ಬೀಜಾಮೃತ ತಯಾರಿಸುವ ವಿಧಾನ
ಸಾವಯವ ಕೃಷಿಯಲ್ಲಿ ಬಿತ್ತನೆ ಬೀಜಗಳು ಉತ್ತಮವಾಗಿ ಮೊಳಕೆಯೊಡೆದು, ರೋಗ ಮುಕ್ತವಾಗಿ ಬೆಳೆಯಲು ಬಿತ್ತನೆಗೂ ಮೊದಲು ಉಪಚರಿಸಲು ತಯಾರಿಸುವ ದ್ರಾವಣಕ್ಕೆ ಬೀಜಾಮೃತ ಎನ್ನಲಾಗುತ್ತದೆ. ಬೀಜಾಮೃತದ ಉಪಚಾರದಿಂದ ಬಿತ್ತನೆ ಬೀಜಗಳು ಕ್ರಿಮಿ, ಕೀಟ,ಸೂಕ್ಷ್ಮ ಜೀವಿ ಮತ್ತು ಇರುವೆಗಳಿಂದ ರಕ್ಷಿಸಲ್ಪಟ್ಟು ಉತ್ತಮವಾಗಿ ಮೊಳಕೆ ಒಡೆದು ಬರುತ್ತವೆ. ಈ ಅಮೃತವನ್ನು ಹೇಗೆ ತಯಾರಿಸಬೇಕು ಎಂಬುದನ್ನು ಇಲ್ಲಿ ತಿಳಿಯೋಣ...
2) 5 ಕೆ.ಜಿ. ದೇಸಿ ಹಸುವಿನ ಸಗಣಿ .
3) 5 ಲೀ. ದೇಸಿ ಹಸುವಿನ ಗಂಜಲ .
4) 50 ಗ್ರಾಂ ಸುಣ್ಣ.
5) 1 ಬೊಗಸೆ ಜಮೀನಿನ ಮಣ್ಣು.
ಇದನ್ನೂ ಓದಿರಿ : ಹೈನುರಾಸುಗಳಿಗೆ ಮೇವಿನ ಕೊರತೆಯೇ .... ಇಲ್ಲಿದೆ ಕೆಲವು ಮೇವಿನ ಬೆಳೆಗಳ ಮಾಹಿತಿ.
ಒಂದು ಪ್ಲಾಸ್ಟಿಕಿನ ದ್ರಮ್ಮ ನಲ್ಲಿ 20 ಲೀ. ನೀರನ್ನು ತೆಗೆದುಕೊಳ್ಳಿ . ಒಂದು ಬಟ್ಟೆಯನ್ನು ತೆಗೆದುಕೊಂಡು ಅದರಲ್ಲಿ ದೇಸಿ ಹಸುವಿನ ಸಗಣಿಯನ್ನು ಹಾಕಿ ಗಂಟುಮಾಡಿಕೊಳ್ಳಿ. ಅದನ್ನು ನೀರಿನ ಡ್ರಮ್ಮಿನಲ್ಲಿ ಮುಳುಗುವಂತೆ ಕಟ್ಟಿಕೊಂಡು ಚೆನ್ನಾಗಿ ಹಿಂಡಿ ಗಾಳಿಸಿಕೊಳ್ಳಬೇಕು. ಗಾಳಿಸಿಕೊಂಡ ಸಗಣಿಯ ತಿಳಿ ನೀರಿಗೆ ದೇಸಿ ಹಸುವಿನ ಗಂಜಲ ಸೇರಿಸಿಕೊಳ್ಳಬೇಕು. ಅಂತೆಯೇ ಮತ್ತೊಂದು ತಟ್ಟೆಯಲ್ಲಿ 50 ಗ್ರಾಂ ಸುಣ್ಣವನ್ನು ನೀರಿನಲ್ಲಿ ನೆನೆ ಹಾಕಬೇಕು ಮತ್ತು ನೀರು ತಿಳಿಯಾಗಲು ಬಿಡಬೇಕು. ತಿಳಿಯಾದ ಸುಣ್ಣದ ನೀರನ್ನು ಸೋಸಿಕೊಂಡು ಸಗಣಿ ತಿಳಿ ನೀರು, ಗಂಜಲದ ಮಿಶ್ರಣದ ಡ್ರಮ್ಮಿನಲ್ಲಿ ಸೇರಿಸಬೇಕು . ಆ ಡ್ರಮ್ಮಿಗೆ ಬೊಗಸೆ ಮಣ್ಣನ್ನು ಸೇರಿಸಿ ಚೆನ್ನಾಗಿ ತಿರುಗಿಸಿ ಮಿಶ್ರ ಮಾಡಬೇಕು. ಈಗ ಈ ಬೀಜಾಮೃತ ಸಿದ್ದವಾಯಿತು. ಮರುದಿನ ಬೀಜವನ್ನು ಉಪಚರಿಸಲು ಬಳಸಬಹುದಾಗಿದೆ.
ಭತ್ತ, ರಾಗಿ, ಜೋಳ, ಅಲಸಂದೆ, ಉದ್ದು ಮುಂತಾದ ಧಾನ್ಯಗಳನ್ನು ಬಿತ್ತುವ ಮೊದಲು ಬೀಜಾಮೃತ ತಯಾರಿಸಿಕೊಂಡು ಅದರಲ್ಲಿ 15-20 ನಿಮಿಷ ನೆನೆ ಹಾಕಿ , ನೆರಳಿನಲ್ಲಿ ಒಣಗಿಸಿಕೊಂಡು ಬಿತ್ತನೆಗೆ ಬಳಸಬಹುದಾಗಿದೆ. ಇದೊಂದು ಸಾವಯವ ವಿಧಾನವಾಗಿದ್ದು ಯಾವುದೇ ರೀತಿಯ ಅಪಾಯಗಳು ಉಂಟಾಗುವುದಿಲ್ಲ. ಹಾಗೂ ಬೀಜ ಮೊಳಕೆಯೊಡೆದು ಸಸ್ಯವಾಗಿ ಬೆಳೆಯಲು ಉತ್ತೇಜನ ನೀಡಿದಂತಾಗುವುದರಿಂದ ಹುಲುಸಾಗಿ ಬೆಳೆಯುತ್ತದೆ.
ಬೇಕಾಗುವ ಸಾಮಗ್ರಿಗಳು :-
1) 20 ಲೀ. ನೀರು .2) 5 ಕೆ.ಜಿ. ದೇಸಿ ಹಸುವಿನ ಸಗಣಿ .

loading...
loading...
No comments