Breaking News

BSNL ಮೊಬೈಲ್ ನಂಬರಿಗೆ ಒಂದು ಫೋನ್ ಕಾಲ್ ಮೂಲಕ ಆಧಾರ್ ಲಿಂಕ್ ಮಾಡುವುದು ಹೇಗೆ ?



Aadhar with BSNL Link


BSNL ಮೊಬೈಲ್ ನಂಬರಿಗೆ ಒಂದು ಫೋನ್ ಕಾಲ್ ನ  ಮೂಲಕ ಆಧಾರ್ ಲಿಂಕ್ ಮಾಡಬಹುದಾಗಿದೆ.  UIDAI ತನ್ನ ನಿಯಮವನ್ನು ಸರಳೀಕರಣಗೊಳಿಸಿದ ನಂತರ BSNL ಗ್ರಾಹಕರಿಗೆ ಆಧಾರ ಲಿಂಕ್ ಮಾಡಲು IVRS ಸೌಲಭ್ಯವನ್ನು ಒದಗಿಸಿದೆ. ಇದು ವಿಕಲ ಚೇತನರಿಂದ ಹಿಡಿದು ಎಲ್ಲರಿಗೂ ಉತ್ತಮವಾದ ವಿಧಾನವಾಗಿದೆ. ಇದು ತುಂಬಾ ಸುಲಭವಾಗಿದ್ದು, ಯಾರು ಬೇಕಾದರೂ ಲಿಂಕ್ ಮಾಡಿಕೊಳ್ಳಬಹುದಾಗಿದೆ.

BSNL ಗ್ರಾಹಕರು ಟೋಲ್ ಪ್ರಿ ನಂಬರ್ ಆದ 14546 ಗೆ ಕರೆ ಮಾಡುವ ಮೂಲಕ ಸುಲಭವಾಗಿ ಆಧಾರ ಲಿಂಕ್ ಮಾಡಿಕೊಳ್ಳಬಹುದಾಗಿದೆ. ಲಿಂಕ್ ಮಾಡುವ ವಿಧಾನವನ್ನು ಹಂತ ಹಂತವಾಗಿ ನೋಡೋಣ ....


ಹಂತ 1 :-  ನೀವು ಆಧಾರ್ ಲಿಂಕ್ ಮಾಡಲು ಬಯಸಿದ ಸಂಖ್ಯೆಯ ಮೊಬೈಲ್ , ಆಧಾರ್ ರಜಿಸ್ಟರ್ ಮಾಡುವಾಗ ನೀಡಿದ ಸಂಖ್ಯೆಯ ಮೊಬೈಲ್ ಮತ್ತು ಆಧಾರ್ ಸಂಖ್ಯೆಯನ್ನು ಹತ್ತಿರದಲ್ಲಿ ಇಟ್ಟುಕೊಳ್ಳಬೇಕು. ಹಾಗು  14546 ಗೆ ಕರೆ ಮಾಡಬೇಕು.


ಹಂತ 2 :-  ನಿಮ್ಮ ಭಾಷೆಯನ್ನು ಆಯ್ಕೆಮಾಡಲು ಕೇಳಲಾಗುತ್ತದೆ. ಕನ್ನಡಕ್ಕಾಗಿ 1 ನ್ನು ಒತ್ತಿರಿ.  ನೀವು ಭಾರತೀಯರೇ ಎಂದು ಕೇಳಲಾಗುತ್ತದೆ. ಹೌದಾದಲ್ಲಿ 1 ನ್ನು ಒತ್ತಿರಿ, ನಂತರ ನನ್ನ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಲು ಸಮ್ಮತಿಯನ್ನು ಮತ್ತು ಇದು ಆಧಾರ್ ಆಕ್ಟ್ 2016 ರ ಅಡಿಯಲ್ಲಿ UIDAI ಮೂಲಕ ದೃಡೀಕರಣಕ್ಕಾಗಿ ನನ್ನ ಒಪ್ಪಿಗೆ ಇದೆ ಎಂದು ತಿಳಿಸಲು 1 ನ್ನು ಒತ್ತಿರಿ.

ಇದನ್ನೂ ಓದಿರಿ :- ಆಧಾರ್ ಸಂಖ್ಯೆ  ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಆಗಿದೆಯೇ ಎಂದು ನೋಡುವುದು ಹೇಗೆ ?

ಹಂತ 3 :-  ನಿಮ್ಮ 12 ಅಂಖ್ಯೆಯ ಆಧಾರ್ ಸಂಖ್ಯೆಯನ್ನು ನೀಡಲು ಕೇಳಲಾಗುತ್ತದೆ. ನಿಮ್ಮ ಸಂಖ್ಯೆಯನ್ನು ನಮೂದಿಸಿದ ನಂತರ ಸರಿಯಾಗಿದೆಯೇ ಎಂದು ಪರಿಶೀಲಿಸಿ ಸರಿ ಇದ್ದಲ್ಲಿ 1 ನ್ನು ಒತ್ತಿರಿ ಅಥವಾ ತಪ್ಪಿದ್ದಲ್ಲಿ 2 ನ್ನು ಒತ್ತಿ ಸರಿಯಾದ ಸಂಖ್ಯೆಯನ್ನು ನಮೂದಿಸಿರಿ.




ಹಂತ 4 :-  ನಿಮ್ಮ  ಆಧಾರ್ ಗೆ ನೀಡಿದ ಮೊಬೈಲ್ಗೆ ಒಂದು ಸಂದೇಶದ ಮೂಲಕ OTP ಯನ್ನು ಕಳಿಸಲಾಗಿರುತ್ತದೆ. ಅದನ್ನು ನಮೂದಿಸಲು ಕಳಲಾಗುತ್ತದೆ. ನಂತರ ತಮ್ಮ ಮೊಬೈಲ್ ನಂಬಿರನ್ನು ಮತ್ತೊಮ್ಮೆ ಪರಿಶೀಲಿಸಿ ಒಪ್ಪಿಗೆಯನ್ನು ನೀಡಬೇಕು.


loading...



ಹಂತ 5 :- ಇದಾದ ನಂತರ ಮತ್ತೊಮ್ಮೆ OTP ಯನ್ನು ನಮೂದಿಸಿ ವೆರಿಫಿಕೇಷನ್ ಗೆ ಕಲಿಸಲಾಗುತ್ತದೆ. ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಗ್ರಾಹಕರ ಹೆಸರನ್ನು UIDAI ಗೆ ವೆರಿಫಿಕೇಷನ್ ಪ್ರಕ್ರಿಯೆಗೆ ಕಳಿಸಲಾಗಿದೆ ಎಂಬ ಸಂದೇಶವು ನಿಮ್ಮ ಮೊಬೈಲ್ ಸಂಖ್ಯೆಗೆ ಕಳಿಸಲುತ್ತದೆ. ನಿಮ್ಮ ಮಾಹಿತಿಯನ್ನು 48 ಗಂಟೆಗಳೊಳಗಾಗಿ ಪರಿಶೀಲಿಸಿ ಸಂದೇಶ ರವಾನಿಸುತ್ತಾರೆ.

ಈ ರೀತಿಯಾಗಿ ಸುಲಭವ ಕುಳಿತಲ್ಲಿಂದಲೇ ಆಧಾರ್ ಲಿಂಕ್ ಮಾಡಿಕೊಳ್ಳಬಹುದಾಗಿದೆ. ಇನ್ನು ಕೆಲವೇ ದಿನಗಳು ಬಾಕಿ ಇದ್ದು ಈ ವಿಧಾನವು ಹೆಚ್ಚಿನ ಸಹಾಯವನ್ನು ಮಾಡಲಿದೆ. 

No comments