Breaking News

ಸ್ಯಾರಿಡಾನ್ ಸೇರಿ 300ಕ್ಕೂ ಅಧಿಕ ಮಾತ್ರೆಗಳನ್ನು ನಿಷೇಧಿಸಿದ ಕೇಂದ್ರ ಸರಕಾರ



 ನವದೆಹಲಿ: ಮಾನವನ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮವನ್ನು ಉಂಟುಮಾಡುವ ಸ್ಯಾರಿಡಾನ್ ಸೇರಿ 300ಕ್ಕೂ ಅಧಿಕ ಮಾತ್ರೆಗಳನ್ನು ಕೇಂದ್ರ ಸರಕಾರ ನಿಷೇಧಿಸಿದೆ.

ಕೇಂದ್ರ ಸರಕಾರ ಬಿಡುಗಡೆ ಮಾಡಿರುವ ನಿಷೇದಿತ ಮಾತ್ರೆಗಳ ಪಟ್ಟಿಯಲ್ಲಿ ಖ್ಯಾತನಾಮ ಸಂಸ್ಥೆಗಳ ಮಾತ್ರೆಗಳು ಸೇರಿವೆ. ಗ್ಲುಕೊನಾರ್ಮ್ ಪಿ.ಜಿ., ಲುಪಿಡಾಕ್ಸ್ , ಟಾಕ್ಸಿಮ್ ಎಜೆಡ್ ಮತ್ತು ಹಲವು ನೋವು ನಿವಾರಕ ಮಾತ್ರೆಗಳು ಸೇರಿದಂತೆ 328 ಮಾತ್ರೆ ಮತ್ತು ಔಷಧಗಳನ್ನು ತಯಾರಿಸುವ ಮತ್ತು ಮಾರಾಟಮಾಡುವುದನ್ನು ತಕ್ಷಣದಿಂದಲೇ ನಿಷೇಧ ಹೇರಲಾಗಿದೆ.
Ganesh Chaturthi Deals

ಕಳೆದ ಕೆಲವು ವರ್ಷಗಳಿಂದ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ಗಳಲ್ಲಿ ಈ ಅಪಾಯಕಾರಿ ಮಾತ್ರೆಗಳ ಬಗ್ಗೆ ವಿಚಾರಣೆ ನಡೆಯುತ್ತಿತ್ತು. ಔಷಧ ತಯಾರಕ ಕಂಪನಿಗಳು ಅಪಾಯಕಾರಿಯಾದ ಅಂಶಗಳನ್ನು ಶೇ.2 ರಷ್ಟು ಪ್ರಮಾಣವನ್ನು ಕಡಿಮೆಗೊಳಿಸಿದ್ದೇವೆ ಎಂದು ವಾದ ಮಾಡುತ್ತಿದ್ದವು. ಈ ಕುರಿತು ಆರೋಗ್ಯ ಇಲಾಖೆ ಮತ್ತು ಔಷಧ ತಯಾರಿಕಾ ಕಂಪನಿಗಳ ನಡುವೆ ಡ್ರಗ್ ವಾರ್ ನಡೆದೇ ಇತ್ತು. ಕೊನೇಯದಾಗಿ ಅದನ್ನು ಕೇಂದ್ರ ಸರ್ಕಾರವು ನಿಷೇಧಕ್ಕೆ ಒಳಪಡಿಸಿ ಆದೇಶವನ್ನು ಹೊರಡಿಸಿದೆ. 





SPONSORED CONTENT



No comments