ಕೇವಲ ಎರಡೇ ವಾರದಲ್ಲಿ ಡಬ್ ಸ್ಚಾರ್ ಗಳ ಹಿಂದಿಕ್ಕಿದ 7 ವರ್ಷದ ಪೋರಿ!
ಇತ್ತೀಚಿನ ದಿನಗಳಲ್ಲಿ ಡಬ್ ಸ್ಮಾಷ್ ಸಾಕಷ್ಚು ಖ್ಯಾತಿ ಗಳಿಸುತ್ತಿದೆ. ನಿವೇದಿತಾ, ಅಲ್ಲು ರಘು, ಸುಷ್ಮಿತಾ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಎಲ್ಲರೂ ತಮ್ಮದೇ ರೀತಿಯಲ್ಲಿ ಡಬ್ ಸ್ಮಾಷ್ ಮಾಡಿ ಹಿಟ್ ಆದವರೇ.. ಆದರೆ ಈ ಪಟ್ಟಿಗೆ ನೂತನ ಸೇರ್ಪಡೆಯಾಗಿ 7 ವರ್ಷದ ಪುಟ್ಟ ಪೋರಿ ಪದಾರ್ಪಣೆ ಮಾಡಿದ್ದಾಳೆ.
ಡಬ್ ಸ್ಮಾಷ್ ಪ್ರಶ್ವಿತಾ
ಅರೆ ಕೇವಲ 2 ವಾರದಲ್ಲಿ ಈ ಪೋರಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು, ಹಾಲಿ ಡಬ್ ಸ್ಟಾರ್ ಗಳಿಗೆ ಭಾರಿ ಪೈಪೋಟಿ ನೀಡುತ್ತಿದ್ದಾಳೆ. ಅಲ್ಲದೆ ಪದಾರ್ಪಣೆ ಮಾಡಿದ ತಿಂಗಳಲ್ಲೇ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದು, ಖ್ಯಾತನಟರೂ ಈಕೆಯ ಡಬ್ ಸ್ಮಾಷ್ ಗೆ ಮಾರು ಹೋಗಿದ್ದಾರೆ.ಇಷ್ಟಕ್ಕೂ ಯಾರೀಕೆ? ಬಹುಶಃ ನೀವೆಲ್ಲರೂ ನಿಮ್ಮ ವಾಟ್ಸಪ್ಸ ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಮ್ ಗಳಲ್ಲಿ ಈಕೆಯನ್ನು ನೋಡಿರಬಹುದು. ಆದರೆ ಇಂದು ನಾವು ಆಕೆಯ ಸಂಪೂರ್ಣ ವಿವರ ನೀಡುತ್ತೇವೆ. ಈಕೆಯೇ 7 ವರ್ಷದ ಡಬ್ ಸ್ಮಾಷ್ ಸ್ಟಾರ್ ಪ್ರಶ್ವಿತಾ... ಬೆಂಗಳೂರಿನ ನಾಗರಬಾವಿ ನಿವಾಸಿಯಾಗಿರುವ ಪ್ರಶ್ವಿತಾ ಎರಡನೆೇ ತರಗತಿಯಲ್ಲಿ ಕಲಿಯುತ್ತಿದ್ದಾರೆ. ಪ್ರಶ್ವಿತಾ ತಂದೆ ಹರಿಕೃಷ್ಣ ಮತ್ತು ತಾಯಿ ಜೀವಿತಾ ಎಂದು.. ಈಕೆಗೆ ಈಗಾಗಲೇ ಎರಡು ಫ್ಯಾನ್ಸ್ ಅಕೌಂಟ್ ಗಳಿದ್ದು, ಇನ್ ಸ್ಟಾಗ್ರಾಮ್ ಹಾಗು ಫೇಸ್ಬು ಕ್ನಲ್ಲಿ ಪ್ರಶ್ವಿತಾ ಅಕೌಂಟ್ ಗಳಿವೆ.ಇನ್ನು ಪ್ರಶ್ವಿತಾಗೆ ಡಬ್ ಸ್ಮಾಶ್ ಗೆ ತರಬೇತಿ ನೀಡಿದವರು ಆಕೆಯ ಸಹೋದರಿಯಂತೆ. ಕಳೆದ ಆರು ತಿಂಗಳಿನಿಂದ ಪ್ರಶ್ವಿತಾಗೆ ಲಿಪ್ ಸಿಂಕ್ ಮಾಡುವ ಕುರಿತು ಆಕೆ ತರಬೇತಿ ನೀಡಿದರಂತೆ. ಈವರೆಗೂ ಪ್ರಶ್ವಿತಾ 13 ವಿಡಿಯೋಗಳನ್ನು ಮಾಡಿದ್ದು, ಎಲ್ಲವೂ ಸೂಪರ್ ಹಿಟ್ ಆಗಿದೆ. ಇನ್ಸ್ಟಾ ಗ್ರಾಮ್ ನಲ್ಲಂತೂ ಪ್ರಶ್ವಿತಾ ಸೂಪರ್ ಸ್ಟಾರ್ ಆಗಿದ್ದಾಳೆ.
ಈ ಬಗ್ಗೆ ಪ್ರಶ್ವಿತಾ ತಂದೆ ಹೆಮ್ಮೆಯಿಂದ ಮಾತನಾಡಿದ್ದು, ಕಳೆದ ಬೇಸಿಗೆ ಸಂದರ್ಭದಲ್ಲಿ ಪ್ರಶ್ವಿತಾ ಮತ್ತು ಆಕೆಯ ಸಹೋದರಿ ಸೀರೆ ಉಟ್ಟು ಡ್ಯಾನ್ಸ್ ಮಾಡುತ್ತಿದ್ದರು. ಬಳಿಕ ಡಬ್ ಸ್ಮಾಷ್ ಮಾಡಲು ಆರಂಭಿಸಿದೆವು. ಹೀಗೆ ಸುಮಾರು 12 ವಿಡಿಯೋಗಳನ್ನು ನಾವು ಮಾಡಿ ಅಪ್ಲೋಡ್ ಮಾಡಿದ್ದೆವು, ಎಲ್ಲವೂ ಭಾರಿ ವೈರಲ್ ಆಯಿತು. ಈಗ ಆಕೆಯ ಹೆಸರಲ್ಲೇ ಅಕೌಂಟ್ ಕ್ರಿಯೇಟ್ ಮಾಡಿ ನಿಯಮಿತವಾಗಿ ವಿಡಿಯೋ ಅಪ್ಲೋಡ್ ಮಾಡಲು ನಿರ್ಧರಿಸಿದ್ದೇವೆ. ಇನ್ನು ಪ್ರಶ್ವಿತಾಳ ಮೇಕಪ್ ಹಾಗೂ ಡ್ರೆಸ್ ಆಕೆಯ ತಾಯಿ ಜೀವಿತಾ ಅವರ ಜವಾಬ್ದಾರಿಯಾಗಿದ್ದು, ವಿಡಿಯೋ, ಡಬ್ ಸ್ಮಾಷ್ ಕಂಟೆಂಟ್ ತಂದೆ ಹರಿಕೃಷ್ಣ ಅವರ ಜವಾಬ್ದಾರಿಯಂತೆ. ಇನ್ನು ನಟನೆ ಪ್ರಶ್ವಿತಾ ನೀರು ಕುಡಿದಷ್ಟು ಸುಲಭ ಎಂದು ಹರಿಕೃಷ್ಣ ಹೇಳಿದ್ದಾರೆ. ಅಂತೆಯೇ ಪ್ರಶ್ವಿತಾಳ ವಿಡಿಯೋ ವೈರಲ್ ಆಗಲು ಆಕೆ ತೋರಿಸುವ ಭಾವನೆಗಳೇ ಕಾರಣವಾಗಿರಬಹುದು ಎಂದು ಹರಿಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.
ಮೂಲ:- ಕನ್ನಡಪ್ರಭ
YOU MAY ALSO LIKE
No comments