ಪಾಕ್ ಗಡಿಯಲ್ಲಿ ಉಗ್ರರ ನುಸುಳುವಿಕೆ ತಡೆಯುವ ಸ್ಮಾರ್ಟ್ ಬೇಲಿಗೆ ಚಾಲನೆ..!
ಭಾರತ -ಪಾಕ್ ಗಡಿಯಲ್ಲಿ ಒಳ ನುಸುಳುಕೊರರನ್ನು ತಡೆಗಟ್ಟಲು ಪ್ರಾಯೋಗಿಕವಾಗಿ ನಿರ್ಮಿಸಲಾದ 5 ಕಿ.ಮೀ. ಉದ್ದದ ಎರಡು ಸ್ಮಾರ್ಟ್ ಬೇಲಿಯನ್ನು ಇಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಉದ್ಗಾಟನೆ ಮಾಡಿದರು.
ಪಾಕಿಸ್ತಾನದೊಂದಿಗೆ ಭಾರತವು 3,323 ಕಿ.ಮೀ. ನಷ್ಟು ಗಡಿ ಪ್ರದೇಶವನ್ನು ಹಂಚಿಕೊಂಡಿದ್ದು, ಅವುಗಳ ಮೂಲಕ ಒಳ ನುಸುಳುಕೊರರನ್ನು ತಡೆಗಟ್ಟುವ ಮತ್ತು ದೇಶದ ಭದ್ರತೆಯ ದೃಷ್ಟಿಯಿಂದ ತಂತ್ರಜ್ಞಾನದ ಬಳಕೆಯನ್ನು ಮಾಡಿಕೊಳ್ಳಬೇಕೆಂಬ ಉದ್ದೇಶದಿಂದ ಅನುಮೋದನೆಗೆ ತಂದ ಯೋಜನೆ ಇದಾಗಿದೆ. ಈ ಯೋಜನೆಯ ಮೊದಲ ಹಂತವಾಗಿ 5 ಕಿ.ಮೀ. ಉದ್ದದ ಎರಡು ಸ್ಮಾರ್ಟ್ ಬೇಲಿಯನ್ನು ನಿರ್ಮಿಸಲಾಗಿದ್ದು, ಇವುಗಳ ಪೈಕಿ ಒಂದನ್ನು ಸ್ಲೊವೇನಿಯಾದ ಕಂಪನಿ ಮತ್ತೊಂದನ್ನು ಭಾರತದ ಕಂಪನಿಯೇ ನಿರ್ಮಿಸಿದೆ. ಈ ನೂತನ ಬೇಲಿಗಳನ್ನು ದೇಶದ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ನಿಮಿತ್ತ ದೇಶದ ಜನತೆಗೆ ಉಡುಗೊರೆಯಾಗಿ ಇಂದು ಸೆಪ್ಟೆಂಬರ್ 17 ರಂದು ಲೋಕಾರ್ಪಣೆ ಮಾಡಲಾಯಿತು.
ಏನಿದು ಈ ಸ್ಮಾರ್ಟ್ ಬೇಲಿ..?
ಭಾರತ-ಪಾಕಿಸ್ತಾನ ಗಡಿಯಲ್ಲಿ ತಂತಿ ಬೇಲಿ ಮತ್ತು ಸೈನಿಕರ ಕಣ್ಗಾವಲು ವ್ಯವಸ್ಥೆ ಇದ್ದು, ಆ ಪ್ರದೇಶಗಳಲ್ಲಿ ಹಿಮಪಾತಗಳಿಂದ ಬೇಲಿಯು ಹಾಲಾಗಿತ್ತಿದ್ದು ಅಲ್ಲದೇ ಸೈನಿಕರ ಕಣ್ಣು ತಪ್ಪಿಸಿ ದೇಶದ ಗಡಿಯೊಳಗೆ ಬಯೋತ್ಪಾದಕರು ನುಸುಳುತ್ತಿದ್ದಾರೆ. ಇವುಗಳನ್ನು ತಪ್ಪಿಸುವ ಸಲುವಾಗಿ - ತಂತ್ರಜ್ಞಾನ ಆಧಾರಿತ ಕಣ್ಗಾವಲು ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಇದು ಮಳೆ, ಗಾಳಿ, ಹಿಮಪಾತ, ಬಿರುಗಾಳಿಗಳಿಗೆ ಜಗ್ಗದೇ ಸರ್ವಋತುಗಳಲ್ಲಿಯೂ ಕಣ್ಗಾವಲು ಕಾಯುವ ತಂತ್ರಜ್ಞಾನವನ್ನೇ ಸ್ಮಾರ್ಟ್ ಬೇಲಿ ಎನ್ನಲಾಗುತ್ತದೆ.
ಈ ಬೇಲಿಯೂ ಇನ್ನುಮುಂದೆ ಬೇಲಿಯ ಹತ್ತಿರದಲ್ಲಿನ ಚಲನವಲನಗಳನ್ನು, ಸಂಪರ್ಕಗಳನ್ನು ಮತ್ತು ರಾತ್ರಿಯ ಹೊತ್ತಿನಲ್ಲಿ ಮಾನವನ ಒಳನುಸುಳುವಿಕೆಯ ಪ್ರಯತ್ನಗಳನ್ನು ಆದಾರ ಸಮೇತವಾಗಿ ತನ್ನ ಮುಖ್ಯ ಕಚೇರಿಗೆ ತಿಳಿಸಲಿದೆ. ಈ ಕಾರ್ಯಕಾಗಿ ಥರ್ಮಲ್ ಇಮೆಜರ್, ಭೂಗತ ಸೇನ್ಸಾರಗಳು, ಫೈಬರ ಆಪ್ಟಿಕಲ್ ಸೇನ್ಸಾರಗಳು ಮತ್ತು ರೇಡಾರ್ ಸೋನಾರ್ ಗಳಂತಹ ಉಪಕರಣಗಳು ದೇಶದ ಗಡಿಯ ಭದ್ರತೆಯನ್ನು ಇನ್ನೂ ಹೆಚ್ಚಿಗೆ ಮಾಡಲಿವೆ. ಇವುಗಳ ಸಹಾಯದಿಂದಾಗಿ ನೀರು, ಗಾಳಿ ಮತ್ತು ಸುರಂಗಗಳ ಮೂಲಕವೂ ಗಡಿ ಪ್ರವೇಶಿಸುವುದು ಅಸಾದ್ಯವಾಗಲಿದೆ. ಅಲ್ಲದೇ ಸಿಸಿಕೆಮರಾಗಳ ಮೂಲಕ ಸೇನಾ ನೆಲೆಗಳಿಗೆ ಮಾಹಿತಿ ದೊರೆಯುವ ತಂತ್ರಜ್ಞಾನ ಸಹ ಇರುವುದರಿಂದ ಅವಶ್ಯವಿದ್ದಲ್ಲಿ ಸೇನೆಯಿಂದ ತಕ್ಷಣ ಕ್ರಮಕೈಗೊಲ್ಲಬಹುದು.
ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಭಾರತವು ತನ್ನ ಭದ್ರತೆಯನ್ನು ಹೆಚ್ಚಿಸಿಕೊಳ್ಳಲಿದೆ. ಇದರಿಂದ ನದಿಗಳಲ್ಲಿ, ತೀವ್ರ ಹಿಮಪಾತವಾಗುವ ಪ್ರದೇಶಗಳಲ್ಲಿ ಮತ್ತು ಸುರಂಗಗಳ ಮೂಲಕ ಒಳನುಸುಳುವಿಕೆ ಸಂಪೂರ್ಣ ನಿಲ್ಲಲಿದೆ. ಭದ್ರತಾ ಪಡೆಗಳು ಬೊಟ್ ಗಳ ಮೂಲಕ ನದಿಗಳಲ್ಲಿ ಮತ್ತು ಮರುಭೂಮಿಯ ಗಡಿಭಾಗದಲ್ಲಿ ಅತೀ ಕಷ್ಟದ ಪ್ರದೇಶಗಳಲ್ಲಿಯೂ ಭದ್ರತೆ ನಿಡುತ್ತಿರುವುದನ್ನು ನಾವು ಇಂದು ಕಾಣಬಹುದು. ಈ ತಂತ್ರಜ್ಞಾನವನ್ನು ಪೂರ್ಣ ಗಡಿಪ್ರದೇಶಗಳಿಗೆ ವಿಸ್ತರಿಸುವುದರಿಂದ ಸೈನಿಕರ ಶ್ರಮ ಕಡಿಮೆ ಮಾಡಬಹುದು. ಈ ತಂತ್ರಜ್ಞಾನವು ಭಾರತ-ಪಾಕ್ ಗಡಿಪ್ರದೆಶಗಳಿಗೆ ಸಂಪೂರ್ಣವಾಗಿ ಸಿಗುವಂತಾಗಲಿ ಎಂದು ಆಶಿಸೋಣ...
No comments