Breaking News

ಮೋದಿಗೆ ಚಿರಋಣಿ ಎಂದ ಕುಮಾರ ಸ್ವಾಮಿ..!

ವಿರೋಧಿಗಳನ್ನು  ಗೆಲ್ಲೋದ್ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಎತ್ತಿದ ಕೈ ಎಂದು ಇದೀಗ ಮತ್ತೆ ಸಾಭೀತುಪಡಿಸಿದ್ದಾರೆ. ವಿರೋಧಿಗಳು ನರೇಂದ್ರ ಮೋದಿಯವರನ್ನು ಅದೆಷ್ಟೇ ವಿರೋಧಿಸಲಿ, ಆದರೆ ಮೋದಿಯವರು ಮಾತ್ರ ಅದನ್ನು ಲೆಕ್ಕಿಸದೆ ಸ್ನೇಹ ಹಸ್ತವನ್ನು ಚಾಚುತ್ತಾರೆ ಅನ್ನೋದಕ್ಕೆ ಮತ್ತೊಮ್ಮೆ ಸಾಕ್ಷಿಯಾಗಿದ್ದಾರೆ.

PM Narendra Modi


ಥ್ಯಾಂಕ್ ಯೂ ಮೋದೀಜಿ ಎಂದ ಕುಮಾರಣ್ಣ..
ಪ್ರಧಾನಿ ಮೋದಿಯವರಿಗೆ ಕರ್ನಾಟಕ ಮುಖ್ಯಮಂತ್ರಿ ಕುಮಾರ ಸ್ವಾಮಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಮೋದಿಯವರ ಟ್ವೀಟ್‍ಗೆ ಪ್ರತಿಕ್ರಿಯಿಸಿದ ಕುಮಾರ ಸ್ವಾಮಿ ಈ ಬಗ್ಗೆ ಉತ್ತರ ನೀಡಿದ್ದಾರೆ. “ಪ್ರಧಾನಿ ನರೇಂದ್ರ ಮೋದಿಯವರೇ. ನನ್ನ ಆರೋಗ್ಯದ ಮೇಲಿರುವ ನಿಮ್ಮ ಕಾಳಜಿಗೆ ಧನ್ಯವಾದಗಳು. ನಿಮ್ಮ ಕಾಳಜಿಗೆ ನಾನು ಚಿರಋಣಿಯಾಗಿದ್ದೇನೆ. ಎಲ್ಲಕ್ಕಿಂತ ದೈಹಿಕ ಆರೋಗ್ಯ ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ. ಇದಕ್ಕಾಗಿ ನಾನು ಪ್ರತಿನಿತ್ಯ ಯೋಗಾದಿ ಪ್ರಾಣಾಯಾಮಗಳನ್ನು ಮಾಡುತ್ತೇನೆ. ಅಂತೆಯೇ ರಾಜ್ಯದ ಅಭಿವೃದ್ಧಿಯೂ ಮುಖ್ಯವಾಗಿದ್ದು ನೀವು ನನಗೆ ಸಹಕರಿಸಬೇಕು” ಎಂದು ಟ್ವಿಟರ್ ಮೂಲಕ ಕೋರಿದ್ದಾರೆ.

HD Kumarasvami

ಕುಮಾರ ಸ್ವಾಮಿಗೆ ಚಾಲೆಂಜ್ ಹಾಕಿದ್ದ ಮೋದಿ..
ಕರ್ನಾಟಕ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿಯವರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಟ್ವಿಟರ್‍ನಲ್ಲಿ “ಫಿಟ್‍ನೆಸ್ ಛಾಲೆಂಜ್” ಹಾಕಿದ್ದರು. “ಹಮ್ ಫಿಟ್ ತೋ ಇಂಡಿಯಾ ಫಿಟ್” ಎಂಬ ಅಭಿಯಾನದಲ್ಲಿ ಕುಮಾರ ಸ್ವಾಮಿಗೆ ಮೋದಿ ಚಾಲೆಂಜ್ ಹಾಕಿದ್ದರು. ಭಾರತ ತಂಡದ ಕ್ರಿಕೆಟಿಗ ವಿರಾಟ್ ಕೋಹ್ಲಿಯವರ ಚಾಲೆಂಜ್ ಸ್ವೀಕರಿಸಿದ ಪ್ರಧಾನಿ ಮೋದಿ ತನ್ನ ಫಿಟ್‍ನೆಸ್ ಬಗ್ಗೆ ತಾನು ಅಭ್ಯಾಸಿಸುತ್ತಿದ್ದ ಬಗ್ಗೆ ವೀಡಿಯೋ ಮಾಡಿ ಅದನ್ನು ಟ್ವಿಟರ್‍ನಲ್ಲಿ ಅಳವಡಿಸಿ ಕರ್ನಾಟಕದ ಮುಖ್ಯಮಂತ್ರಿ ಕುಮಾರ ಸ್ವಾಮಿಯವರಿಗೆ ಚಾಲೆಂಜ್ ಮಾಡಿದ್ದು, ಇದಕ್ಕೆ ಕರ್ನಾಟಕ ಮುಖ್ಯಮಂತ್ರಿ ಕುಮಾರ ಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಏನಿದು ಫಿಟ್ ನೆಸ್ ಚಾಲೆಂಜ್..?
ಪ್ರಥಮವಾಗಿ ಕೇಂದ್ರ ಕ್ರೀಡಾ ಸಚಿವ ರಾಜವರ್ಧನ್ ರಾಥೋರ್ ಅವರು “ನಾವು ಆರೋಗ್ಯವಾಗಿಡಬೇಕಾದರೆ ವ್ಯಾಯಾಮ ಮಾಡಬೇಕು, ವ್ಯಾಯಾಮ ಮಾಡಿ ಅದರ ವೀಡಿಯೋ ಮಾಡಿ ಮತ್ತೊಬ್ಬರಿಗೆ ಚಾಲೆಂಜ್ ಮಾಡಿ. ಈ ಮೂಲಕ ನಾವು ಆರೋಗ್ಯವಾಗಿರಬೇಕು ಅದರೊಂದಿಗೆ ದೇಶವೂ ಆರೋಗ್ಯವಾಗಿರಬೇಕು” ಎಂದು ಹೇಳಿದ್ದರು. ಹಾಗೂ ತಾನು ಮಾಡಿದ ವ್ಯಾಯಾಮದ ವೀಡಿಯೋವನ್ನು ಭಾರತ ತಂಡದ ಕ್ರಿಕೆಟಿಗ ವಿರಾಟ್ ಕೋಹ್ಲಿಯವರಿಗೆ ಟ್ವಿಟರ್‍ನಲ್ಲಿ ಹಾಕಿ ಚಾಲೆಂಜ್ ಮಾಡುತ್ತಾರೆ.

Modiji

ರಾಜವರ್ಧನ್ ರಾಥೋರ್ ಅವರ ಚಾಲೆಂಜ್ ಸ್ವೀಕರಿಸಿದ್ದ ವಿರಾಟ್ ಕೋಹ್ಲಿ ತಾನು ವೀಡಿಯೋ ಮಾಡಿ ಅದನ್ನು ತನ್ನ ಪತ್ನಿ ಅನುಷ್ಕಾ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಚಾಲೆಂಜ್ ಹಾಕುತ್ತಾರೆ. ಇದೀಗ ಕೋಹ್ಲಿ ಹಾಕಿದ್ದ ಸವಾಲನ್ನು ಸ್ವೀಕರಿಸಿದ ಪ್ರಧಾನಿ ಮೋದಿಯವರು ತಾನು ವ್ಯಾಯಾಮ ಮಾಡಿದ ವೀಡಿಯೋ ಮಾಡಿ ಅದನ್ನು ಟ್ವಿಟರ್‍ನಲ್ಲಿ ಹಾಕಿ,  ಕರ್ನಾಟಕದ ಮುಖ್ಯಮಂತ್ರಿ ಕುಮಾರ ಸ್ವಾಮಿಯವರಿಗೆ ಚಾಲೆಂಜ್ ಮಾಡಿದ್ದಾರೆ.

ಇದೀಗ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹಾಕಿದ್ದ ಚಾಲೆಂಜ್‍ಗೆ ಕುಮಾರ ಸ್ವಾಮಿ ಪ್ರತಿಕ್ರಿಯೆ ನೀಡಿದ್ದು ರಾಜಕೀಯ ಶತ್ರುಪಕ್ಷಗಳ  ಒಡನಾಟಕ್ಕೆ ಕಾರಣವಾಗಿದೆ. ಈ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಎಂತಹಾ ಶತ್ರುಗಳನ್ನೂ ಪ್ರೀತಿಸುತ್ತಾರೆ ಎಂಬುವುದಕ್ಕೆ ಮತ್ತೆ ಉದಾಹರಣೆಯಾಗಿದ್ದಾರೆ.

ಮೂಲ : ಪೋಸ್ಟ್ ಕಾರ್ಡ್ ಕನ್ನಡ 


YOU MAY ALSO LIKE



No comments