Breaking News

ಮುಖ್ಯಮಂತ್ರಿಗಳ ಮಾನವೀಯ ಮುಖ: ಬೀದಿಯಲ್ಲಿ ಹೂ ಮಾರುವ ಹುಡುಗಿಯ ಕಷ್ಟಕ್ಕೆ ಸ್ಪಂದಿಸಿದ ಸಿಎಂ..!

cm-kumaraswamy-helps-flower-selling-girl-for-her-education
ಮುಖ್ಯಮಂತ್ರಿ ಕುಮಾರಸ್ವಾಮಿ ಹೂ ಮಾರುತ್ತಿರುವ ಬಾಲಕಿಯ ಸಂಕಷ್ಟ ಆಲಿಸುತ್ತಿರುವುದು 
 ಮಂಡ್ಯ: ಬೀದಿಯಲ್ಲಿ ಹೂ ಮಾರುತ್ತಿದ್ದ ಬಾಲಕಿಯೊಬ್ಬಳ ಸಂಕಷ್ಟಕ್ಕೆ ಸ್ಪಂದಿಸುವ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮಲ್ಲಿರುವ ಮಾನವೀಯ ಗುಣವನ್ನು ತೋರಿಸಿದ ಮತ್ತೊಂದು ಘಟನೆ ನಿನ್ನೆ ಬೆಳಗೋಳದಲ್ಲಿ ನಡೆದಿದೆ. 

ನಿನ್ನೆ ಬುಧವಾರ ಕೆ.ಆರ್.ಎಸ್. ನಿಂದ ರಾಮನಗರಕ್ಕೆ ಹೋಗುತ್ತಿದ್ದ ಮುಖ್ಯಮಂತ್ರಿ ಮಾರ್ಗದ ನಡುವೆ ಶ್ರೀರಂಗಪಟ್ಟಣ ರಸ್ತೆಯ ಬೆಳಗೋಳದಲ್ಲಿ, ರಸ್ತೆಯಲ್ಲಿ ಹೂ ಮಾರುತ್ತಿರುವ ಬಾಲಕಿಯನ್ನು ಗಮನಿಸಿದ್ದಾರೆ. ತಕ್ಷಣ ಕಾರನ್ನು ನಿಲ್ಲಿಸಿ ಅವಳ ಕಷ್ಟವನ್ನು ಆಲಿಸಿದ್ದಾರೆ. 

ಬಾಲಕಿ ಶಾಬಾಬ್ತಾಜ್ ತನ್ನ ಕುಟುಂಬದ ಸಂಕಷ್ಟವನ್ನು ಮುಖ್ಯಮಂತ್ರಿಗಳ ಬಳಿಯಲ್ಲಿ ಹೇಳಿಕೊಂಡಿದ್ದಾಳೆ. ಆಕೆಗೆ ಅವಳ ತಂದೆ ತಾಯಿಯನ್ನು ತನ್ನ ಬೇಟಿಯಾಗಲು ಹೇಳಿದ ಅವರು ಬಾಲಕಿಯ ಶಿಕ್ಷಣಕ್ಕೆ ನೆರವು ನೀಡುವ ಭರವಸೆಯನ್ನು ನೀಡಿದ್ದಾರೆ ಎನ್ನಲಾಗಿದೆ. 

ಬೆಳಗೋಳದ ಮತ್ತು ರಾಜ್ಯದ ಜನತೆ ಮುಖ್ಯಮಂತ್ರಿಗಳ ಈ ಮಾನವೀಯ ಕಾರ್ಯಕ್ಕೆ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ. ಮುಖ್ಯಮಂತ್ರಿಗಳು ಹೀಗೆ ಸಹಾಯ ಹಸ್ತ ಚಾಚುತ್ತಿರುವುದು ಇದೆ ಮೊದಲೇನು ಅಲ್ಲ, ಈದಕ್ಕೂ  ಹಿಂದೆ ಬೆಂಗಳೂರಿನ ಜೆಪಿ ನಗರದ ಮಕ್ಕಳ ಸಂಕಷ್ಟಕ್ಕೆ ಸಹ ಇವರು ಕಿವಿಯಾಗಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು. 




 SPONSORED CONTENT


No comments