Breaking News

ಉಗ್ರ ನಿಗ್ರಹ ಕಾರ್ಯಾಚರಣೆ ಮುಂದುವರಿಸಲು ನಿರ್ಧರಿಸಿದ ಕೇಂದ್ರ

Indian Army


ಕೇಂದ್ರ ಸರಕಾರವು ರಮ್ಜಾನ್ ಹಬ್ಬದ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರದ ಗಡಿ ಭಾಗದಲ್ಲಿ ನಾವಾಗಿಯೇ ಯಾರಮೇಲೂ ಆಕ್ರಮಣ ಮಾಡುವುದಿಲ್ಲ ಎಂದು ಕದನ ವಿರಾಮವನ್ನು ಘೋಷಿಸಿತ್ತು. ಅದರಿಂದಾಗಿ ನಮ್ಮ ಸೇನೆ ಕೈಗೊಂಡಿದ್ದ ಉಗ್ರರ ನಿಗ್ರಹ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು.

ಆದರೆ ಪಾಪಿ ಪಾಕಿಸ್ತಾನ ತನ್ನ ನೀಚ ಬುದ್ದಿಯನ್ನು ಬಿಡದೆ ಸೈನ್ಯ ಮತ್ತು ನಾಗರಿಕರ ಮೇಲೆ ಗುಂಡಿನ ದಾಳಿಯನ್ನು ನಡೆಸಿಕೊಂಡೆ ಬಂದಿತ್ತು. ಅಷ್ಟೇ ಅಲ್ಲದೆ ಭಯೋತ್ಪಾದಕರನ್ನು ಸಹ ಚೂ ಬಿಟ್ಟಿತ್ತು . ಇದರಿಂದಾಗಿ ರಮ್ಜಾನ್ ತಿಂಗಳಲ್ಲಿಯೇ ಅನೇಕ ವೀರ ಯೋಧರು ಮತ್ತು ನಾಗರಿಕರು ಪ್ರಾಣವನ್ನು ಕಳೆದುಕೊಂಡಿದ್ದರು.

Rajanth singha
ಗೃಹಸಚಿವ ರಾಜನಾಥ ಸಿಂಗ್


ಇಂತಹ ಕುಕೃತ್ಯವನ್ನು ಖಂಡಿಸಿ ಮಾತನಾಡಿದ ಗೃಹಸಚಿವ ರಾಜನಾಥ ಸಿಂಗ್, 'ನಮ್ಮ ಯೋಜನೆಗೆ ಎಲ್ಲರೂ ಸಹಕಾರ ನೀಡುತ್ತಾರೆ ಎಂದುಕೊಂಡಿದ್ದೆವು. ಈ ಅವಧಿಯಲ್ಲಿ ಭದ್ರತಾ ಪಡೆಗಳು ಬಹಳ ಸಂಯಮದಿಂದ ಇದ್ದವು. ಈ ನಿರ್ಧಾರಕ್ಕೆ ಜಮ್ಮು ಕಶ್ಮೀರ ಸೇರಿದಂತೆ ದೇಶದೆಲ್ಲೆಡೆ ಅಭೂತಪೂರ್ವ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಭಯೋತ್ಪಾದಕರು ದಾಳಿ ಮುಂದುವರೆಸಿ ಹಲವಾರು ನಾಗರಿಕರು ಮತ್ತು ಯೋಧರನ್ನು ಗಾಯಗೊಳಿಸಿ ಕೆಲವರನ್ನು  ಬಲಿ ತೆಗೆದುಕೊಂಡರು.
ಇದನ್ನು ಓದಿರಿ : ರಾಜ್ಯಗಳಿಗೆ ಬಂಪರ್ ಆಫರ್ ನೀಡಿದ ಮೋದಿ !

ಭಯೋತ್ಪಾದಕ ದಾಳಿಯಿಂದಾಗುವ ಹಿಂಸಾಚಾರ ಮತ್ತು ಹತ್ಯೆಯನ್ನು ತಡೆಗಟ್ಟಲು ಭದ್ರತಾ ಪಡೆಗಳಿಗೆ ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ನಿರ್ದೇಶನ ನೀಡಲಾಗಿದೆ ಎಂದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಮತ್ತು  ಹಿಂಸಾಚಾರ ಮುಕ್ತ ಪರಿಸರವನ್ನು ಸೃಷ್ಟಿಸಲು ಸರಕಾರ ತನ್ನ ಪ್ರಯತ್ನವನ್ನು ಮುಂದುವರೆಸಲಿದೆ.



ರಂಜಾನ್ ಪ್ರಯುಕ್ತ  ಮೇ 17 ರಂದು ತೆಗೆದುಕೊಂಡ ಕದನ ವಿರಾಮ  ನಿರ್ಧಾರವನ್ನು ವಾಪಾಸ್ ತೆಗೆದುಕೊಂಡು ಭಯೋತ್ಪಾದಕರ ನಿಗ್ರಹ ಕಾರ್ಯಾಚರಣೆಯನ್ನು ಪುನರಾರಂಭಿಸಿ, ಒಳನುಸುಳುಕೋರರನ್ನು ಸದೆಬಡಿಯಲಾಗುವುದು ಎಂದು ಗೃಹ ಸಚಿವಾಲಯ ತಿಳಿಸಿದೆ.




YOU MAY ALSO LIKE

No comments