ಅತ್ಯಾಚಾರವನ್ನು ಸಹಿಸಲು ಸಾಧ್ಯವಿಲ್ಲ - ಪ್ರಧಾನಿ ಮೋದಿ
ಅತ್ಯಾಚಾರ ವಿರುದ್ಧ ಪ್ರಬಲ ಸಂದೇಶ ನೀಡಿದ ಪ್ರಧಾನಿ ನರೇಂದ್ರ ಮೋದಿ |
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿಯವರು ಅತ್ಯಾಚಾರವನ್ನು ಸಹಿಸಲು ಸಾಧ್ಯವಿಲ್ಲ. ಮಹಿಳೆಯರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಹೇಳಿದಾರೆ.
ತಿಂಗಳ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿಬಾನುವಾರ ಮಾತನಾಡಿದ ಪ್ರಧಾನಿ ಅವರು ರಕ್ಷಾ ಬಂಧನದ ಪ್ರಯುಕ್ತ ಮಹಿಳೆಯರಿಗೆ ಶುಭಾಷಯ ಕೋರಿದರು. ಇದೇ ವೇಳೆ ಮಾತನಾಡಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಂಸತ್ತಿನಲ್ಲಿ ಅಂಗಿಕರಿಸಿರುವ ಕಾನೂನಿನ ಅಡಿಯಲ್ಲಿ ಈಗ ಘಟನೆ ನಡೆದ ಕೆಲವೇ ದಿನಗಳಲ್ಲಿ ಶಿಕ್ಷೆ ವಿಧಿಸಲಾಗುತಿದೆ ಎಂದು ಹೇಳಿದರು.
ತ್ರಿವಳಿ ತಲಾಖ್ ಕುರಿತು ಮಾತನಾಡಿದ ಮೋದಿಯವರು, ತ್ರಿವಳಿ ತಲಾಖ್ ಕುರಿತ ಮಸೂದೆ ಲೋಕಸಭೆಯಲ್ಲಿ ಅಂಗಿಕಾರಗೊಂದಿದ್ದರು ರಾಜ್ಯ ಸಭೆಯಲ್ಲಿ ಈ ವರೆಗೂ ಅಂಗಿಕಾರಗೊಂಡಿಲ್ಲ, ಆದರೆ ಮುಸ್ಲಿಮ್ ಮಹಿಳೆಯರಿಗೆ ಒಂದು ಭರವಸೆಯನ್ನು ನಾನು ನೀಡಬಲ್ಲೆ, ಇಡಿ ದೇಶ ನೋಮ್ಮೊಂದಿಗಿದೆ. ಶೀಘ್ರವೇ ಮುಸ್ಲಿಮ್ ಮಹಿಳೆಯರಿಗೆ ನ್ಯಾಯ ದೊರೆಯಲಿದೆ ಎಂದಿದ್ದಾರೆ.
ದೇಶ ಕಂಡ ಅಪ್ರತಿಮ ಎಂಜಿನಿಯರ್ ಸರ್ ಎಂ ವಿಶ್ವೇಶ್ವರಯ್ಯ ಅವರನ್ನು "ವಜ್ರ" ಎಂದು ಮೋದಿ ಬಣ್ಣಿಸಿದ್ದಾರೆ. ಅವರು ಕಟ್ಟಿದ ಕೃಷ್ಣ ರಾಜ ಸಾಗರ ಅಣೆಕಟ್ಟಿನಿಂದ ಲಕ್ಷಾಂತರ ರೈತರು ಮತ್ತು ಜನ ಸಾಮಾನ್ಯರು ಈಗಲೂ ಲಾಭ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.
SPONSORED CONTENT
No comments