ಏಷ್ಯನ್ ಕ್ರೀಡಾಕೂಟ: ಚಿನ್ನ ಗೆದ್ದು ಇತಿಹಾಸ ಬರೆದ ಮಹಿಳಾ ಕುಸ್ತಿಪಟು ವಿನೇಶ್ ಪೋಗಟ್
![]() |
ವಿನೇಶ್ ಪೋಗಟ್ ಜಯಗಳಿಸಿದ ಕ್ಷಣ |
ಇಂಡೋನೇಷಿಯಾದಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಪೋಗಟ್ ಚಿನ್ನ ಗೆಲ್ಲುವ ಮೂಲಕ ಮೊದಲ ಬಾರಿಗೆ ಭಾರತ ಏಷ್ಯನ್ ಕ್ರೀಡಾಕೂಟದ ಈ ವಿಭಾಗದಲ್ಲಿ ಚಿನ್ನ ಗೆದ್ದ ಸಾಧನೆಯನ್ನು ಮಾಡಿದ್ದಾರೆ.
ಏಷ್ಯನ್ ಕ್ರಿಡಾಕೂಟದಲ್ಲಿ ಮಹಿಳೆಯರ ಪ್ರಿಸ್ಟೈಲ್ 50 ಕೆಜಿ ಕಿಸ್ತಿ ವಿಭಾಗದಲ್ಲಿ ಜಪಾನಿನ ಯೂಕಿ ಐರೀ ಅವರನ್ನು ಸೋಲಿಸುವ ಮೂಲಕ ಚಿನ್ನವನ್ನು ಮುಡಿಗೇರಿಸಿಕೊಂಡಿದ್ದಾರೆ.
ಮೊದಲ ಸುತ್ತಿನಲ್ಲಿ ಯೂಕಿ ವಿರುದ್ದ 4-೦ ಮುನ್ನಡೆ ಸಾದಿಸಿ, ಅಂತಿಮವಾಗಿ 6-2 ಅಂತರದಲ್ಲಿ ಗೆಲುವು ಸಾದಿಸಿದ್ದಾರೆ.
ಈ ಸಾಧನೆಯ ಮೂಲಕ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗಳಿಸಿದ ಮೊದಲ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಈ ಕ್ರಿಡಾಕೂಟದಲ್ಲಿ ಭಾರತ ಒಟ್ಟಾರೆ ಆರು ಪದಕ ಗಳಿಸಿದ್ದು, ಎರಡು ಚಿನ್ನ , ಎರಡು ಬೆಳ್ಳಿ ಮತ್ತು ಎರಡು ಕಂಚಿನ ಪದಕ ಗೆದ್ದುಕೊಂಡಿದೆ.
No comments