ಸಮ್ಮಿಶ್ರ ಸರಕಾರದ ಮೊದಲ ವಿಕೆಟ್ ಪತನ..!
ಬೆಂಗಳೂರು: ಇಂದು ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರಕಾರದ ಮೊದಲ ವಿಕೆಟ್ ಪತನವಾಗಿದೆ. ಪ್ರಾಥಮಿಕ ಮತ್ತು ಫ್ರೌಡ ಶಿಕ್ಷಣ ಸಚಿವ, ಬಿಎಸ್ ಪಿ ಪಕ್ಷದ ಶಾಸಕ ಏನ್ ಮಹೇಶ ಅವರು ಇಂದು ಹಠಾತ್ತನೆ ಸಂಪುಟಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ.
ಮೊನ್ನೆಯಷ್ಟೇ ಬಿಎಸ್ ಪಿ ನಾಯಕಿ ಮಾಯಾವತಿ ಮಹಾಘಟಬಂಧನ್ ದಿಂದ ಹೊರಬಂದ ಹಿನ್ನಲೆಯಲ್ಲಿ ಮಹೇಶ ಅವರು ರಾಜಿನಾಮೆ ನೀಡಿರಬೇಕು ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಮದ್ಯಮದೊಂದಿಗೆ ಮಾತನಾಡಿದ ಅವರು ನಾಲ್ಕು ತಿಂಗಳಿನಿಂದ ಸಚಿವನಾಗಿ ಕೆಲಸ ನಿರ್ವಹಿಸಿದ್ದೇನೆ. ಇದರ ಜೊತೆಯಲ್ಲಿ ಪಕ್ಷದ ಮತ್ತು ಕ್ಷೇತ್ರದ ಕೆಲಸ ನಡೆಸಿಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ ಅದಕ್ಕಾಗಿ ರಾಜಿನಾಮೆ ನೀಡಬೇಕಾಯಿತು. ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆನೆಯೇ ಹೊರತು ಶಾಸಕ ಸ್ಥಾನಕ್ಕಲ್ಲ. ಸರಕಾರಕ್ಕೆ ನನ್ನ ಬೆಂಬಲ ಹೀಗೆಯೇ ಮುಂದುವರೆಯುತ್ತದೆ ಎಂದು ಹೇಳಿದ್ದಾರೆ.
ಪ್ಲಿಪ್ ಕಾರ್ಟ್ ಆಂಡ್ರಾಯ್ಡ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ ವಿಶೇಷ ರಿಯಾಯಿತಿ ಪಡೆಯಿರಿ... Download






No comments