Breaking News

ಇನ್ನು ಫೇಸ್ಬುಕ್ ಆಪ್ ನಿಂದಲೂ ಮೊಬೈಲ್ ರಿಚಾರ್ಜ್ ಮಾಡಬಹುದು

ಫೇಸ್ಬುಕ್  ಅತೀ ಹೆಚ್ಚು ಜನಪ್ರೀಯತೆಯನ್ನು ಪಡೆದ ಒಂದು ಸಾಮಾಜಿಕ ಜಾಲತಾಣ . ಇಂದಿನ ದಿನಮಾನದಲ್ಲಿ ಫೇಸ್ಬುಕ್ನಲ್ಲಿ ಸ್ವಲ್ಪ ಸಮಯ ಕಳೆಯದವರು ಸಿಗುವುದು ಕಷ್ಟ . ಇಷ್ಟೊಂದು ಜನರನ್ನು ಸೆಳೆದಿರುವ ಈ ತಾಣ ಬಳಕೆದಾರರಿಗೆ ಅನೇಕ ಸೌಲಭ್ಯಗಳನ್ನು ನೀಡುತ್ತಾ ಬಂದಿದೆ. ಅವುಗಳಲ್ಲಿ ಭಾರತೀಯ ಫೇಸ್ಬುಕ್ ತನ್ನ ಬಳಕೆದಾರರಿಗೆ ಪ್ರಿಪೇಯ್ಡ್ ಮೊಬೈಲ್ಗಳ ರಿಚಾರ್ಜ್ ಮಾಡುವ ಸೌಲಭ್ಯವನ್ನು ನೀಡಿದೆ. ಇದು ಪ್ರಸ್ತುತ ಫೇಸ್ಬುಕ್ ಆಂಡ್ರಾಯ್ಡ್ ಅಪ್ಲಿಕೇಶನ್ ನಲ್ಲಿ ಲಭ್ಯವಿದೆ.


Facebook Recharg



ಕೆಲವು ದಿನಗಳ ಹಿಂದೆ ವಾಟ್ಸಾಪ್ ತನ್ನ ಬಿಸಿನೆಸ್ ಆಪ್ ನ್ನು ಪರಿಚಯಿಸಿದ ಬೆನ್ನಲ್ಲೇ ಫೇಸ್ಬುಕ್ ಈ ಹೊಸ ಅವಕಾಶವನ್ನು ತನ್ನ ಬಳಕೆದಾರರಿಗೆ ನೀಡಿದೆ. ಈ ಹೊಸ ಸೇವೆಯನ್ನು ಪಡೆಯಲು ಫೇಸ್ಬುಕ್ ಆಂಡ್ರಾಯ್ಡ ಅಪ್ಲಿಕೇಷನ್ನ ಇತ್ತೀಚಿನ ಆವೃತ್ತಿಯನ್ನು ಪಡೆದುಕೊಳ್ಳಬೇಕಾಗುತ್ತದೆ. ತಮ್ಮ ಮೊಬೈಲ್ನಲ್ಲಿ ಇನ್ಸ್ಟಾಲ್ ಆದನಂತರ ಅಪ್ಲಿಕೇಶನ್ ನ ಒಳಗೆ ಪ್ರವೇಶವನ್ನು ಪಡೆದುಕೊಂಡು ಬಲಬದಿಯಲ್ಲಿ ಮೇಲೆ ಇರುವ, ಮೂರೂ ಅಡ್ಡ ಗೆರೆ ಇರುವ ಮೆನು ಬಟನ್ ಒತ್ತಿ ಅದರಲ್ಲಿ ಕೆಳಗಡೆ ಮೊಬೈಲ್ ಟಾಪ್ ಅಪ್ ಎಂಬ ಆಯ್ಕೆಯು ಕಂಡು ಬರುತ್ತದೆ.

ಇದನ್ನೂ ಓದಿರಿ :-  ಫೇಸ್ಬುಕ್ ನಿಂದ ಬಿಗ್ ಶಾಕ್ ....! 





ಆ ಟಾಪ್ ಅಪ್ ಎಂಬಲ್ಲಿ ಕ್ಲಿಕ್ ಮಾಡಿದರೆ ನಿಮಗೆ ಲಭ್ಯವಿರುವ ವಿವಿಧ ಪ್ಲಾನ್ಗಳು ದೊರೆಯುತ್ತವೆ. ಅವುಗಳನ್ನು ಮತ್ತು ರಿಚಾರ್ಜ್ ಮಾಡಬೇಕಾದ ಸಂಖ್ಯೆಯನ್ನು ಆಯ್ಕೆ ಮಾಡಿಕೊಂಡು ಪೇಮೆಂಟ್ ಮಾಡಿ ರಿಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಸದ್ಯದಲ್ಲಿ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ಗಳ ಮೂಲಕ ಪೇಮೆಂಟ್ ಮಾಡಬಹುದಾಗಿದ್ದು, ಇದು ಸಂಪೂರ್ಣ ಸುರಕ್ಷಿತ ಹಾಗೂ ಉಚಿತ ಸೌಲಭ್ಯವಾಗಿದೆ. ಪ್ರಸ್ತುತ ಫೇಸ್ಬುಕ್ ವೀಸಾ ಮತ್ತು ಮಾಸ್ಟರ್ ಕಾರ್ಡಗಳ ಮೂಲಕ ಮಾತ್ರ ಸೇವೆಯನ್ನು ಪಡೆಯಲು ಅವಕಾಶ ನೀಡಿದೆ.
ಇದನ್ನೂ ಓದಿರಿ :-  EPF ಬ್ಯಾಲನ್ಸ್ ಚೆಕ್ ಮಾಡುವುದು ಹೇಗೆ ...? 

ಇಂತಹ ಲೇಖನಗಳನ್ನು ಓದಲು ನಮ್ಮ ಫೇಸ್ಬುಕ್ ಪೇಜನ್ನು ಲೈಕ್ ಮಾಡಿ👇👇


ನಮ್ಮ ಪೇಜನ್ನು ಲೈಕ್ ಮಾಡಲು ಮರೆಯದಿರಿ ಗೆಳೆಯರೇ .. 

No comments