ವಿವೋ ವಿ 11 ಪ್ರೋ ಸ್ಮಾರ್ಟ್ ಫೋನ್ ನ ವಿಶೇಷತೆಗಳು
ವಿವೋ ಕಂಪನಿಯ ವಿ 11 ಪ್ರೋ ಸ್ಮಾರ್ಟ್ ಫೋನ್ ಈಗ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದ್ದು ,ಅದರ ವಿಶೇಷತೆಗಳನ್ನು ತಿಳಿಸುವ ಸಣ್ಣ ಪ್ರಯತ್ನ ನಮ್ಮ ಕಡೆಯಿಂದ.
ವಿವೋ ವಿ 11 ಪ್ರೋ ಸ್ಮಾರ್ಟ್ ಫೋನ್ ನನ್ನು ಕಳೆದ ಸೆಪ್ಟೆಂಬರ್ 2018 ರಲ್ಲಿ ಬಿಡುಗಡೆ ಮಾಡಲಾಗಿದೆ. ಈ ಫೋನ್ ಬಿಡುಗಡೆಯಾದಾಗಿನಿಂದಲೂ ಜನರನ್ನು ತನ್ನತ್ತ ಸೆಳೆಯುತ್ತಿದೆ. ಉತ್ತಮ ವಿನ್ಯಾಸದೊಂದಿಗೆ ಪಿಂಗರ್ ಪ್ರಿಂಟ್ ಸೇನ್ಸರನ್ನು ಮುಂದಿನ ಸ್ಕ್ರಿನಲ್ಲಿಯೇ ನೀಡಿರುವುದು ವಿಶೇಷವಾಗಿದೆ. ಅತ್ಯಂತ ದೊಡ್ಡದಾದ 6.41 ಇಂಚಿನ ಟಚ್ ಸ್ಕ್ರೀನ್ ಡಿಸ್ಪ್ಲೆಯನ್ನು ಇದು ಹೊಂದಿದೆ.
ವಿವೋ ವಿ 11ಪ್ರೋ ನಲ್ಲಿ 2.2GHz ವೇಗದೊಂದಿಗೆ ಕೆಲಸ ನಿರ್ವಹಿಸುವ ಸ್ನಾಪ್ ಡ್ರಾಗನ್ 660 ಪ್ರೋಸೆಸರ್ ದೊರೆಯಲಿದೆ. ಅಲ್ಲದೇ ಇದು ಉತ್ತಮ ಮತ್ತು ಹೊಚ್ಚ ಹೊಸದಾದ ಪ್ರೋಸೆಸರ್ ಆಗಿದ್ದು, ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಲಿದೆ. 6 GB RAM ಮತ್ತು 128 GB ಯ ಆಂತರಿಕ ಮೆಮೊರಿಯನ್ನು ಹೊಂದಿದೆ. ಅಲ್ಲದೇ ಮೆಮೊರಿಯನ್ನು ಹೆಚ್ಚಿಸಿಕೊಳ್ಳಲು ಮೈಕ್ರೋ ಎಸ್ ಡಿ ಕಾರ್ಡ್ ನ್ನು ಅಳವಡಿಸುವ ಸ್ಲಾಟನ್ನು ನೀಡಲಾಗಿದೆ.
ಇನ್ನು ಕೆಮರಾಗಳ ವಿಷಯಕ್ಕೆ ಬಂದರೆ 15 ಮೆಗಾ ಪಿಕ್ಸೆಲ್ ಮತ್ತು 5 ಮೆಗಾ ಪಿಕ್ಸೆಲ್ ಸಾಮರ್ಥ್ಯದ ಎರಡು ರೆಯರ್ ಕೆಮರಾವನ್ನು ಹೊಂದಿದೆ. ಸೇಲ್ಪಿಯನ್ನು ತೆಗೆಯುವ ಸಲುವಾಗಿ ಮುಂದೆ 25 ಮೆಗಾ ಪಿಕ್ಸೆಲ್ ಸಾಮರ್ಥ್ಯದ ಕೆಮರಾವನ್ನು ನೀಡಲಾಗಿದೆ.
ವಿವೋ ವಿ 11ಪ್ರೋ ನಲ್ಲಿ 6.41 ಇಂಚಿನ ಟಚ್ ಸ್ಕ್ರೀನ್ ಡಿಸ್ಪ್ಲೆಯನ್ನು ನೀಡಲಾಗಿದ್ದು, 1080 X 2340 ಪಿಕ್ಸೆಲ್ ರೆಸಲ್ಯೂಶನ್ ನ್ನು ನೀಡಲಾಗಿದೆ. ಪುಲ್ ಹೆಚ್ ಡಿ ಡಿಸ್ಪ್ಲೆ ಆಗಿದ್ದು, ಚಿಕ್ಕದಾದ ನಾಚ್ ನ್ನು ಹೊಂದಿದೆ.
ವಿವೋ ವಿ 11ಪ್ರೋ ಎರಡು ನ್ಯಾನೋ ಮತ್ತು ಅವೆರಡು 4 G VolTE ಸಿಗ್ನಲ್ನಲ್ಲಿ ಕಾರ್ಯನಿರ್ವಹಿಸಲಿವೆ. ಪಿಂಗರ್ ಪ್ರಿಂಟ್ ಸೆನ್ಸಾರ್ ನ್ನು ಮುಂದಿನ ಸ್ಕ್ರೀನ್ ನಲ್ಲಿಯೇ ನೀಡಲಾಗಿದ್ದು, ಸ್ಲಿಮ್ ಮತ್ತು ಹಗುರವಾದ ಪ್ಲಾಸ್ಟಿಕ್ ಬಾಡಿಯನ್ನು ನೀಡಲಾಗಿದೆ. ಅಗತ್ಯವಾದ 3400 mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದ್ದು, ಒಂದು ದಿನದ ಉಪಯೋಗಕ್ಕೆ ಯಾವುದೇ ತೊಂದರೆಯಾಗದಂತೆ ಶಕ್ತಿಯನ್ನು ನೀಡುತ್ತದೆ. ಇತ್ತೀಚಿನ ಅನ್ದ್ರೊಇದ್ 8 . 1 ಒರಿಯೋ ಆಪರೇಟಿಂಗ್ ಸಾಪ್ಟ್ವೇರ್ ನ್ನು ನೀಡಿದ್ದು, ಒಪ್ಪೋ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ವಿವೋ ವಿ 11ಪ್ರೋ ಸ್ಮಾರ್ಟ್ ಫೋನ್ ಅಮೆಜಾನ್ ಮತ್ತು ಪ್ಲಿಪ್ ಕಾರ್ಟ್ ಗಳಲ್ಲಿ ಲಬ್ಯವಿದ್ದು ಕೇವಲ 25,990/- ರುಪಾಯಿಗಳನ್ನು ನಿಗದಿಪಡಿಸಲಾಗಿದೆ.
ವಿವೋ ವಿ 11ಪ್ರೋ ಸ್ಮಾರ್ಟ್ ಫೋನ್ ನ್ನು ಪ್ಲಿಪ್ ಕಾರ್ಟ್ ನಲ್ಲಿ ಕರೀದಿಸಲು ಇಲ್ಲಿ ಕ್ಲಿಕ್ ಮಾಡಿ....
ವಿವೋ ವಿ 11ಪ್ರೋ ಸ್ಮಾರ್ಟ್ ಫೋನ್ ನ್ನು ಅಮೆಜಾನ್ ನಲ್ಲಿ ಕರೀದಿಸಲು ಇಲ್ಲಿ ಕ್ಲಿಕ್ ಮಾಡಿ....
No comments