Breaking News

ಇಸ್ರೇಲ್ ಮಾದರಿಯಲ್ಲಿ ಕಲ್ಲು ತೂರಾಟಗಾರರನ್ನು ಬಂಧಿಸಿದ ಭಾರತೀಯ ಸೇನೆ.

ಇಸ್ರೇಲ್ ಮಾದರಿಯಲ್ಲಿ ಕಲ್ಲು ತೂರಾಟಗಾರರನ್ನು ಬಂಧಿಸಿದ ಭಾರತೀಯ ಸೇನೆ.
ಇಸ್ರೇಲ್ ಮಾದರಿಯಲ್ಲಿ ಕಲ್ಲು ತೂರಾಟಗಾರರನ್ನು ಬಂಧಿಸಿದ ಭಾರತೀಯ ಸೇನೆ.

ಶ್ರೀನಗರ: ಕಣಿವೆ ರಾಜ್ಯದಲ್ಲಿ ಮೊನ್ನೆ ಶುಕ್ರವಾರ ಏಕಾಏಕಿ 100 ಮಂದಿ ಕಲ್ಲು ತೂರಾಟಗಾರರ ಪಡೆ ಸೇನೆಯ ಮೇಲೆ ಕಲ್ಲು ತೂರಲು ಪ್ರಾರಂಭಿಸಿತು. ಇಸ್ರೇಲ್ ಮಾದರಿಯಲ್ಲಿ ಅವರ ನಾಲ್ವರು ಮುಕಂಡರನ್ನು ಭಾರತೀಯ ಸೇನೆ ಮತ್ತು ಕಾಶ್ಮೀರಿ ಪೋಲಿಸ್ ಪಡೆ ಬಂಧಿಸುವ ಮೂಲಕ ಅತಂಕವಾದಿಗಳಿಗೆ ಭಯ ಉಂಟುಮಾಡಿದೆ.

ಭಾರತೀಯ ಸೇನೆ ಮತ್ತು ಕಾಶ್ಮೀರಿ ಪೋಲಿಸ್ ಪಡೆಯ ನುರಿತ ಕೆಲವು ಅಧಿಕಾರಿಗಳು ವೇಷ ಬದಲಿಸಿ ಕಲ್ಲು ತೂರಾಟಗಾರರ ಗುಂಪಿನಲ್ಲಿ ಸೇರಿಕೊಂಡರು. ಉಳಿದವರ ಜೊತೆಯಲ್ಲಿಯೇ ಭದ್ರತಾ ಪಡೆಗಳ ಮೇಲೆ ಕಲ್ಲನ್ನು ತುರಿದ್ದಾರೆ. ಸಮಯವನ್ನು ನೋಡಿಕೊಂಡು ಏಕಾಏಕಿ ದಾಳಿ ಮಾಡಿ ನಾಲ್ವರು ಕಲ್ಲುತೂರಾಟಗಾರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವೇಷ ಮರೆಸಿ ತಮ್ಮ ಜೊತೆಗೇ ಇದ್ದು, ಕಲ್ಲು ತೂರಿರುವುದರಿಂದ ಅವರನ್ನು ಗುರುತಿಸದ ಕಲ್ಲು ತೂರಾಟಗಾರರ ನಾಯಕರು ಈಗ ಸೇನೆಯ ವಶದಲ್ಲಿದ್ದಾರೆ.

ಈ ಹಿಂದೆಯೂ ಈ ರೀತಿಯ ಕಾರ್ಯಾಚರಣೆ ನಡೆದಿದ್ದರೂ, ಸೈನಿಕರು ಕಲ್ಲು ತೂರಾಟಗಾರರಿಗೆ ಸಿಕ್ಕಿ ಪ್ರಾಣಾಪಾಯದ ಸಂಭವ ಇರುವುದನ್ನು ಮನಗಂಡು ಸೇನೆ ಈ ಆಪರೇಶನ್ ನ್ನು ಸದ್ಯ ಪ್ರಯೋಗಿಸಿರಲಿಲ್ಲ. ಆದರೆ ಈಗ ಯಶಸ್ವಿಯಾಗಿ ಪ್ರಯೋಗಿಸಿ ನಾಲ್ವರನ್ನು ಬಂಧಿಸಿರುವುದು ಹೆಮ್ಮೆಯ ವಿಷಯವಾಗಿದೆ. 




SPONSORED CONTENT



No comments