BSNL ಗ್ರಾಹಕರಿಗೆ ಸಿಹಿ ಸುದ್ದಿ .....
ಮೊಬೈಲ್ ಸಂಖ್ಯೆಗೆ ಆಧಾರ್ ಲಿಂಕ್ ಮಾಡಲು ಖಾಸಗಿ ಟೆಲಿಕಾಂ ಕಂಪನಿಗಳು IVRS ನ ಅವಕಾಶವನ್ನು ನೀಡಿದ್ದವು. ಆದರೆ ಸರಕಾರಿ ಸ್ವಾಮ್ಯದ BSNL ಈ ಅವಕಾಶವನ್ನು ನೀಡಿರಲಿಲ್ಲ. ಈಗ BSNL ಸಹ ಈ ಅವಕಾಶ ನೀಡಿದ್ದು, IVRS ಸಹಾಯದಿಂದ ಕುಳಿತಲ್ಲಿಂದಲೇ ಲಿಂಕ್ ಮಾಡಿಕೊಳ್ಳಬಹುದಾಗಿದೆ. ಇದು BSNL ನ ಗ್ರಾಹಕರಿಗೆ ಸಿಹಿ ಸುದ್ದಿಯಾಗಿದೆ.
BSNL ನ ಗ್ರಾಹಕರು ಆಧಾರ್ ಲಿಂಕ್ ಮಾಡಿಕೊಳ್ಳಲು IVRS 14546 ಸಂಖ್ಯೆಗೆ ಕರೆಮಾಡಿ ಅಲ್ಲಿ ಕೇಳಲಾಗುವ ಮಾಹಿತಿಗಳನ್ನು ನೀಡಿ ಲಿಂಕ್ ಮಾಡಿಕೊಳ್ಳಬಹುದಾಗಿದೆ. ಇದಲ್ಲದೆ ಗ್ರಾಹಕರು BSNL ನ ಮಳಿಗೆಗಳಿಗೆ ಹೋಗಿಯೂ ಲಿಂಕ್ ಮಾಡಿಸಿಕೊಳ್ಳಬಹುದಾಗಿದೆ.
ಇದನ್ನು ಓದಿರಿ :- BSNL ಮೊಬೈಲ್ ನಂಬರಿಗೆ ಒಂದು ಫೋನ್ ಕಾಲ್ ಮೂಲಕ ಆಧಾರ್ ಲಿಂಕ್ ಮಾಡುವುದು ಹೇಗೆ ?
No comments