥಳದ ಕ್ಷಣ ಕ್ಷಣದ ಮಾಹಿತಿಯನ್ನು ತರಿಸಿಕೊಲ್ಲಲಾಗುತ್ತಿದ್ದು, ಪ್ರಕರಣ ಕುರಿತು ತನಿಕೆಗೆ ಆದೇಶಿಸಲಾಗಿದೆ ಎಂದು ಮಮತಾ ಹೇಳಿದ್ದಾರೆ.
ಸದ್ಯ ನಮ್ಮ ತಂಡದಿಂದ ರಕ್ಷಣಾ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ.ನಂತರದಲ್ಲಿ ಘಟನೆ ಕುರಿತಂತೆ ತನಿಕೆ ನಡೆಸಲಾಗುವುದು ಎಂದು ಮಮತಾ ಬ್ಯಾನರ್ಜಿ ಅವರು ತಿಳಿಸಿದ್ದಾರೆ.
No comments