Breaking News

ಕೊನೆಗೂ ಮೈಸೂರು ಮುಕ್ತ ವಿವಿಗೆ ಸಿಕ್ಕಿತು ಮುಕ್ತಿ...!

ತನ್ನ ಮಾನ್ಯತೆಯನ್ನು 2013 ರಿಂದ ಕಳೆದುಕೊಂಡು ಮೈಸೂರು ಮುಕ್ತ ವಿವಿಯು ವಿದ್ಯಾರ್ಥಿಗಳಿಗೆ ಸಂಕಟವನ್ನು ತಂದೊಡ್ಡಿತ್ತು. ಆದರೆ ಈಗ ಮಾನ್ಯತೆ ಇಲ್ಲದ ಮುಕ್ತ ವಿವಿಗೆ ಮಾನ್ಯತೆಯನ್ನು ನೀಡಲು ಯುಜಿಸಿ ಮುಂದಾಗಿದ್ದು ಖುಷಿಯ ವಿಷಯವಾಗಿದೆ. 
KSOU



2013 ರಿಂದ ತನ್ನ ಮಾನ್ಯತೆಯನ್ನು ಯುಜಿಸಿಯಿಂದ ಕಳೆದುಕೊಂಡಿದ್ದ ಮುಕ್ತ ವಿವಿ ಈ ಶೈಕ್ಷಣಿಕ ಸಾಲು ಅಂದರೆ 2018-19 ಕ್ಕೆ ವಿದ್ಯಾರ್ಥಿಗಳನ್ನು ನೋಂದಣಿ ಮಾಡಿಕೊಳ್ಳುವುದಕ್ಕೆ ಅನುಮತಿ ನೀಡಲಿದೆ ಎನ್ನುವ ಸುದ್ದಿ ಬಂದಿದ್ದು ವಿದ್ಯಾರ್ಥಿ ಮತ್ತು ಸಿಬ್ಬಂಧಿ ವರ್ಗದಲ್ಲಿ ಸಂತಸ ಮನೆ ಮಾಡುವಂತೆ ಮಾಡಿದೆ.
ಮಾನ್ಯತೆ ಕಳೆದುಕೊಂಡಿದ್ದ ಸಾವಿರಾರು ವಿದ್ಯಾರ್ಥಿಗಳು ಅನೇಕ ಹೋರಾಟಗಾರರು ಮುಕ್ತ ವಿವಿಗೆ ಮಾನ್ಯತೆ ನೀಡುವಂತೆ ಅನೇಕ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದರು. ಅದರ ಪ್ರತಿಫಲ ಸದ್ಯದಲ್ಲಿಯೇ ಸಿಗುವ ಲಕ್ಷಣಗಳು ಗೋಚರಿಸುತ್ತಿವೆ. 
KSOU Logo

ಆದರೆ ಈಗಿರುವ ಗೊಂದಲ ಏನಪ್ಪ ಅಂದ್ರೆ ಇಲ್ಲಿಯವರೆಗೆ ವಿವಿಯಲ್ಲಿ ಅಕ್ರಮವಾಗಿ ಯುಜಿಸಿ ನಿಯಮ ಗಾಳಿಗೆ ತೂರಿ ವಿದ್ಯಾರ್ಥಿಗಳನ್ನು ನೇಮಕ ಮಾಡಿದ್ದರು, ಆದರೆ 2013 ರಿಂದ 18 ರವರೆಗೆ ವಿವಿಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳ ಬಗ್ಗೆ ಯಾವ ನಿರ್ಧಾರವನ್ನು ತೆಗೆದುಕೊಳ್ಳದೇ ಇರುವುದು ಆ ವಿದ್ಯಾರ್ಥಿಗಳಲ್ಲಿ ಆತಂಕ ಮನೆ ಮಾಡುವಂತೆ ಮಾಡಿದೆ.
ಸದ್ಯಕ್ಕಂತು ವಿವಿ ವಿದ್ಯಾರ್ಥಿಗಳ ನೇಮಕಕ್ಕೆ ಅನುಮತಿ ನೀಡಿರುವುದು ಒಂದು ಒಳ್ಳೆಯ ಬೆಳವಣಿಗೆ, ಉನ್ನತ ವ್ಯಾಸಂಗ ಮಾಡದೇ ಇದ್ದ ಸಾವಿರಾರು ವಿದ್ಯಾರ್ಥಿಗಳು ತಮ್ಮ ಉನ್ನತ ವ್ಯಾಸಂಗದ ಕನಸನ್ನು ನನಸು ಮಾಡಿಕೊಳ್ಳಲು ಯುಜಿಸಿ ಅವಕಾಶ ಮಾಡಿಕೊಡುತ್ತಿರುವುದೇ ಸಂತೋಷದ ಸಂಗತಿ.


YOU MAY ALSO LIKE



No comments