Breaking News

ಪಾಕಿಸ್ತಾನದ ಮೇಲೆ ಸೇಡು ತೀರಿಸಿಕೊಳ್ಳಲು ನಾವು ಸಿದ್ಧ - ಸೇನಾ ಮುಖ್ಯಸ್ಥ ಬಿಪಿನ್ ರಾವತ್

bipin-rawat-comment-on-pakistan

ಕಾಶ್ಮೀರದ ಗಾಡಿಯಲ್ಲಿ ಸೇನೆಯ ಮೇಲೆ ನಡೆಸುತ್ತಿರುವ ಬರ್ಬರ ಕ್ರತ್ಯಗಳ ಕುರಿತು ಮಾತನಾಡುತ್ತ, ಪಾಕಿಸ್ತಾನದ ಸೇನೆ ಮತ್ತು ಉಗ್ರರ ವಿರುದ್ಧ ಸೇಡು ತೀರಿಸಿಕೊಳ್ಳುವುದು ಅವಶ್ಯವಾಗಿದೆ. 

ಈ ಸಂಧರ್ಭದಲ್ಲಿ ಮಾತನಾಡುತ್ತ,  "ಮಾತುಕತೆ ಮತ್ತು ಉಗ್ರವಾದ" ಎರಡೂ ಒಟ್ಟಿಗೆ ಸಾದ್ಯವಿಲ್ಲ. ಪಾಕಿಸ್ತಾನದ ಪ್ರಧಾನಿ,  ದ್ವಿಪಕ್ಷೀಯ ಮಾತುಕತೆಯನ್ನು ಮೊಟಕುಗೊಳಿಸಿದ ಕುರಿತು ಭಾರತದ ಈ ನಡೆ "ಸೊಕ್ಕಿನ ಮತ್ತು ನಕಾರಾತ್ಮಕ ನಿರ್ಧಾರವಾಗಿದೆ" ಎಂದು ಹೇಳಿಕೆ ನೀಡಿರುವ ಕುರಿತು ಕಟುವಾಗಿ ಟೀಕಿಸಿದರು.  

ಇತ್ತೀಚಿಗೆ ಗಡಿ ಪ್ರದೇಶದಲ್ಲಿ ಕರ್ತವ್ಯ ನಿರತ ಬಿ ಎಸ್ ಎಪ್  ಯೋದನ ಕಟ್ಟು ಸೀಳಿ ಹತ್ಯೆ ಮತ್ತು ಮೂವರು ಪೋಲಿಸ್ ಅಧಿಕಾರಿಗಳ ಕೊಲೆಯ ಹಿಂದಿನ ಬರ್ಬರತೆಗೆ ತಕ್ಕ ಪ್ರತ್ಯುತ್ತರ ನೀಡುವ ಅವಶ್ಯಕತೆ ಇದೆ ಎಂದು ಹೇಳಿದರು. ಪಾಕಿಸ್ತಾನದ ಸೇನೆ ಮತ್ತು ಉಗ್ರರ ಮೇಲೆ ಸೇಡು ತೀರಿಸಿಕೊಳ್ಳಲು ನಾವು ಸಿದ್ಧ.  ಸರಿಯಾದ ಪ್ರತ್ಯುತ್ತರ ನೀಡಿದರೆ ಮಾತ್ರ ಪಾಕಿಸ್ತಾನ ಮುಂದೆ ಇಂತಹ ಕೃತ್ಯಕ್ಕೆ ಮುಂದಾಗಲಾದು  ಎಂದು ಆಕ್ರೋಶ ಭರಿತರಾಗಿ ಹೇಳಿದರು.


ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ಸೆಪ್ಟೆಂಬರ್ ೧೦ ರಂದು ದೊರೆತ ವೀರ ಮರಣವನ್ನಪ್ಪಿದ  ಬಿ ಎಸ್ ಎಪ್ ಯೋಧನ ದೇಹದ ಮೇಲೆ ಅನೇಕ ಗುಂಡಿನ ಗಾಯಗಳು ಆಗಿದ್ದವು. ಅಷ್ಟೇ ಅಲ್ಲದೇ ಆತನ ಕತ್ತನ್ನು ಹರಿತವಾದ ಆಯುಧದಿಂದ ಸೀಲಲ್ಪಟ್ಟಿತ್ತು. ಆತನ ಕಣ್ಣುಗಳು ಕಿಳಲ್ಪಟ್ಟಿದ್ದವು. ಇದಕ್ಕೆ ತಕ್ಕ ಪ್ರತಿಫಲವನ್ನು ನೀಡಲು ನಾವು ಶಕ್ತರಿದ್ದೇವೆ.ಕಾರ್ಯಾಚರಣೆಯನ್ನು ಹೇಗೆ ಕೈಗೊಳ್ಳಬೇಕು ಎಂಬ ಕುರಿತು ಸರಕಾರವು ನಮಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದೆ. ನಾವು ಇದ್ದಕ್ಕೆ ಪ್ರತಿಕಾರವನ್ನು ತೆಗೆದುಕೊಳ್ಳಲಿದ್ದೇವೆ ಎಂದು ಎಚ್ಚರಿಕೆಯನ್ನು ನೀಡಿದರು. 





SPONSORED CONTENT



No comments