Breaking News

ಒಂದನೆ ತರಗತಿಯ ದಾಖಲಾತಿಗೆ 5 ವರ್ಷ 5ತಿಂಗಳು ನಿಗದಿಪಡಿಸಿ ಶಿಕ್ಷಣ ಇಲಾಖೆ ಆದೇಶ




ಒಂದನೇ ತರಗತಿ ದಾಖಲಾತಿಗೆ ಸಮಸ್ಯೆಯಾಗಿದ್ದ ಮಕ್ಕಳ ವಯೋಮಿತಿಗೆ ಈಗ ಪರಿಹಾರ ಸಿಕ್ಕಿದೆ. ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ 1ನೆ ತರಗತಿಗೆ ದಾಖಲಾಗಲು ಮಗುವಿಗೆ ಕನಿಷ್ಟ ವಯೋಮಿತಿ 5 ವರ್ಷ 5 ತಿಂಗಳಿಗೆ ನಿಗದಿಪಡಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.


ಕಳೆದ ಒಂದೆರೆಡು ವಾರದಿಂದ ವಯೋಮಿತಿ ವಿಚಾರವಾಗಿ ಸಾಕಷ್ಟು ಗೊಂದಲಗಳು ಉಂಟಾಗಿದ್ದವು. 5 ವರ್ಷ 10 ತಿಂಗಳು ಆಗಿರಬೇಕು ಎಂಬ ನಿಯಮ ತಂದಿರುವುದರಿಂದ ಮಕ್ಕಳ ವಯೋಮಿತಿಯಲ್ಲಿ ಅಲ್ಪಸ್ವಲ್ಪ ವ್ಯತ್ಯಾಸವಿದ್ದರೂ, ಶಾಲಾ ಮುಖ್ಯಶಿಕ್ಷಕರು ಮಕ್ಕಳನ್ನು ಸೇರಿಸಿಕೊಳ್ಳಲು ನಿರಾಕರಿಸುತ್ತಿದ್ದರು. ಇದರಿಂದ ಬೇಸತ್ತ ಸಾರ್ವಜನಿಕರು ಶಿಕ್ಷಣ ಇಲಾಖೆಗೆ ದೂರುಗಳನ್ನು ಸಲ್ಲಿಸಿದ್ದರು.



2015-16, 2016-17ನೆ ಸಾಲಿನಲ್ಲಿ ಎಲ್‌ ಕೆ ಜಿಗೆ ಸೇರಿದ ಮಕ್ಕಳು ನಿಗದಿತ ವಯೋಮಿತಿ 3 ವರ್ಷ 10ತಿಂಗಳು ಪೂರ್ಣಗೊಳಿಸದೆ ಸ್ವ ಇಚ್ಛಾ ದಾಖಲಾತಿ ಪಡೆದುಕೊಂಡಿರುವುದು ಕಂಡುಬಂದಿದೆ.

ಈ ಹಿನ್ನೆಲೆಯಲ್ಲಿ 1ನೆ ತರಗತಿಗೆ ಪ್ರವೇಶ ಪಡೆಯುವ ಸಂದರ್ಭದಲ್ಲಿ ನಿಗದಿತ ವಯೋಮಾನ 5 ವರ್ಷ 10ತಿಂಗಳು ಪೂರ್ಣಗೊಳಿಸದೆ ಇರುವ ಮಕ್ಕಳು 1ನೆ ತರಗತಿಗೆ ಪ್ರವೇಶ ಪಡೆಯಲು ಅರ್ಹತೆ ಹೊಂದಿರುತ್ತಿರಲಿಲ್ಲ. ಹಾಗಾಗಿ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ 2017-18 ನೆ ಸಾಲಿಗೆ ಮಾತ್ರ ಅನ್ವಯವಾಗುವಂತೆ ಒಂದನೆ ತರಗತಿಯ ದಾಖಲಾತಿಯ ವಯೋಮಿತಿಯನ್ನು 5 ವರ್ಷ 5 ತಿಂಗಳಿಗೆ ನಿಗದಿಪಡಿಸಿ ಆದೇಶಿಸಲಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.



ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಯ ಒಂದನೇ ತರಗತಿಗೆ ಮಕ್ಕಳನ್ನು ದಾಖಲಾತಿ ಮಾಡಲು ಕರ್ನಾಟಕ ಶಿಕ್ಷಣ ಕಾಯಿದೆ 1983 ರ ನಿಯಮ -20೦ ರ ಅನ್ವಯ ಎಲ್ ಕೆಜಿಗೆ 3 ವರ್ಷ 10 ತಿಂಗಳು ಹಾಗೂ ಒಂದನೇ ತರಗತಿ 5 ವರ್ಷ 5 ತಿಂಗಳು. ಇದರ ಜತೆಯಲ್ಲಿ ಮಗುವಿನ ಜನ್ಮ ದಿನಾಂಕ ಪತ್ರ ಇಲ್ಲಎನ್ನುವ ಕಾರಣಕ್ಕೂ ಯಾವುದೇ ಮಗುವನ್ನು ಶಾಲಾ ದಾಖಲಾತಿ ಮಾಡಲು ನಿರಾಕರಿಸುವಂತಿಲ್ಲ. ಹುಟ್ಟಿದ ದಿನಾಂಕದ ಬಗ್ಗೆ ಅಧಿಕೃತ ದಾಖಲೆ ಇಲ್ಲದೇ ಹೋದರೂ ಕೂಡ ಪೋಷಕರು ಸ್ವಯಂ ಘೋಷಣಾ ಲಿಖಿತ ಹೇಳಿಕೆಯನ್ನು ಪಡೆದುಕೊಂಡು ದಾಖಲಾತಿಯನ್ನು ಮಾಡಿಕೊಳ್ಳಬೇಕು ಎಂದು ಜನವರಿ ತಿಂಗಳಿನಲ್ಲಿ ಹೊರಡಿಸಿದ್ದ ಆದೇಶದಲ್ಲಿ ತಿಳಿಸಿಲಾಗಿದೆ. 
ಇದನ್ನೂ ಓದಿರಿ :- ಕರ್ನಾಟಕಕ್ಕೆ ಜೂನ್ 2 ರಂದು ಅಧಿಕೃತ ಮುಂಗಾರು ಪ್ರವೇಶ ಸಾಧ್ಯತೆ 



YOU MAY ALSO LIKE

No comments