ಕೇಂದ್ರದಿಂದ 100 ಕೋಟಿ ನೆರವು ಕೇಳಿದ ಕುಮಾರಸ್ವಾಮಿ
![]() |
ಮುಖ್ಯ ಮಂತ್ರಿಗಳು ಹೆಚ್ ಡಿ ಕುಮಾರಸ್ವಾಮಿ |
ಪ್ರವಾಹ ಪೀಡಿತ ಕೊಡಗು ಜಿಲ್ಲೆಯ ಜನರ ಪುನರ್ವಸತಿ ಮತ್ತು ಪರಿಹಾರ ಕಾಮಗಾರಿಗಾಗಿ 100 ಕೋಟಿ ರೂಪಾಯಿಯ ನೆರವನ್ನು ನೀಡುವಂತೆ ಕೇಂದ್ರ ಸರಕಾರವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಕೇಳಿದ್ದಾರೆ.
ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನ ಮಂತ್ರಿಯವರು ಕೇರಳ ರಾಜ್ಯಕ್ಕೆ 500 ಕೋಟಿ ರೂಪಾಯಿಯ ನೆರವನ್ನು ಘೋಷಿಸಿದ್ದಾರೆ. ನಾವು ಕೊಡಗಿಗೆ ಕನಿಷ್ಟ 100 ಕೋಟಿಯನ್ನಾದರೂ ಬಿಡುಗಡೆ ಮಾಡಬೇಕೆಂದು ಕೇಳಿಕೊಳ್ಳುತ್ತೇವೆ ಹೇಳಿದರು.
ಪ್ರವಾಹ ಪರಿಸ್ಥಿತಿಯ ಕುರಿತು ವೈಮಾನಿಕ ಸಮೀಕ್ಷೆಯನ್ನು ನಡೆಸಲಾಗಿದ್ದು, ಇದುವರೆಗೆ 12 ಮಂದಿ ಮೃತಪಟ್ಟಿದ್ದಾರೆ. 845ಮನೆಗಳು ಹಾನಿಗೊಳಗಾಗಿದ್ದು, ಅವುಗಳಲ್ಲಿ 773 ಮನೆಗಳು ಭಾಗಶಃ ಹಾಳಾಗಿವೆ ಎಂದು ತಿಳಿಸಿದರು.
ಕೊಡಗಿನಲ್ಲಿ ಮನೆಗಳು, ರಸ್ತೆಗಳು, ವಿದ್ಯುತ್ ಸೇರಿದಂತೆ ಮೂಲಭೂತ ಸೌಕರ್ಯಗಳು ನಾಶವಾಗಿದ್ದು, ಅವುಗಳ ಪುನರ್ ರ್ನಿರ್ಮಾಣ ಮಾಡುವುದು ಸರಕಾರಕ್ಕೆ ಸವಾಲಿನ ಸಂಗತಿಯಾಗಿದೆ ಎಂಬುದು ಇಲ್ಲಿ ಗಮನಿಸ ಬೇಕಾದ ವಿಚಾರವಾಗಿದೆ.
No comments