EPF ಬ್ಯಾಲನ್ಸ್ ಚೆಕ್ ಮಾಡುವುದು ಹೇಗೆ ...?
EPF ಖಾತೆಯನ್ನು ಹೊಂದಿರುವ ಉದ್ಯೋಗಿಗಳು ತಮ್ಮ ಬ್ಯಾಲೆನ್ಸ್ ತಿಳಿಯಲು ಉದ್ಯೋಗದಾತಾರ ವರದಿಗಾಗಿ ಕಾಯುವ ಅವಶ್ಯಕತೆ ಇಲ್ಲ. ತಮ್ಮ ಖಾತೆಯ ಮೊತ್ತವನ್ನು ಎಸ್ ಎಮ್ ಎಸ್ , ಮಿಸ್ಡ್ ಕಾಲ್ , ಆನ್ಲೈನ್ ಮತ್ತು ಅಪ್ಲಿಕೇಶನ್ ನ ಮೂಲಕವೂ ತಿಳಿಯಬಹುದಾಗಿದೆ.
ಆನ್ಲೈನ್ ಮೂಲಕ EPF ಬ್ಯಾಲನ್ಸ್ ಚೆಕ್ ಮಾಡುವುದು :-
ಯಾವುದಾದರೊಂದು ಬ್ರೌಸರ್ ತೆರೆದು www.epfindia.gov.in ಎಂದು ಟೈಪ್ ಮಾಡಿ. ಅದು ನಿಮ್ಮನ್ನು ಎಂಪ್ಲೋಯೀ ಪ್ರಾವಿಡೆಂಡ್ ಪಂಡ್ ಒರ್ಗನೈಸೇಷನ್ (Employee"s Provident Fund Organisation, India) ಪೇಜ್ ತೆರೆದುಕೊಳ್ಳುತ್ತದೆ.
ಅಲ್ಲಿ ಬಲಭಾಗದಲ್ಲಿರುವ ಈ- ಪಾಸ್ ಬುಕ್ ( e-Passbook) ಎಂಬ ಬಟನ್ ಮೇಲೆ ಕ್ಲಿಕ್ ಮಾಡಿರಿ. ಅದು ನಿಮ್ಮನ್ನು ಮತ್ತೊಂದು ಪೇಜ್ಗೆ ಕರೆದೊಯ್ಯುತ್ತದೆ. ಅಲ್ಲಿ ನಿಮ್ಮ ಯು ಎ ಏನ್ ಸಂಖ್ಯೆಯನ್ನು ನೀಡಿ ಮತ್ತು ಯು ಎ ಏನ್ ಸಂಖ್ಯೆಯನ್ನು ರಚಿಸುವಾಗ ನೀಡಿದ ಪಾಸ್ ವರ್ಡ್ ನೀಡಿ . ಅಂತೆಯೇ ಕೆಳಗಿರುವ ಕ್ಯಾಂಪ್ಚ್ಯಾ ಕೋಡನ್ನು ತುಂಬಿರಿ. ಕೆಳಗೆ ಕಾಣುವ ಲ್ಯಾಗ್ ಇನ್ ಬಟನ್ ಒತ್ತಿರಿ.
ಅದು ನಿಮ್ಮನ್ನು ಪಾಸ್ ಬುಕ್ ಡೌನ್ಲೋಡ್ ಮಾಡುವ ಪೇಜಿಗೆ ನಿಮ್ಮನ್ನು ಕೊಂಡೊಯ್ಯುತ್ತದೆ. ಹೊಸದಾಗಿ ಲಾಗ್ ಇನ್ ಆಗಿರುವ ಉದ್ಯೋಗಿಗಳಿಗೆ ಪಾಸ್ ಬುಕ್ ಡೌನ್ಲೋಡ್ ಮಾಡಲು ಸುಮಾರು 6 ಗಂಟೆಯ ಕಾಲಾವಧಿ ತೆಗೆದುಕೊಳ್ಳುತ್ತದೆ.
ಅಲ್ಲಿ ನಿಮ್ಮ ಪ್ರತಿ ತಿಂಗಳ ಕಟ್ಟುತ್ತಿರುವ ಮೊತ್ತವನ್ನು ಹಾಗೂ ಈ ವರೆಗೆ ಕೂಡಿರುವ ಮೊತ್ತವನ್ನು ನೋಡಬಹುದಾಗಿದೆ.
ಎಸ್ ಎಮ್ ಎಸ್ ಮೂಲಕ EPF ಬ್ಯಾಲನ್ಸ್ ಚೆಕ್ ಮಾಡುವುದು :-
ಈಗಾಗಲೇ ಯು ಎ ಏನ್ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಹೊಂದಿರುವ ಗ್ರಾಹಕರು ತಮ್ಮ ಖಾತೆಯ ಬ್ಯಾಲೆನ್ಸ್ ನ್ನು ಎಸ್ ಎಮ್ ಎಸ್ ಮೂಲಕ ಪಡೆಯಬಹುದಾಗಿದೆ. ನೋಂದಾಯಿತ ಫೋನಿನಿಂದ EPFOHO UAN ENG ಎಂದು ಬರೆದ ಸಂದೇಶವನ್ನು 7738299899 ಗೆ ಕಳುಹಿಸಿ ಪಡೆಯಬಹುದಾಗಿದೆ.
ಮಿಸ್ಡ್ ಕಾಲ್ ನೀಡುವ ಮೂಲಕ EPF ಬ್ಯಾಲನ್ಸ್ ಚೆಕ್ ಮಾಡುವುದು :-
ಇದೊಂದು ತುಂಬಾ ಸುಲಭದ ವಿಧಾನವಾಗಿದೆ. ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 011 22 901 406 ಈ ನಂಬೆರಿಗೆ ಕರೆಮಾಡಬೇಕು. ಎರಡು ರಿಂಗ್ ಆದ ತಕ್ಷಣ ತನ್ನಿಂದ ತಾನೇ ಕಟ್ ಆಗುತ್ತದೆ ಮತ್ತು ಒಂದು ಎಸ್ ಎಮ್ ಎಸ್ ಬರುತ್ತದೆ. ಅಲ್ಲಿ ನಿಮಗೆ ಬೇಕಾದ ಮಾಹಿತಿಯನ್ನು ಕೇಳಿ ಪಡೆದುಕೊಳ್ಳಬಹುದು.
ಅಪ್ಲಿಕೇಶನ್ ನ ಮೂಲಕ EPF ಬ್ಯಾಲನ್ಸ್ ಚೆಕ್ ಮಾಡುವುದು :-
ಪ್ಲೆ ಸ್ಟೋರ್ ಅಥವಾ ಆಪ್ ಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಂಡು ಅಲ್ಲಿ ಕೇಳಲಾದ ಪ್ರತಿಯೊಂದು ಮಾಹಿತಿಯನ್ನು ನೀಡಿ ಯಾವಾಗಲು ಮೊತ್ತವನ್ನು ನೋಡಿಕೊಳ್ಳಬಹುದು.
No comments