ಕರುಣಾನಿಧಿಗೆ ಗೌರವ, ನಾಳೆ ಅರ್ಧ ಮಟ್ಟದಲ್ಲಿ ರಾಷ್ಟ್ರಧ್ವಜ ಹಾರಾಟ.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಡಿ.ಎಂ.ಕೆ. ಮುಖ್ಯಸ್ಥ ಎಂ.ಕರುಣಾನಿಧಿ(94)ಯವರಿಗೆ ಗೌರವ ಸಲ್ಲಿಸಲು ನಾಳೆ ಅಂದರೆ ಬುಧವಾರ ದೆಹಲಿ ಸೇರಿದಂತೆ ಎಲ್ಲ ರಾಜ್ಯದ ರಾಜಧಾನಿಗಳಲ್ಲಿ ರಾಷ್ಟ್ರ ಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸುವಂತೆ ಕೇಂದ್ರ ಸರಕಾರ ಹೇಳಿದೆ.
ಕರುಣಾನಿಧಿಯವರು ವಿಧಿವಶರಾದ ಹಿನ್ನೆಲೆಯಲ್ಲಿ ಶೋಕಾಚರಣೆಯನ್ನು ಭಾರತ ಸರಕಾರ ಘೋಷಿಸಿದ್ದು, ಬುಧವಾರ ಯಾವುದೇ ಸಮಾರಂಭಗಳು ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ನಡೆಸದಂತೆ ಹೇಳಿದೆ. ಅಷ್ಟೆ ಅಲ್ಲದೇ ಎಲ್ಲ ರಾಷ್ಟ್ರ ರಾಜಧಾನಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅರ್ಧ ಮಟ್ಟದಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸಿ ಗೌರವ ಸಲ್ಲಿಸಲು ಹೇಳಿದೆ. ತಮಿಳು ನಾಡಿನಲ್ಲಿ ಏಳು ದಿನ ಶೋಕಾಚರಣೆ ಯಿರಲಿದ್ದು, ನಾಳೆ ರಜೆಯನ್ನು ಘೋಶೋಸಲಾಗಿದೆ. ಕರ್ನಾಟಕದಲ್ಲಿ ನಾಳೆ ಒಂದು ದಿನ ಶೋಕಾಕಾರನೆಯನ್ನು ಘೋಷಿಸಲಾಗಿದೆ.
ಇದನ್ನೂ ಓದಿರಿ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಇನ್ನಿಲ್ಲ
ಇದನ್ನೂ ಓದಿರಿ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಇನ್ನಿಲ್ಲ
YOU MAY ALSO LIKE
No comments