ಮೋದಿಯವರು 46 ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹೇಳಿದ್ದೇನು?
ಉತ್ತಮ ಆಡಳಿತ ಮತ್ತು ಅಭಿವೃದ್ಧಿಯ ಲಾಭಗಳು ಪ್ರತಿಯೊಬ್ಬರನ್ನೂ ತಲುಪಬೇಕು ಅದೇ ನವಭಾರತದ ಅಡಿಪಾಯವಾಗಲಿದೆ.ಎಂದು ಪ್ರಧಾನಿ ನರೇಂದ್ರ ಮೋದಿಯವರು 46 ನೇ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದರು.
ಇಂದಿನ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಲೋಕಮಾನ್ಯ ಬಾಲಗಂಗಾಧರ್ ತಿಲಕ್ ಅವರಿಗೆ ನಮನ ಸಲ್ಲಿಸುತ್ತಾ, ಸ್ವರಾಜ್ಯ ನನ್ನ ಜನ್ಮಸಿದ್ದ ಹಕ್ಕು ಎಂಬ ಘೋಷಣೆಯನ್ನು ಕೂಗಿ ಜನರಲ್ಲಿ ಆತ್ಮವಿಶ್ವಾಸದ ಕಿಚ್ಚನ್ನು ಹಚ್ಚಿದರು. ಆದರೆ ಇಂದು ಸೂರಜ್ ನನ್ನ ಜನ್ಮ ಸಿದ್ದ ಹಕ್ಕು ಎಂದು ಹೇಳಬೇಕಿದೆ ಎಂದರು.
ಥೈಲ್ಯಾಂಡ್ ಗುಹೆಯಲ್ಲಿ ಸಿಲುಕಿದ 12 ಬಾಲಕರ ರಕ್ಷಿಸುವಲ್ಲಿ ಜನತೆ ತೋರಿದ ಜವಾಬ್ದಾರಿ, ತಾಳ್ಮೆ, ಶೂರತೆ ಮತ್ತು ಕಾರ್ಯಾಚರಣೆ ನಮಗೆ ಪಾಠ ಕಲಿಯುವಂತೆ ಎಂದು ಹೇಳಿದರು.
20 ವರ್ಷ ವಯೋಮಿತಿಯೊಳಗಿನ ವಿಶ್ವ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ನ ಮಹಿಳೆಯರ ವಿಭಾಗದ 400 ಮೀ. ಓಟದಲ್ಲಿ ಚಿನ್ನದ ಪದಕ ಗೆದ್ದ ಹಿಮಾದಾಸ್ ಅವರನ್ನು ಕೊಂಡಾಡಿದರು.
ಗಣೇಶ ಉತ್ಸವ ಹತ್ತಿರ ಬಂದ ಈ ಸಂಧರ್ಭದಲ್ಲಿ, " ಪ್ರತಿಯೊಬ್ಬರೂ ಪರಿಸರ ಸ್ನೇಹಿಯಾಗಿ ಹಬ್ಬವನ್ನು ಆಚರಿಸಿ, ಪರಿಸರ ಸಂರಕ್ಷಣೆಯನ್ನು ಮಾಡಬೇಕು." ಎಂದು ಜನತೆಗೆ ಸಂದೇಶವನ್ನು ನೀಡಿದರು.
ಇದನ್ನೂ ಓದಿರಿ : ಮೋದಿಗೆ 5 ವರ್ಷ ಸಾಕಾಗಲ್ಲಾ : ನಟಿ ಕಂಗನಾ
YOU MAY ALSO LIKE
No comments