Breaking News

ವಿಧಾನ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ಆರ್ಭಟ..!

ಅದೆಷ್ಟೋ ಕಾಲಗಳ ನಂತರ ವಿಧಾನ ಸಭೆಯಲ್ಲಿ ಇಂದು ವಿರೋಧ ಪಕ್ಷದ ಅಬ್ಬರವೊಂದು ಗೋಚರಿಸಿದೆ. ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನ ಸಭಾ ವಿರೋಧ ಪಕ್ಷದ ನಾಯಕ ಬಿಎಸ್ ಯಡಿಯೂರಪ್ಪನವರು ಇಂದು  ಕಾಂಗ್ರೆಸ್ ಜೆಡಿಎಸ್‍ನ  ಅಪವಿತ್ರ ಮೈತ್ರಿಯ ಬಗ್ಗೆ ಆಕ್ರೋಶಭರಿತವಾಗಿ ಮಾತನಾಡಿದರು. ಬಿಎಸ್‍ವೈ ಮಾತಿಗೆ ಇಡಿಯ ಸದಸನವೇ ಸ್ಥಬ್ಧವಾಗಿತ್ತು. 


ಸದನಲ್ಲಿ ವಿರೋಧ ಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ಮಾತನಾಡುತ್ತಿರುವುದು
ನಲ್ಲಿ ವಿರೋಧ ಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ಮಾತನಾಡುತ್ತಿರುವುದು 


ಹಾವಿಗೆ ಹನ್ನೆರಡು ವರ್ಷ ರೋಷವಾದರೆ ಕುಮಾರಸ್ವಾಮಿಯದ್ದು ಅದಕ್ಕೂ ಮಿಗಿಲಾದದ್ದು, ಅಪ್ಪ-ಮಕ್ಕಳು ಕಾಂಗ್ರೆಸ್ ನಿರ್ನಾಮ ಮಾಡುವುದು ಖಚಿತ. ನನ್ನ ಹೋರಾಟವೇನಿದ್ದರೂ ಅಪ್ಪ-ಮಕ್ಕಳ ವಿರುದ್ಧವೇ ಹೊರತು ಕಾಂಗ್ರೆಸ್ ವಿರುದ್ಧ ಅಲ್ಲ,  ಅಪ್ಪ- ಮಕ್ಕಳು ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡದಿದ್ದರೆ ನನ್ನ ಹೆಸರು ಯಡಿಯೂರಪ್ಪ ಅಲ್ಲ ಎಂದು ಸವಾಲು ಹಾಕಿದರು. 


ಹಿಂದೆ ಜೆಡಿಎಸ್ ಜತೆಗೂಡಿ ಸರಕಾರ ಮಾಡಿದ್ದು ನನ್ನ ಜೀವಮಾನದ ಅತಿದೊಡ್ಡ ತಪ್ಪು. ಮೊದಲ 20 ತಿಂಗಳು ಬೇಷರತ್ ಸರಕಾರ ನಡೆಸಿದ ಕುಮಾರಸ್ವಾಮಿ ನಂತರ ಏನೋನೋ ಷರತ್ತುಗಳನ್ನು ಹಾಕಿ ನನ್ನ ಬೆನ್ನಿಗೆ ಚೂರಿ ಹಾಕಿದರು. ಅವರೊಬ್ಬರು ಕಾಲಕ್ಕೆ ತಕ್ಕಂತೆ ಬಣಬದಲಿಸುವ ಊಸರವಳ್ಳಿ. ಭವಿಷ್ಯದಲ್ಲಿ ಕಾಂಗ್ರೆಸ್ ಮುಖಂಡರಿಗೂ ಇದರ ಅನುಭವ ಆಗಲಿದೆ 

ಕುಮಾರಸ್ವಾಮಿ ಓರ್ವ ಸರಕಾರದ ಸಾಂಧರ್ಬಿಕ ಶಿಶು,ದುರ್ಯೋಧನನೇ ಅವರ ಮನೆದೇವ್ರು. ಉಸರವಳ್ಳಿಯಾದರೂ ಒಮ್ಮೆ ಮಾತ್ರ ಬಣ್ಣ ಬದಲಾಯಿಸುತ್ತದೆ,ಆದರೆ ಕುಮಾರಸ್ವಾಮಿ ಪ್ರತಿಬಾರಿಯೂ ಬಣ್ಣ ಬದಲಾಯಿಸುತ್ತಾರೆ. ಇದು ಹಿಂದೆ-ಮುಂದೆ, ದಿಕ್ಕು- ದೆಸೆಯಿಲ್ಲದ ಸರಕಾರ, ಕವಿ ಅಡಿಗರು ಹೇಳಿದಂತೆ 'ಹೆಳವನ ಹೆಗಲ ಮೇಲೆ ಕುರುಡ ಕೂತಿದ್ದಾನೆ ದಾರಿಸಾಗುವುದೆಂತೋ ನೋಡಬೇಕು' ಎಂದು ಹರಿಹಾಯ್ದರು. 

ಬಿಜೆಪಿ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಹಿಡಿದಿಟ್ಟ ಡಿ.ಕೆ. ಶಿವಕುಮಾರ್ ಖಳನಾಯಕರಾಗಲಿದ್ದಾರೆ. ಅಪ್ಪ-ಮಕ್ಕಳ ವರಸೆ ಏನೆಂಬುದು ಅವರಿಗೂ ಸದ್ಸಯದಲ್ಲೇ ಗೊತ್ತಾಗಲಿದೆ. ಅದೇನು ಅವರಿಗೆ ಗೊತ್ತಿಲ್ಲ ಎಂದೇನೂ ಇಲ್ಲ. ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲಿ ಮೂಲೆಗುಂಪಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಥಿತಿ ಅನುಕುಂಪ ಮೂಡಿಸುವಂಥದ್ದು. ಯಾವ ಸಿದ್ದರಾಮಯ್ಯ ಅವರನ್ನು ಮುಂದಿಟ್ಟುಕೊಂಡು ಚುನಾವಣೆ ಪ್ರಚಾರ ಮಾಡಿದ ರಾಹುಲ್ ಗಾಂಧಿ ಅವರೇ ಸಿದ್ದರಾಮಯ್ಯ ಅವರಿಗೆ ಕಿಮ್ಮತ್ತು ಕೊಡಲಿಲ್ಲ. ತಮ್ಮನ್ನು ಹೀನಾಯವಾಗಿ ಸೋಲಿಸಿದ ಜೆಡಿಎಸ್ ನ  ಜಿ.ಟಿ. ದೇವೇಗೌಡರ ಜತೆ ಒಂದೆಡೆ ಕುಳಿತುಕೊಳ್ಳಬೇಕಾದ ಸಿದ್ದರಾಮಯ್ಯನವರ ದುಸ್ಥಿತಿ ಯಾರಿಗೂ ಬೇಡ ಎಂದು ಚುಚ್ಚಿದರು. 


ಸದನಲ್ಲಿ ವಿರೋಧ ಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ಮಾತನಾಡುತ್ತಿರುವುದು
ನಲ್ಲಿ ವಿರೋಧ ಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ಮಾತನಾಡುತ್ತಿರುವುದು 

ವಿಶ್ವಾಸಮತ ಯಾಚನೆ ಪ್ರಸ್ತಾಪ ಕುರಿತು ಮಾತನಾಡಿದ ಬಿ.ಎಸ್. ಯಡಿಯೂರಪ್ಪ , ನಿಮ್ಮ ಪ್ರಣಾಳಿಕೆಯಲ್ಲಿ 24 ಗಂಟೆಯ ಒಳಗಾಗಿ ರೈತರ ಸಾಲವನ್ನು ಮನ್ನಾ ಮಾಡುವುದಾಗಿ ಘೋಷಿಸಿದ್ರಿ. ಸಾಲಮನ್ನಾ ಬಗ್ಗೆ ರಾಜ್ಯದ ರೈತರು ವಿಶ್ವಾಸ ಇಟ್ಟುಕೊಂಡಿದ್ದು, ಸಾಲಮನ್ನಾ ಮಾಡುವ ಮೂಲಕ ಅವರ ನಂಬಿಕೆ ಉಳಿಸಿಕೊಳ್ಳಬೇಕು, ಇಂದು ಸಂಜೆಯ ಒಳಗೆ ರಾಜ್ಯದ ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡಿ. ಇಲ್ಲವಾದರೆ ಸೋಮವಾರ ಕರ್ನಾಟಕ ರಾಜ್ಯ ಬಂದ್‍ ನ್ನು ಘೋಷಿಸುತ್ತೇವೆ ಎಂದು ಅಬ್ಬರಿಸಿದ್ದರು.

ಒಟ್ಟಾರೆ ವಿಧಾನ ಸಭೆ ಪ್ರವೇಶಿಸಿದ ಮೊದಲ ದಿನವೇ ಆಡಳಿತ ಪಕ್ಷದ ವಿರುದ್ಧ ಅಬ್ಬರಿಸಿ ಮುಂದಿನ ಹೋರಾಟಗಳ ಬಗ್ಗೆ ಸ್ಪಷ್ಟ ಚಿತ್ರಣವನ್ನು ಬಿಂಬಿಸಿ ಭಾಷಣ ಮಾಡಿದ ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನ ಸಭಾ ವಿರೋಧ ಪಕ್ಷದ ನಾಯಕ ಬಿಎಸ್ ಯಡಿಯೂರಪ್ಪನವರು ಮುಂದೆ ಭಾರೀ ಹೋರಾಟವನ್ನೇ ನಡೆಸುತ್ತೇವೆ ಎಂಬ ಸಂದೇಶವನ್ನು ನೀಡಿದ್ದಾರೆ.




YOU MAY ALSO LIKE


No comments