ಟಾಪ್ ಎಂಡ್ ಫೋನ್ ಗಳಿಗೂ ಸೆಡ್ಡು ಹೊಡೆಯುವ ರೆಡ್ ಮಿ 6 ಪ್ರೋ ಸ್ಮಾರ್ಟ್ ಫೋನ್..!
ರೆಡ್ ಮೀ 6 ಪ್ರೋ |
ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಟಿ ಮಾಡಿರುವ ರೆಡ್ ಮಿ ಸರಣಿಯ ಫೋನುಗಳು ಟಾಪ್ ಎಂಡ್ ಫೋನ್ ಗಳ ಜೊತೆಯಲ್ಲಿ ಪೈಪೋಟಿ ನೀಡುವ ಮಟ್ಟಿಗೆ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿದೆ. ಮಾರುಕಟ್ಟೆಯಲ್ಲಿ ಹೊಸ ಮಾದರಿಯ ನೋಚ್ ಡಿಸ್ ಪ್ಲೇ ಹೊಂದಿರುವ ಫೋನ್ ಇದಾಗಿದ್ದು, ಈ ಸರಣಿಯಲ್ಲಿಯೇ ಇಲ್ಲಿಯವರೆಗೆ ಬಿಡುಗಡೆಯಾದ ಟಾಪ್ ಎಂಡ್ ಫೋನ್ ಇದಾಗಿದೆ.
ಭಾರತದಲ್ಲಿ ಶೋಮಿ ಕಂಪನಿಯು ತನ್ನ ಒಂದೇ ಮಾದರಿಯ 3 ಫೋನನ್ನು ಬಿಡುಗಡೆ ಮಾಡಲು ಹೊರಟಿದ್ದು, ವಿಶೇಷವಾಗಿ ರೆಡ್ ಮಿ 6 ಪ್ರೋ ಅಮೆಜಾನ್ ನಲ್ಲಿ ಸೆಪ್ಟೆಂಬರ್ 11 ರಿಂದ ಏಕ್ಷ್ ಕ್ಲುಸಿವ್ ಆಗಿ ಲಬ್ಯವಾಗಲಿದೆ.
5. 84 ಇಂಚಿನ FHD+ ಡಿಸ್ ಪ್ಲೇ
ರೆಡ್ ಮೀ 6 ಪ್ರೋ ಫೋನಿನಲ್ಲಿ 5. 84 ಇಂಚಿನ ಫುಲ್ ಹೆಚ್ ಡಿ ಹೊಂದಿರುವ ಸ್ಕ್ರೀನ್ ಲಭ್ಯವಿದೆ. ಅಲ್ಲದೆ 1080 X 2280 ಪಿಕ್ಸೆಲ್ ರೆಸಲ್ಯೂಶನ್ ಹೊಂದಿರುವ ಡಿಸ್ ಪ್ಲೇ ಲಭ್ಯವಿದೆ. ಇವುಗಳಲ್ಲದೆ ಪ್ರಿಮಿಯಮ್ ಕ್ವಾಲಿಟಿಯ ಅಲ್ಯೂಮಿನಿಯಂನ ಬಾಡಿಯನ್ನು ನೀಡಿದ್ದಾರೆ. ವಿಶೇಷವಾಗಿ ನೋಚ್ ಡಿಸ್ ಪ್ಲೇ ಸಿಸ್ಟಮ್ ನ್ನು ನಿಡಲಾಗಿದ್ದು, ಅದನ್ನು ಬೇಡವೆಂದರೆ ಹೈಡ್ ಮಾಡುವ ವ್ಯವಸ್ತೆಯೊಂದಿಗೆ ನೀಡಲಾಗಿದೆ.
ಪ್ರೋಸೆಸರ್
ರೆಡ್ ಮೀ 6 ಪ್ರೋನಲ್ಲಿ 2 GHz ವೇಗದಲ್ಲಿ ಆಕ್ಟಾ ಕೋರ್ ಪ್ರೋಸೆಸರ್ ಲಭ್ಯವಿದ್ದು, ಸ್ನಾಪ್ ಡ್ರಾಗನ್ 623 ಪ್ರೋಸೆಸರ್ ಅಳವಡಿಸಲಾಗಿದೆ. ಆಂಡ್ರಾಯ್ಡ್ 8.1 ಒರಿಯೋದಲ್ಲಿ ಕಾರ್ಯನಿರ್ವಹಿಸಲಿದೆ.
ಕೆಮರಾ
12 ಮೆಗಾ ಪಿಕ್ಸೆಲ್ ಮತ್ತು 5 ಮೆಗಾ ಪಿಕ್ಸೆಲ್ ಹೊಂದಿರುವ ಎರಡು ಕೆಮರಾಗಳನ್ನು ಹಿಂಭಾಗದಲ್ಲಿ ಕಾಣಬಹುದಾಗಿದೆ. ಅಲ್ಲದೇ ಸೇಲ್ಪಿಗಾಗಿ 5 ಮೆಗಾ ಪಿಕ್ಸೆಲ್ ಹೊಂದಿರುವ ಕೆಮರಾವನ್ನು ಅಳವಡಿಸಲಾಗಿದೆ. ಈ ಬೆಲೆಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರ ಫೋನುಗಳಿಗೆ ಹೋಲಿಸಿದರೆ ಸೇಲ್ಪಿ ಕೆಮರಾ ಸ್ವಲ್ಪ ಕಡಿಮೆಯೇ ಆಯಿತು ಎಂದೆನಿಸದೇ ಇರದು. ರೆಡ್ ಮೀ 6 ಪ್ರೋನಲ್ಲಿ ವಿಶೇಷವಾಗಿ AI ಪೇಸ್ ಆನ್ ಲಾಕ್ ಸಿಸ್ಟಮ್ ಅಳವಡಿಸಲಾಗಿದೆ.
ಇತರೆ ವಿಶೇಷತೆಗಳು
ರೆಡ್ ಮೀ 6 ಪ್ರೋನಲ್ಲಿ ಎರಡು ನ್ಯಾನೋ ಸಿಮ್ ಮತ್ತು ಒಂದು ಮೈಕ್ರೋ ಎಸ್ ಡಿ ಕಾರ್ಡ್ ಗಳಿಗೆ ಸೇರಿ ಒಂದು ಪೋರ್ಟ್ ಮಾಡಲಾಗಿದೆ. ಇದರಲ್ಲಿ ಪಿಂಗರ್ ಪ್ರಿಂಟ್ ಅನ್ ಲಾಕ್ ಸಿಸ್ಟಮ್ ಅಳವಡಿಸಲಾಗಿದೆ. ಅಲ್ಲದೆ ಪೇಸ್ ಅನ್ ಲಾಕ್ ಅಂದರೆ ಮುಖದ ಮುಂದೆ ಹಿಡಿಯುವ ಮೂಲಕ ಅನ್ ಲಾಕ್ ಮಾಡುವ ಸಿಸ್ಟಮ್ ಇದೆ. ಅವೆರಡು ಅನ್ ಲಾಕ್ ಸಿಸ್ಟಮ್ ಗಳು ಅತೀ ವೇಗವಾಗಿದೆ. ಅಲ್ಲದೇ ಇದರಲ್ಲಿ 4000 mAh ದೊಡ್ಡ ಸಾಮರ್ಥ್ಯದ ಬ್ಯಾಟರಿಯನ್ನು ನೀಡಿದ್ದು, ಸಾಮಾನ್ಯ ಬಳಕೆದಾರರಿಗೆ ಎರಡು ದಿನ ಪವರನ್ನು ಉಳಿಸಿಕೊಳ್ಳುತ್ತದೆ ಮತ್ತು ಹೆಚ್ಚಿನ ಬಳಕೆದಾರರಿಗೆ ಒಂದು ದಿನದ ಪವರ್ ಉಳಿಯುತ್ತದೆ. ರೆಡ್ ಮೀ 6 ಪ್ರೋ ಸ್ಮಾರ್ಟ್ ಫೋನ್ ಬ್ಲಾಕ್, ಗೋಲ್ಡ್, ರೆಡ್ ಮತ್ತು ಬ್ಲೂ ಎಂಬ ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ.
ರೆಡ್ ಮೀ 6 ಪ್ರೋನ ಬೆಲೆ
ಈ ಫೋನ್ ಬಜೆಟ್ ಬೆಲೆಯಲ್ಲಿ ಉತ್ತಮವಾದ ಸ್ಮಾರ್ಟ್ ಫೋನ್ ಆಗಿದೆ. ಇದರಲ್ಲಿ ಎರಡು ವಿಧಗಳನ್ನಾಗಿ ಬಿಡುಗಡೆ ಮಾಡುತ್ತಿದೆ. ಮೊದಲನೆಯದು 3 GB RAM ಹೊಂದಿರುವ ಫೋನ್ 32 GB ಆಂತರಿಕ ಮೆಮೊರಿ ಯನ್ನು ಹೊಂದಿದೆ. ಅಲ್ಲದೆ 256 GB ವರೆಗೆ ಮೈಕ್ರೋ ಎಸ್ಡಿ ಕಾರ್ಡನ್ನು ಹಾಕುವ ಮೂಲಕ ಹೆಚ್ಚಿಸಿಕೊಳ್ಳಬಹುದು. ಅಲ್ಲದೇ ಇದರ ಬೆಲೆ ಕೇವಲ 10,999/- ಆಗಿದೆ. ಇನ್ನು 4 GB RAM ಹೊಂದಿರುವ ಫೋನ್ 64 GB ಆಂತರಿಕ ಮೆಮೊರಿ ಯನ್ನು ಹೊಂದಿದೆ. ಇದರ ಬೆಲೆ ಕೇವಲ 12,999/-ಆಗಿದೆ.
ರೆಡ್ ಮೀ 6 ಪ್ರೋನ ಒಂದು ಉತ್ತಮ ಸ್ಮಾರ್ಟ್ ಫೋನ್ ಆಗಿದ್ದು, ಮೆಟಲ್ ನಿಂದ ಕೂಡಿದ ಸಂಪೂರ್ಣ ದೇಹವನ್ನು ಹೊಂದಿದೆ. ಅಲ್ಲದೆ ಉತ್ತಮ ಪಿನಿಶಿಂಗ್, ಮತ್ತು ಸುಲಭವಾಗಿ ಕೈಯಲ್ಲಿ ಹಿಡಿಯಬಹುದಾದ ವಿನ್ಯಾಸವನ್ನು ನೀಡಲಾಗಿದೆ. ಇದು ನೀಡುವ ಹಣಕ್ಕೆ ಉತ್ತಮ ಫೋನ್ ಎಂಬುದು ನಮ್ಮ ಅಭಿಪ್ರಾಯ. ಈ ಫೋನ್ ಎಕ್ಸ್ ಕ್ಲೂಸಿವ್ ಆಗಿ ಅಮೇಜಾನ್ ನಲ್ಲಿ ಸೆಪ್ಟೆಂಬರ್ 11 ರಂದು 12 ಗಂಟೆಗೆ ಬಿಡುಗಡೆಯಾಗಲಿದೆ.
ರೆಡ್ ಮೀ 6 ಪ್ರೋ ಸ್ಮಾರ್ಟ್ ಫೋನನ್ನು ಕೊಳ್ಳಲು ಇಲ್ಲಿ ನೀಡಿರುವ ಬಟನ್ ಮೇಲೆ ಕ್ಲಿಕ್ ಮಾಡುವ ಮೂಲಕ ಅಮೇಜಾನ್ ವೆಬ್ ಪೇಜಿಗೆ ಹೋಗಬಹುದು....
No comments