ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಇನ್ನಿಲ್ಲ
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಡಿ.ಎಂ.ಕೆ. ಮುಖ್ಯಸ್ಥ ಎಂ. ಕರುಣಾನಿಧಿ ಯವರು ಇಂದು ಸುಮಾರು 6.10 ನಿಮಿಷಕ್ಕೆ ಬಹು ಅಂಗಾಂಗ ವೈಪಲ್ಯದಿಂದಾಗಿ ನಿಧನರಾದರು.
ಬಹುಅಂಗಾಂಗ ವೈಪಲ್ಯದಿಂದಾಗಿ ಹದಿನೈದು ದಿನಗಳಿಂದ ಕಾವೇರಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತಿತ್ತು. ಅವರನ್ನು ಉಳಿಸಿಕೊಳ್ಳುವ ಎಲ್ಲ ಪ್ರಯತ್ನಗಳನ್ನು ಮಾಡಿಯೂ ಅವರು ಅದಕ್ಕೆ ಸ್ಪಂಧಿಸದೆ ಮಂಗಳವಾರ ಅಂದರೆ ಇಂದು 6.10 ಸಮಯಕ್ಕೆ ಕೊನೆಯುಸಿರೆಳೆದರು ಎಂದು ಕಾವೇರಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಕರುಣಾನಿಧಿ ಅವರ ನಿಧನಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ರಾಜ್ಯದ ಹಲವಾರು ಗಣ್ಯರು ಮತ್ತು ರಾಜಕೀಯ ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ. ಕರುಣಾನಿಧಿಯವರ ನಿಧನದ ಪ್ರಯುಕ್ತ ನಾಳೆ ರಾಜ್ಯದಲ್ಲಿ ಒಂದು ದಿನ ಶೋಕಾಚರಣೆ ಘೋಷಿಸಿದ್ದು, ಯಾವುದೇ ಸಾರ್ವಜನಿಕ ಸಮಾರಂಭಗಳು ಮತ್ತು ಮನರಂಜನಾ ಕಾರ್ಯಕ್ರಮಗಳು ಇರುವುದಿಲ್ಲ ಎಂದು ತಿಳಿಸಿದ್ದಾರೆ.
“ ಕಲೈ ಇರ್ ಕರುಣಾನಿಧಿ ನಿಧನದ ಸುದ್ದಿ ಕೇಳಿ ಬೇಸರಗೊಂಡಿದ್ದೇನೆ. ಅವರು ದೇಶದ ಹಿರಿಯ ನಾಯಕರಲ್ಲೊಬ್ಬರು, ನಾವು ಇಂದು ಚಿಂತಕ, ಬರಹಗಾರ, ತಳಮಟ್ಟದ ನಾಯಕರೊಬ್ಬರನ್ನು ಕಳೆದುಕೊಂಡಿದ್ದೇವೆ” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ರಾಷ್ಟ್ರಪತಿ ರಾಮನಾಥ ಕೊವಿಂದ, ಸ್ಪೀಕರ್ ಸುಮಿತ್ರಾ ಮಹಾಜನ್ , ಪಶ್ಚಿಮ್ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೇಂದ್ರ ಸಚಿವ ಸುರೇಶ ಪ್ರಭು, ಅರವಿಂದ ಕೆಜ್ರಿವಾಲ್, ಮೆಹಬೂಬ ಮುಪ್ತಿ, ಉಮರ್ ಅಬ್ದುಲಾ ಸೇರಿದಂತೆ ಅನೇಕ ರಾಜಕೀಯ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿರಿ : ಕರುಣಾನಿಧಿಗೆ ಗೌರವ, ನಾಳೆ ಅರ್ಧ ಮಟ್ಟದಲ್ಲಿ ರಾಷ್ಟ್ರಧ್ವಜ ಹಾರಾಟ
ಇದನ್ನೂ ಓದಿರಿ : ಕರುಣಾನಿಧಿಗೆ ಗೌರವ, ನಾಳೆ ಅರ್ಧ ಮಟ್ಟದಲ್ಲಿ ರಾಷ್ಟ್ರಧ್ವಜ ಹಾರಾಟ
YOU MAY ALSO LIKE
No comments