2022 ರೊಳಗೆ ಪ್ರತಿಯೊಂದು ಕುಟುಂಬ ಸ್ವಂತ ಮನೆ ಹೊಂದುವುದು ನನ್ನ ಕನಸು - ಪ್ರಧಾನಿ ಮೋದಿ
![]() |
ಗುಜರಾತಿನ ವಲ್ಸಾದ ಜ್ಯೂಜ್ವಾದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ |
2022 ಕ್ಕೆ ಭಾರತ ಸ್ವಾತಂತ್ರ್ಯ ಪಡೆದು 75 ವರ್ಷಗಳು ತುಂಬುತ್ತಿದ್ದು, ಅಷ್ಟರೊಳಗೆ ದೇಶದ ಪ್ರತಿಯೊಂದು ಕುಟುಂಬವು ಸ್ವಂತ ಮನೆಯನ್ನು ಹೊಂದುವಂತಾಗಬೇಕು ಎಂಬುದು ನನ್ನ ಕನಸು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಗುಜರಾತಿನ ವಲ್ಸಾದ ಜ್ಯೂಜ್ವಾದಲ್ಲಿ ಪ್ರಧಾನ್ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಬಳಿಕ ಮಾತನಾಡಿದ ಅವರು ಈ ಯೋಜನೆಯಿಂದ ಪ್ರತಿಯೊಬ್ಬರೂ ಉತ್ತಮ ಗುಣಮಟ್ಟದ ಮನೆಗಳನ್ನು ಯಾರಿಗೂ ಲಂಚ ನೀಡದೆ ಕಟ್ಟಿಕೊಳ್ಳಬಹುದಾಗಿದೆ ಎಂದರು.
ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಡಿ ಕಟ್ಟಲಾದ ಮನೆಗಳ ಗುಣಮಟ್ಟವನ್ನು ನೋಡಿ ಸರಕಾರವು ಹಣ ನೀಡಿದೆ ಎಂದು ತಿಳಿದಿದ್ದೆ, ಆದರೆ ಅದರಲ್ಲಿ ಪ್ರತಿ ಕುಟುಂಬದ ಬೆವರು ಸಹ ಸೇರಿದೆ ಎಂದು ಹೇಳಿದರು. ಹೇಗೆ ಮನೆಯನ್ನು ಕಟ್ಟಬೇಕು, ಅವಶ್ಯಕತೆಗಳೇನು, ಏನೆಲ್ಲಾ ಸಾಮಗ್ರಿಗಳು ಬೇಕಾಗುತ್ತದೆ ಎಂದೆಲ್ಲಾ ಕುಟುಂಭಗಳೇ ನಿರ್ದರಿಸುತ್ತಿದ್ದಾರೆ. ಗುತ್ತಿಗೆ ದಾರರನ್ನು ಬಿಟ್ಟು ಕುಟುಂಬಗಳೇ ಮನೆ ನಿರ್ಮಾಣ ಮಾಡಿದರೆ ಅದರ ಗುಣಮಟ್ಟ ಉತ್ತಮವಾಗಿರುತ್ತದೆ. ಕಾನೂನು ಬದ್ದವಾಗಿ ಮನೆಯನ್ನು ಪಡೆಯುತ್ತಿರುವ ಬಗ್ಗೆ ತಾಯಂದಿರು ಮತ್ತು ಸಹೋದರಿಯರು ಸಂತೃಪ್ತಿ ಹೊಂದಿದ್ದಾರೆ ಎಂದು ಹೇಳಿದರು.
2022 ರೊಳಗೆ ಪ್ರತಿಯೊಂದು ಕುಟುಂಬವು ಸ್ವಂತ ಮನೆಯೊಂದಿಗೆ ಸ್ವಾವಲಂಭಿಯಾಗಿ ಬದುಕುವಂತಾಗಬೇಕು. ಪ್ರತಿಯೊಬ್ಬರಿಗೂ ಸ್ವಂತ ಮನೆ ಇರಬೇಕೆಂಬುದು ನನ್ನ ಕನಸು ಅದು ಸ್ವಾತಂತ್ರ್ಯ ಬಂದ 75 ವರ್ಷದ ಸಂಭ್ರಮದಲ್ಲಿ ಸಾಕಾರವಾಗಬೇಕೆಂದು ಬಯಸುತ್ತೇನೆ ಎಂದು ಮನದ ಇಂಗಿತವನ್ನು ತಿಳಿಸಿದರು.
ಕೇಂದ್ರ ಸರಕಾರ ಎಲ್ಲರಿಗೂ ಮನೆ ಒದಗಿಸುವ ಉದ್ದೇಶದಿಂದ ಪ್ರಮುಖ ಯೋಜನೆಯಡಿ ಗುಜರಾತಿನಲ್ಲಿ ಒಂದು ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ ಎಂದು ಅವರು ತಿಳಿಸಿದರು.
No comments