ಅಂತರಾಷ್ಟ್ರೀಯ ಯೋಗ ದಿನ : ಮೂಲ ಮತ್ತು ಪ್ರಾಮುಖ್ಯತೆ
ಜೂನ್ 21 ರಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ. ಶಾರೀರಿಕ ಯೋಗದಿಂದ ಮನುಷ್ಯನು ಆರೋಗ್ಯಪೂರ್ಣ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ. ಈ ದಿನವು ಮಾನವ ದೇಹದ ಒಳಗಿನ ಮತ್ತು ಹೊರಗಿನ ಯೋಗಕ್ಷೇಮಕ್ಕೆ ಸಮರ್ಪಿತವಾಗಿದೆ. ಯೋಗದಿಂದ ಲಭಿಸುವ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಪ್ರಯೋಜನಗಳ ಕುರಿತು ವಿಶ್ವಾದ್ಯಂತ ಅರಿವು ಮೂಡಿಸಲು ಅಂತರರಾಷ್ಟ್ರೀಯ ಯೋಗ ದಿನವನ್ನು ಹಮ್ಮಿಕೊಳ್ಳಲಾಗಿದೆ. "ಯೋಗ" ಎಂಬುದು ಸಂಸ್ಕೃತ ಪದ, ಮತ್ತೂಂದು ಅರ್ಥದಲ್ಲಿ "ಯೋಗ" ಪದಕ್ಕೆ "ದೇಹ ಮತ್ತು ಪ್ರಜ್ಞೆಯ ಒಕ್ಕೂಟ" (ಸಂಯೋಗ) ಎಂದಿದೆ.
ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನವೆಂದು ಏಕೆ ಆಯ್ಕೆ ಮಾಡಲಾಯಿತು?
ಜೂನ್ 21 ಉತ್ತರ ಗೋಳಾರ್ಧದಲ್ಲಿ ವರ್ಷದ ಅತಿ ದೊಡ್ಡ ದಿನವಾಗಿದೆ ಮತ್ತು ಪ್ರಪಂಚದ ಅನೇಕ ಭಾಗಗಳಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಈ ದಿನವನ್ನು ಅಂತರರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸುವಂತಾಗಬೇಕು ಎಂದು 2014ರಲ್ಲಿ ಕೇಳಿಕೊಂಡಿದ್ದರು.
ಯೋಗದ ಮೊದಲ ಅಂತರರಾಷ್ಟ್ರೀಯ ದಿನವನ್ನು ಜೂನ್ 21, 2015 ರಂದು ಪ್ರಪಂಚದಾದ್ಯಂತ ಆಚರಿಸಲಾಯಿತು . ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ 35,985 ಜನರು ಮತ್ತು 84 ರಾಷ್ಟ್ರಗಳ ಗಣ್ಯರೊಂದಿಗೆ 21 ಯೋಗದ ಆಸನಗಳನ್ನು (ಭಂಗಿಗಳು) 35 ನಿಮಿಷಗಳ ಕಾಲ ಹೊಸದೆಹಲಿಯ ರಾಜ್ ಪತ್ ನಲ್ಲಿ ನಡೆಸಲಾಯಿತು.
ರಾಜ್ ಪತ್ನಲ್ಲಿ ನಡೆದ ಈ ಕಾರ್ಯಕ್ರಮವು ಎರಡು ಗಿನ್ನಿಸ್ ವಿಶ್ವ ದಾಖಲೆಯನ್ನು ಮಾಡಿತು -
1. 35,985 ಜನರು ಏಕಕಾಲದಲ್ಲಿ ಯೋಗವನ್ನು ಮಾಡಿದರು. ಮತ್ತು
2. ಅತಿ ಹೆಚ್ಚು ರಾಷ್ಟ್ರದ ಗಣ್ಯರು ಈ ಯೋಗ ದಿನದಲ್ಲಿ ಭಾಗವಹಿಸಿದ್ದರು (84 ರಾಷ್ಟ್ರಗಳು)
ಇದನ್ನೂ ಓದಿರಿ : ಯೋಗ ದಿನಾಚರಣೆಗೆ ಅಣಿಯಾದ ಭಾರತ.
ಅಂತರಾಷ್ಟ್ರೀಯ ಯೋಗ ದಿನದಂದು ಭಾರತದಲ್ಲಿ ನಡೆಯುವ ಕಾರ್ಯಕ್ರಮಗಳು :-
ಪ್ರಧಾನಿ ನರೇಂದ್ರ ಮೋದಿ ಅವರು ಡೆಹ್ರಾಡೂನ್ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಜೂನ್ 21 ರಂದು ಸುಮಾರು 60,000 ಮಂದಿ ಯೋಗವನ್ನು ಮಾಡಲಿದ್ದಾರೆ.
ಜೂನ್ 21ರಂದು ಸಿಯಾಚಿನ್ ಬೇಸ್ ಕ್ಯಾಂಪ್ನಲ್ಲಿ ಪದ್ಮವಿಭೂಷಣ ಸದ್ಗುರು ಜಗ್ಗಿ ವಾಸುದೇವ್ ಅವರು ಸೈನಿಕರನ್ನು ಭೇಟಿ ಮಾಡಲಿದ್ದಾರೆ. ಸದ್ಗುರುಗಳು ತೀವ್ರ ಹಿಮಪಾತವಾಗುವ ಈ ಪ್ರದೇಶದಲ್ಲಿ ಸೈನಿಕರ ಸಮಸ್ಯೆಗಳ ಕುರಿತು ಸೈನಿಕರೊಂದಿಗೆ ಮಾತನಾಡುತ್ತಾರೆ. ಅದರಲ್ಲೂ ನಿರ್ದಿಷ್ಟವಾಗಿ ಆರೋಗ್ಯಕ್ಕಾಗಿ ಯೋಗದ ಪ್ರಾಮುಖ್ಯತೆ, ಯೋಗಕ್ಷೇಮ ಮತ್ತು ಉನ್ನತ ಎತ್ತರದಲ್ಲಿ ದೇಹದ ಆಂತರಿಕ ಸಮತೋಲನ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸದ್ಗುರು ಅವರ ಮಾರ್ಗದರ್ಶನದಲ್ಲಿ ಸೈನ್ಯದ ಸಿಬ್ಬಂದಿಗಳು ವೈಜ್ಞಾನಿಕವಾಗಿ ವಿನ್ಯಾಸಗೊಳಿಸಲಾದ ಯೋಗ ಆಸನಗಳನ್ನು ಸಹ ಮಾಡಲಿದ್ದಾರೆ.
YOU MAY ALSO LIKE
No comments