ಹುತಾತ್ಮ ಯೋಧ ಔರಂಗಜೇಬ್ ಮನೆಗೆ ರಕ್ಷಣಾ ಸಚಿವೆ ಭೇಟಿ
![]() |
ನಿರ್ಮಲಾ ಸೀತಾರಾಮನ್ ವೀರ ಯೋಧ ಔರಂಗಜೇಬ್ ಕುಟುಂಬವನ್ನು ಭೇಟಿಯಾದ ಸಂದರ್ಭ |
ಮೊನ್ನೆಯಷ್ಟೇ ಭಯೋತ್ಪಾದಕರಿಂದ ಅಪಹರಣಕ್ಕೊಳಗಾಗಿ ವೀರ ಮರಣವನ್ನಪ್ಪಿದ ಯೋಧ ರೈಫಲ್ ಮ್ಯಾನ್ ಔರಂಗಜೇಬ್ ಅವರ ಮನೆಗೆ ಇಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಬೇಟಿ ನೀಡಿದರು. ನಿರ್ಮಲಾ ಸೀತಾರಾಮನ್ ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಸಲನಿ ಗ್ರಾಮದಲ್ಲಿರುವ ಔರಂಗಜೇಬ್ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಕುಟುಂಬ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿ, ಆ ಕುಟುಂಬದ ದೇಶ ಪ್ರೇಮವನ್ನು ಕಂಡು ಬೆರಗಾದರು. ಔರಂಗಜೇಬ್ ಒಬ್ಬ ವೀರ ಯೋಧರಾಗಿದ್ದು, ಅವರ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಭರವಸೆ ನೀಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿ, ಔರಂಗಜೇಬ್ ಹಾಗು ಆತನ ಕುಟುಂಬ ದೇಶಕ್ಕೆ ಮಾದರಿಯಾಗಿದೆ. ಹುತಾತ್ಮ ಯೋಧನ ಕುಟುಂಬಸ್ಥರನ್ನು ಭೇಟಿಮಾಡಲು ಬಂದಿದ್ದು, ಕೆಲ ಸಮಯ ಅವರೊಂದಿಗೆ ಕಳೆದೆ. ಇಲ್ಲಿಂದ ಹೊರಡುವಾಗ ಒಂದು ಸಂದೇಶವನ್ನು ಪಡೆದುಕೊಂಡಿದ್ದು, ಇವರು ದೇಶಕ್ಕೆ ಸ್ಫೂರ್ತಿಯಾಗಿದ್ದಾರೆ ಎಂದು ಹೇಳಿದರು.
ಸಚಿವೆ ನಿರ್ಮಲಾ ಸೀತಾರಾಮನ್ ಜೊತೆಯಲ್ಲಿ ಸೇನೆಯ ಹಾಗೂ ಜಮ್ಮು ಕಾಶ್ಮೀರ ಪೊಲೀಸ್ ಪಡೆಯ ಉನ್ನತ ಅಧಿಕಾರಿಗಳು ಜೊತೆಯಲ್ಲಿದ್ದರು.
ಜೂನ್ 14 ರಂದು ಯೋಧ ಔರಂಗಜೇಬ್ನನ್ನು ಪುಲ್ವಾಮಾದಿಂದ ಉಗ್ರರು ರಂಜಾನ್ ಆಚರಣೆಗೆ ರಜೆಯಲ್ಲಿ ತೆರಳುತ್ತಿವನನ್ನು ಅಪಹರಿಸಿದ್ದರು. ಇದಾದ ಒಂದು ದಿನದ ನಂತರ ಗುಂಡುಗಳು ದೇಹವನ್ನು ಹೊಕ್ಕ ಸ್ಥಿತಿಯಲ್ಲಿ ಯೋಧನ ಮೃತ ದೇಹವು ಪತ್ತೆಯಾಗಿತ್ತು. ಇದು ದೇಶದಲ್ಲಿ ಸಂಚಲನವನ್ನು ಸಹ ಉಂಟು ಮಾಡಿದ್ದಲ್ಲದೆ, ಉಗ್ರರ ಸರ್ವ ನಾಶಕ್ಕೆ ಯೋಧನ ಕುಟುಂಬದಿಂದ ಸರಕಾರದ ಮೇಲೆ ಒತ್ತಡವು ಬಂದಿತ್ತು.
YOU MAY ALSO LIKE
No comments