Breaking News

ಮೊದಲ ಸೆಲ್ ನೊಂದಿಗೆ ಸದ್ದು ಮಾಡಿದ ನೋಕಿಯಾ 5.1 ಪ್ಲಸ್

Nokia 5.1 Plus
Nokia 5.1 Plus

ಭಾರತದ ಮಧ್ಯಮ ಬಜೆಟಿಗರನ್ನು ಗಮನದಲ್ಲಿ ಇರಿಸಿಕೊಂಡು ನೋಕಿಯಾ  ಇಂದು ನೋಕಿಯಾ 5.1  ಪ್ಲಸ್ ಎಂಬ ಫೋನನ್ನು ಬಿಡುಗಡೆ ಮಾಡಿದೆ. ಇದು ಮೊದಲ ಸೆಲಿನಲ್ಲಿಯೇ ಒಳ್ಳೆಯ ಸದ್ದು ಮಾಡಿದ್ದು, ಚೈನಾ ಮೊಬೈಲ್ ಗಳಿಗೆ ಆಲ್ಟರ್ನೇಟಿವ್ ಆಗಿ  ಹೊರಹೊಮ್ಮಿದೆ.

ಹೌದು ... ನೀವು ಓದುತ್ತಿರುವುದು ನಿಜ. ಇಂದು  ಬಿಡುಗಡೆಯಾದ  ನೋಕಿಯಾ 5.1  ಪ್ಲಸ್ ಫೋನ್  ಭರ್ಜರಿಯಾಗಿ ಸೆಲ್ ಆಗುವ ಮೂಲಕ ಸುದ್ದಿ ಮಾಡಿದೆ. ಮಾಧ್ಯಮ ಬಜೆಟಿಗರನ್ನು ಗುರಿಯಾಗಿಸಿಕೊಂಡು ಈ ಫೋನನ್ನು ತಯಾರಿಸಿದ್ದು, ಕೇವಲ 10,999/- ರೂಪಾಯಿಗಳಿಗೆ ಮಾರಾಟವಾಗುತ್ತಿದೆ.

ಸ್ಟೋರೇಜ್ :
3 ಜಿಬಿ ರಾಮ್ ಮತ್ತು  32 ಜಿಬಿ ಆಂತರಿಕ ಮೆಮೊರಿಯನ್ನು ಹೊಂದಿದೆ. ಅಲ್ಲದೇ 400 ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಹಾಕಿ ಹೆಚ್ಚಿಸಿಕೊಳ್ಳಬಹುದು.

ಆಪರೇಟಿಂಗ್ ಸಾಫ್ಟ್ವೇರ್ :
ಮೀಡಿಯಾ ಟೆಕ್ ಹೆಲಿಓ60 ಪ್ರೊಸೆಸ್ಸರ್ ನೀಡಲಾಗಿದ್ದು, 1.8 ಗಿಗಾ ಹಾರ್ಡ್ಸ್ ಸ್ಪೀಡನಲ್ಲಿ ಕಾರ್ಯ ನಿರ್ವಹಿಸಲಿದೆ. ಅಲ್ಲದೆ ಇದಕ್ಕೆ ಆಂಡ್ರಾಯ್ಡ್ 8.1 ನ್ನು ನೀಡಲಾಗಿದೆ.

ಕೆಮರಾ:
13 ಮತ್ತು 5 ಎಂ ಪಿ ಕೆಮರಾವನ್ನು ಹಿಂದಿನ ಭಾಗದಲ್ಲಿ ಮತ್ತು 8 ಎಂ ಪಿ ಕೆಮರಾವನ್ನು ಸೆಲ್ಫಿ ಕ್ಲಿಕ್ಕಿಸಲು ಮುಂದೆ ನೀಡಲಾಗಿದ್ದು, ಉತ್ತಮ ಕ್ಲ್ಯಾರಿಟಿಯನ್ನು ನೋಕಿಯಾ ನೀಡಲಿದೆ. ಕೆಮರಾದಲ್ಲಿ ಹೈಬ್ರಿಡ್ ಜೂಮ್ ಮತ್ತು ಸ್ಲೋ ಮೋಷನ್ ವಿಡಿಯೋ ಸೆರೆಹಿಡಿಯುವ ಅವಕಾಶನೀಡಲಾಗಿದೆ.

Nokia 5.1 Plus


ಸ್ಕ್ರೀನ್ ನ ವಿಶೇಷತೆ:
720x1520 ಪಿಕ್ಸೆಲ್ ನ ರೆಸಲ್ಯೂಷನ್ ಹೊಂದಿದೆ. ೫. ಇಂಚಿನ ದೊಡ್ಡ ಮತ್ತು ಹೆಚ್ ಡಿ ಸ್ಕ್ರೀನನ್ನು ಹೊಂದಿದೆ.

ಬ್ಯಾಟರಿ:
3060 ಎಂ ಎ ಹೆಚ್ ಸಾಮರ್ಥ್ಯದ ಬ್ಯಾಟರಿಯನ್ನು ಇದಕ್ಕೆ ನೀಡಲಾಗಿದೆ.

ಇತರೆ ವಿಶೇಷತೆಗಳು
ಎರಡು ಸಿಮ್ಮ ಗಳನ್ನೂ ಅಳವಡಿಸಬಹುದಾಗಿದ್ದು, 4 ಜಿ ಸಪೋರ್ಟ್ ಮಾಡುತ್ತವೆ. ಪಿಂಗರ್ ಪ್ರಿಂಟ್ ಸೆನ್ಸಾರ್ ಅಳವಡಿಸಲಾಗಿದೆ. ನೋಕಿಯಾ 5.1 ಕಪ್ಪು ಮತ್ತು ನೀಲ ವರ್ಣಗಳಲ್ಲಿ ದೊರೆಯುತ್ತದೆ.  1ವರ್ಷದ ವಾರಂಟಿಯೊಂದಿಗೆ ಪ್ಲಿಪ್ ಕಾರ್ಟ್ ನಲ್ಲಿ ಲಭ್ಯವಿದೆ.

ಪ್ಲಿಪ್ಕಾರ್ಟ್ ನಲ್ಲಿ ಖರೀದಿಸಲು ನೇರವಾಗಿ ಇಲ್ಲಿ ಕ್ಲಿಕ್ ಮಾಡುವ ಮೂಲಕ ತೆರೆಳಿ...

Nokia 5.1







SPONSORED CONTENT



No comments