Breaking News

ರಾಜ್ಯಗಳಿಗೆ ಬಂಪರ್ ಆಫರ್ ನೀಡಿದ ಮೋದಿ !

ಇಂದು ನೀತಿ ಆಯೋಗದ  ಆಡಳಿತ ಮಂಡಳಿ ಆಯೋಜಿಸಿದ್ದ ಸಭೆಯಲ್ಲಿ  ನರೇಂದ್ರ ಮೋದಿ ಭಾಗವಹಿಸಿದ್ದರು. ರಾಜ್ಯಗಳ  ಮುಖ್ಯ ಮಂತ್ರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ದೇಶದ ಆರ್ಥಿಕ ಬೆಳವಣಿಗೆಯನ್ನು ನಾವೆಲ್ಲ ಸೇರಿ ಎರಡಂಕಿಗೆ ಕೊಂಡೊಯ್ಯಬೇಕಿದೆ.

Narendra Modiji


ಪ್ರವಾಹ ಪೀಡಿತ ರಾಜ್ಯಗಳಲ್ಲಿನ ಪರಿಸ್ಥಿತಿಯನ್ನು ನಿಭಾಯಿಸಲು ಬೇಕಾದ ಸಂಪೂರ್ಣ ಸಹಕಾರವನ್ನು ನೀಡಲು ಕೇಂದ್ರ ಸರಕಾರ ಸಿದ್ಧವಿದೆ ಎಂದು ಹೇಳಿದರು. 2017-18 ನೇ ಸಾಲಿನ ನಾಲ್ಕನೇ ತ್ರೈಮಾಸಿಕದಲ್ಲಿ ಆರ್ಥಿಕ ಬೆಳವಣಿಗೆ ದರ ಶೇಕಡಾ 7.7 ಇತ್ತು ಎಂದು ನೆನಪಿಸಿದ ಅವರು 2020 ರ ವೇಳೆಗೆ ಎರಡಂಕಿಗೆ ಏರಿಸಲು ಪ್ರಯತ್ನಿಸಬೇಕು ಎಂದರು.

ಅಷ್ಟೇ ಅಲ್ಲದೆ ಈ ಸಂದರ್ಭದಲ್ಲಿ ರಾಜ್ಯಗಳಿಗೆ ಒಂದು ಬಂಪರ್ ಅಪಾರನ್ನು ಸಹ ನೀಡಿದರು. ಹಿಂದಿನ ಸರಕಾರಗಳ ಅವಧಿಯಲ್ಲಿ ಕೇಂದ್ರದ ಅನುಧಾನ ಶೇಕಡಾ 5 ಲಕ್ಷ ಕೋಟಿಯಷ್ಟನ್ನು  ನೀಡಲಾಗುತ್ತಿತ್ತು ಆದರೆ ಈ ಪ್ರಸ್ತುತ ಹಣಕಾಸು ವರ್ಷದಿಂದ 11 ಲಕ್ಷ ಕೋಟಿಗಿಂತಲೂ ಹೆಚ್ಚಿನ ಅನುದಾನವನ್ನು ನೀಡಲಾಗುವುದು ಎಂದರು.
ಇದನ್ನು ಓದಿರಿ : ಉಗ್ರ ನಿಗ್ರಹ ಕಾರ್ಯಾಚರಣೆ ಮುಂದುವರಿಸಲು ನಿರ್ಧರಿಸಿದ ಕೇಂದ್ರ. 

Narendra Modiji


ರೈತರ ಆದಾಯ ದ್ವಿಗುಣ ಗೊಳಿಸುವಿಕೆ, ಅಪೌಷ್ಟಿಕತೆ ನಿವಾರಣೆ, ಆಯುಷ್ಮಾನ್ ಭರತ್, ಇಂಧ್ರಧನುಷ ಯೋಜನೆಯ ಜಾರಿ ಮತ್ತು ಗಾಂಧೀಜಿಯವರ 150 ನೇ ಜನ್ಮ ದಿನಾಚರಣೆಯ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಕೇಂದ್ರ ಸರಕಾರ ನೀಡಿದ ಅನುದಾನವನ್ನು ರಾಜ್ಯಸರಕಾರಗಳು ಸರಿಯಾಗಿ ಬಳಸಿಕೊಂಡಲ್ಲಿ, ಎಲ್ಲ ವಿಕೋಪಗಳನ್ನು ಮೆಟ್ಟಿ ನಿಂತು ಅಭಿವೃದ್ಧಿ ಹೊಂದುವುದರಲ್ಲಿ ಎರಡು ಮಾತಿಲ್ಲ. ಆದರೆ ರಾಜ್ಯ ಸರಕಾರಗಳು ಈ ಅನುದಾನವನ್ನು ಹೇಗೆ ಬಳಸಿಕೊಳ್ಳುತ್ತವೆ ಎಂದು ಕಾದು ನೋಡ ಬೇಕಿದೆ. 




YOU MAY ALSO LIKE


No comments