ಎರಡು ವರ್ಷಗಳ ನಂತರ ರಾಕಿಂಗ್ ಸ್ಟಾರ್ ಯಶ್ ಗಡ್ಡಕ್ಕೆ ಬಿತ್ತು ಕತ್ತರಿ ..!
ಎರಡು ವರ್ಷಗಳ ನಂತರ ರಾಕಿಂಗ್ ಸ್ಟಾರ್ ಯಶ್ ತಮ್ಮ ಉದ್ದನೆಯ ಕೂದಲು ಮತ್ತು ಗಡ್ಡಕ್ಕೆ ಕತ್ತರಿಯನ್ನು ಹಾಕಿದ್ದಾರೆ.
ಯಶ್ ಅವರು ತಮ್ಮ ಕೆಜಿಎಪ್ ಚಿತ್ರಕ್ಕಾಗಿ ಸುಮಾರು ಎರಡು ವರ್ಷಗಳಿಂದ ಉದ್ದನೆಯ ತಲೆಕೂದಲು ಮತ್ತು ಗಡ್ಡವನ್ನು ಬೆಳೆಸಿಕೊಂಡಿದ್ದರು. ತಮ್ಮ ನಟನ ಹೊಸ ಲುಕ್ ನೋಡಿ ಅಭಿಮಾನಿಗಳು ಪಿದಾ ಆಗಿದ್ದರು. ಆದರೆ ಈಗ ತಲೆ ಕೂದಲು ಮತ್ತು ಗಡ್ಡವನ್ನು ತೆಗೆಯುತ್ತಿರುವ ವಿಡಿಯೋವನ್ನು ರಾಧಿಕಾ ಪಂಡಿತ್ ಅವರು ತಮ್ಮ ಫೆಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದರು.
ಈ ವಿಡಿಯೋದಲ್ಲಿ ರಾಧಿಕಾ ಈಗ ನನಗೆ ತುಂಬಾ ಕುಷಿಯಾಗಿದೆ. ನನ್ನ ಜೊತೆ ನೀವೆಲ್ಲರೂ ಕಾಯುತ್ತಿರುವ ಉದ್ದನೆಯ ಕೂದಲು ಮತ್ತು ಗಡ್ಡಕ್ಕೆ ಮುಕ್ತಿ ಸಿಗುತ್ತಿದೆ. ನನ್ನ ಗಂಡ ಹೇಗೆ ಕಾಣುತ್ತಿದ್ದರು ಎಂದು ನನಗೆ ಮರೆತೇಹೋಗಿತ್ತು. ಸದ್ಯ ಕಿರಾತಕ ತಂಡಕ್ಕೆ ಧನ್ಯವಾದ ಹೇಳುತ್ತಿದ್ದೇನೆ. ಅವರಿಂದಾಗಿ ಯಶ್ ತಮ್ಮ ಉದ್ದನೆಯ ಕೂದಲು ಮತ್ತು ಗಡ್ಡವನ್ನು ತೆಗೆಯುತ್ತಿದ್ದಾರೆ ಎಂದು ಹೇಳಿದರು.
ಯಶ್ ಮಾತನಾಡಿ ನನಗೆ ನನ್ನ ಗಡ್ಡ ತೆಗೆಯಲು ಇಷ್ಟವಿರಲಿಲ್ಲ ಆದರೆ ನನ್ನ ಗಡ್ಡ ಬೇರೆಯವರಿಗೆ ಇಷ್ಟವಿಲ್ಲ ಹಾಗಾಗಿ ನಾನು ಗಡ್ಡ ತೆಗೆಯುತ್ತಿದ್ದೇನೆ. ಗಡ್ಡ ಇರಲಿ ಎಂದು ನಿರ್ದೇಶಕರ ಹತ್ತಿರ ಮನವಿ ಮಾಡಿಕೊಂಡೆ ಆದರೆ ಅವರು ಒಪ್ಪಲಿಲ್ಲ. ನಾನು ಗಡ್ಡ ತೆಗೆಯುತ್ತಿರುವುದರಿಂದ ಎಲ್ಲರಿಗೂ ಖುಷಿಯಾಗಿದೆ ಎಂದರು.
SPONSORED CONTENT
No comments