Breaking News

ರಾಜ್ಯ ವಿಧಾನಸಭಾ ಚುನಾವಣೆ: ನಾಳಿನ ಮತಎಣಿಕೆಯ ಕುರಿತು


Karnataka assembly election 2018


ಮುಂದಿನ ಲೋಕಸಭೆ ಚುನಾವಣೆಯ ದಿಕ್ಸೂಚಿಯೆಂದೇ ವಿಶ್ಲೇಷಿಸಲಾಗುತ್ತಿರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕಾಗಿ ದೇಶ ಹಾಗೂ ರಾಜ್ಯದ ಜನತೆ ಕಾತರದಿಂದ ಎದುರು ನೋಡುತ್ತಿದ್ದು, ನಾಳೆ (ಮೇ 15) ಬೆಳಗ್ಗೆ 8ಗಂಟೆಯಿಂದ ಮತ ಏಣಿಕೆ ಕಾರ್ಯ ಆರಂಭಗೊಳ್ಳಲಿದೆ.

ರಾಜಧಾನಿ ಬೆಂಗಳೂರಿನ 26, ಬೆಳಗಾವಿಯ 18 ಕ್ಷೇತ್ರಗಳು ಸೇರಿದಂತೆ ರಾಜ್ಯದ 222 ಕ್ಷೇತ್ರಗಳಿಗೆ ಮೇ 12ರಂದು ಚುನಾವಣೆ ನಡೆದಿತ್ತು. ಮಧ್ಯಾಹ್ನದ ವೇಳೆ ಫಲಿತಾಂಶ ಹೊರ ಬೀಳುವ ಸಾಧ್ಯತೆಗಳಿದ್ದು, ರಾಜ್ಯದ ಅಧಿಕಾರದ ಗದ್ದುಗೆಯನ್ನು ಯಾರು ಏರಲಿದ್ದಾರೆಂಬುದು ಊಹಾಪೋಹಗಳಿಗೆ ತೆರೆಬೀಳಲಿದೆ.

ಈಗಾಗಲೇ ಚುನಾವಣಾ ಆಯೋಗ ರಾಜ್ಯಾದ್ಯಂತ ಮತ ಎಣಿಕೆ ಕಾರ್ಯಕ್ಕೆ ಅಗತ್ಯ ಸಿದ್ಧತೆಗಳನ್ನು ಆಯೋಗ ಮಾಡಿಕೊಂಡಿದೆ. ಬಿಗಿ ಭದ್ರತೆಯಲ್ಲಿ ಮತ ಯಂತ್ರಗಳಿಗೆ ಅಳವಡಿಸಿರುವ ಕಂಟ್ರೋಲ್ ಯೂನಿಟ್ ಮತ್ತು ವಿವಿಪ್ಯಾಟ್‌ಗಳನ್ನು ಮತ ಎಣಿಕೆ ಕೇಂದ್ರಕ್ಕೆ ನಾಳೆ ಬೆಳಗ್ಗೆ ತರಲಾಗುವುದು ಎಂದು ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.

222 ಕ್ಷೇತ್ರಗಳ ಮತ ಎಣಿಕೆಗಾಗಿ ರಾಜ್ಯಾದ್ಯಂತ 38 ಮತ ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ ಬೆಂಗಳೂರಿನಲ್ಲಿ 5 ಕಡೆ, ತುಮಕೂರಿನಲ್ಲಿ 3 ಕಡೆ ಹಾಗೂ ಚಿತ್ರದುರ್ಗ, ದಕ್ಷಿಣ ಕನ್ನಡ, ಮೈಸೂರು ಜಿಲ್ಲೆಗಳಲ್ಲಿ ತಲಾ 2 ಕಡೆಗಳಲ್ಲಿ ಹಾಗೂ ಇನ್ನುಳಿದ ಜಿಲ್ಲೆಗಳಲ್ಲಿ ತಲಾ ಒಂದೊಂದು ಕಡೆ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದರು.

ಮತ ಎಣಿಕೆ ನಡೆಯುವ ದಿನದಂದು ಸುಗಮವಾಗಿ ಮತ ಎಣಿಕೆ ನಡೆಯಲು ಅನುವು ಮಾಡಿಕೊಡುವ ದೃಷ್ಟಿಯಿಂದ 222 ಮತಕ್ಷೇತ್ರಗಳಿಗೆ ಪರಿವೀಕ್ಷಕರನ್ನು ನೇಮಿಸಲಾಗಿದೆ. ಹಾಗೆಯೇ, ಹೆಚ್ಚುವರಿಯಾಗಿ ತಲಾ 14 ಮಂದಿಯಂತೆ ಸೂಕ್ಷ್ಮ ವೀಕ್ಷಕರನ್ನು ಪ್ರತಿ ಮತಕ್ಷೇತ್ರಕ್ಕೆ ನಿಯೋಜಿಸಲಾಗಿದೆ.

ಪ್ರತಿ ಮತ ಕ್ಷೇತ್ರಕ್ಕೆ ಸುಮಾರು 80ಮಂದಿ ಎಣಿಕೆ ಮಾಡುವವರನ್ನು ನಿಯೋಜಿಸಲಾಗಿದೆ. ಈ ಪೈಕಿ 14 ಮಂದಿ ಮತ ಎಣಿಕೆ ಮೇಲ್ವಿಚಾರಕರು, 14 ಎಣಿಕೆ ಸಹಾಯಕರು ಮತ್ತು 14 ಸೂಕ್ಷ್ಮ ವೀಕ್ಷಕರಿಂದ ಕೂಡಿರುವ ಒಂದು ತಂಡವಾಗಿ ಕಾರ್ಯ ನಿರ್ವಹಿಸಲಿದೆ. ಈ ತಂಡದಲ್ಲಿ ಇರುವ ಹೆಚ್ಚುವರಿ 4 ಮಂದಿ ಅಂಚೆ ಮತಪತ್ರಗಳನ್ನು ಎಣಿಸಲಿದ್ದಾರೆ. ಪ್ರತಿ ಮತಕ್ಷೇತ್ರದಿಂದ 24 ಮಂದಿಯನ್ನು ಭದ್ರತಾ ಕೊಠಡಿಯಿಂದ ಮತ ಎಣಿಕೆ ಕೇಂದ್ರಕ್ಕೆ ಇವಿಎಂಗಳನ್ನು ಸಾಗಿಸಲು ನಿಯೋಜಿಸಲಾಗಿರುತ್ತದೆ ಎಂದು ಅವರು ವಿವರಿಸಿದರು.

loading...



ಮತ ಎಣಿಕೆ ನಡೆಯುವ 222 ಮತಕ್ಷೇತ್ರಗಳ ಪೈಕಿ ಸುಮಾರು 217 ಮತಕ್ಷೇತ್ರಗಳ ಮತ ಎಣಿಕೆಯು 14 ಟೇಬಲ್‌ಗಳಿರುವ ಹಾಲ್‌ನಲ್ಲಿ ನಡೆಯಲಿದೆ. ಉಳಿದ 5 ಕ್ಷೇತ್ರಗಳ ಮತ ಎಣಿಕೆಯು 14ಕ್ಕೂ ಹೆಚ್ಚು ಟೇಬಲ್‌ಗಳಿರುವ ಹಾಲ್‌ನಲ್ಲಿ ನಡೆಯಲಿದೆ.
ಈ ಮತಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯ ಸ್ಪರ್ಧಿಗಳು ಚುನಾವಣಾ ಕಣದಲ್ಲಿದ್ದುದರಿಂದ ಹೆಚ್ಚುವರಿ ಟೇಬಲ್‌ಗಳನ್ನುಬಳಕೆ ಮಾಡಲಾಗುತ್ತದೆ. ಮತ ಎಣಿಕೆ ಕೇಂದ್ರಗಳು ಕೇಂದ್ರ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ವಯ ಕಾರ್ಯ ನಿರ್ವಹಿಸಲಿವೆ ಎಂದು ಅವರು ತಿಳಿಸಿದರು.

No comments