ಭಾರತ ಬಂದ್ ಸಂದರ್ಭದಲ್ಲಿ ಬಂದನ್ನು ವಿರೋದಿಸಿ ಶೌರ್ಯ ತೋರಿದ ಚೈತ್ರಾ ಕುಂದಾಪುರ ಅವರನ್ನು ಹಾಡಿ ಹೊಗಳಿದ ರಕ್ಷಣಾ ಸಚಿವೆ..!
ನೆನ್ನೆ ಸೋಮವಾರ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೇರಿದಂತೆ ವಿರೋದ ಪಕ್ಷಗಳು ಕರೆ ನೀಡಿದ ಭಾರತ ಬಂದ್ ವಿಪಲವಾಗಿದ್ದು, ಹಲವೆಡೆ ಒತ್ತಾಯ ಪೂರ್ವಕ ಅಂಗಡಿ ಬಾಗಿಲು ಹಾಕಿಸಿದ ಗಟನೆಗಳು ನಡೆದಿವೆ. ಅಂತೆಯೇ ಉಡುಪಿಯಲ್ಲಿ ಬಂದ್ ವೇಳೆ ಒತ್ತಾಯ ಪೂರ್ವಕ ಅಂಗಡಿ ಬಾಗಿಲು ಹಾಕಿಸಿದ ಸಮಯದಲ್ಲಿ ಅವರನ್ನು ಶೌರ್ಯದಿಂದ ವಿರೋದಿಸಿದ ಚೈತ್ರಾ ಕುಂದಾಪುರ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ.
ಕರಾವಳಿಯ ಹಿಂದೂ ಪೈರ್ ಬ್ರಾಂಡ್ ಎಂದೇ ಕ್ಯಾತಿ ಗಳಿಸಿರುವ ಚೈತ್ರಾ ಅವರು ಉಡುಪಿಯ ಕಡಿಯಾಳಿ ಎಂಬ ಪ್ರದೇಶದ ಹೋಟೆಲ್ ಒಂದರಲ್ಲಿ ತಿಂಡಿ ತಿನ್ನುತ್ತಿರುವ ಸಂದರ್ಭದಲ್ಲಿ, ಕಾಂಗ್ರೆಸ್ ಕಾರ್ಯಕರ್ತರು ಅಲ್ಲಿಗೆ ಬಂದು ತಿಂಡಿ ತಿನ್ನುತ್ತಿದ್ದವರನ್ನು ಬಲವಂತವಾಗಿ ಹೊರಕ್ಕೆ ಕಳುಹಿಸಿದರು. ಅಲ್ಲದೇ ಅಂಗಡಿಯ ಶಟರ್ ಎಳೆದು ಬಂದ್ ಮಾಡಲು ಒತ್ತಾಯಿಸಿದರು. ಇದನ್ನು ನೋಡಿ ಕೋಪಗೊಂಡ ಚೈತ್ರಾ ಕುಂದಾಪುರ ಅವರು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಬಂದು ಏರುದನಿಯಲ್ಲಿ ಮೋದಿ ಪರ ಜೈಕಾರವನ್ನು ಹಾಕಲು ಪ್ರಾರಂಭಿಸಿದರು. ಒಬ್ಬಳೇ ಮಹಿಳೆ ಸುಮಾರು ಎರಡು ನೂರಕ್ಕಿಂತಲೂ ಹೆಚ್ಚಿರುವ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಶೌರ್ಯದಿಂದ ಮೋದಿ ಪರ ಘೋಷಣೆ ಕೂಗುತ್ತಿರುವುದರಿಂದ ಒಮ್ಮೆಲೆ ಕಾರ್ಯಕರ್ತರು ಕಕ್ಕಾಬಿಕ್ಕಿಯಾದರು. ಈ ಸಂಧರ್ಭದಲ್ಲಿ ತಳ್ಳಾಟಗಳು ನಡೆದು ಚೈತ್ರಾ ಕುಂದಾಪುರ ಅವರಿಗೆ ಚಿಕ್ಕ ಪುಟ್ಟ ಗಾಯಗಳು ಉಂಟಾದವು.
ತಾನೊಬ್ಬಳು ಹೆಣ್ಣುಮಗಳಾಗಿದ್ದರೂ ಯಾರಿಗೂ ಅಂಜದೇ ಮೋದಿ ಪರ ಘೋಷಣೆ ಕೂಗಿದ ವಿಡಿಯೋ ತುಂಬಾ ಸದ್ದು ಮಾಡುತ್ತಿದೆ. ಅಲ್ಲದೆ ಈ ವಿಡಿಯೋವನ್ನು ನಮ್ಮ ರಕ್ಷಣಾ ಸಚಿವೆ ನಿರ್ಮಲಾ ನೀತಾರಾಮನ್ ಅವರು ಶೇರ್ ಮಾಡಿ , "ಈ ಯುವತಿ ಭಾರತ್ ಬಂದ್ ಸಂದರ್ಭದಲ್ಲಿ ತೋರಿರುವ ಧೈರ್ಯ ಮತ್ತು ಮೋದಿ ಸರಕಾರದ ಮೇಲೆ ಇಟ್ಟಿರುವ ನಂಬಿಕೆ ಗಮನಾರ್ಹವಾಗಿದೆ. ದೇಶದ ಇತರ ಪ್ರದೇಶಗಳಲ್ಲಿಯೂ ಜನರು ಭರತ್ ಬಂದನ್ನು ತಿರಸ್ಕರಿಸಲು ಹೊರಬಂದಿದ್ದಾರೆ. ಕಾಂಗ್ರೆಸ್ಸಿನ ಬೂಟಾಟಿಕೆಯನ್ನು ಬಹಿರಂಗವಾಗಿ ವಿರೋಧಿಸಿದ ಎಲ್ಲರಿಗೂ ಧನ್ಯವಾದಗಳು" ಎಂದು ಟ್ವೀಟ್ ಮಾಡಿದ್ದಾರೆ.
The grit & dare this young girl has shown in demonstrating the trust & faith she has in our @PMOIndia @narendramodi is noteworthy. In other places too many citizens have come out today to condemn #BharatBandh. Thanks to all those who have so openly rejected @INCIndia’s hypocrisy. https://t.co/Fe5iGCUUN0— Nirmala Sitharaman (@nsitharaman) September 10, 2018
No comments