Breaking News

How to Link Aadhar with Mibile Number Easily ?




ಆಧಾರ್  ಸಂಖ್ಯೆಯನ್ನು ಸಿಮ್ ಕಾರ್ಡ್ಗೆ ಲಿಂಕ್ ಮಾಡಲು ಇನ್ನೆರಡೇ ತಿಂಗಳುಗಳಿದ್ದು, ಗ್ರಾಹಕರು ಲಿಂಕ್ ಮಾಡಿಸಲು ರಿಟೇಲ್ ಶಾಪ್ ಗಳ  ಎದುರು ಸರದಿ ಸಾಲಿನಲ್ಲಿ ನಿಂತು ರೋಸಿಹೋಗಿದ್ದಾರೆ .  ಆದರೆ ಈಗ ಕೆಲವು ಟೆಲಿಕಾಂ ಕಂಪನಿಗಳು ತಮ್ಮ ಬಳಕೆದಾರರಿಗಾಗಿ ಇಂಟರಾಕ್ಟಿವ್ ಧ್ವನಿ ಪ್ರಕ್ರಿಯೆಯ  ಮೂಲಕ   ಆಧಾರ್ ಲಿಂಕ್ ಮಾಡಲು ಅನುವು ಮಾಡಿಕೊಟ್ಟಿವೆ. 

ಏರ್ಟೆಲ್ , ಐಡಿಯಾ ಮತ್ತು ವೊಡಾಫೋನ್  ಟೆಲಿಕಾಂ ಆಪರೇಟರ್ ಗಳ ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆಯಿಂದ 14546 ಗೆ ಕರೆ ಮಾಡುವ ಮೂಲಕ ಆಧಾರ್ ಸಂಖ್ಯೆಯನ್ನು ಸಿಮ್ ಗೆ ಲಿಂಕ್ ಮಾಡಬಹುದಾಗಿದೆ.
ಇದನ್ನೂ ಓದಿರಿ :- BSNL ಮೊಬೈಲ್ ನಂಬರಿಗೆ ಒಂದು ಫೋನ್ ಕಾಲ್ ಮೂಲಕ ಆಧಾರ್ ಲಿಂಕ್ ಮಾಡುವುದು ಹೇಗೆ ? 

ಹಂತ 1 :-  ಏರ್ಟೆಲ್ , ಐಡಿಯಾ ಮತ್ತು ವೊಡಾಫೋನ್ ಗ್ರಾಹಕರು 14546 ಕ್ಕೆ  ಲಿಂಕ್  ಬಯಸಿದ ಸಂಖ್ಯೆಯಿಂದ  ಮಾಡಬೇಕು.

ಹಂತ 2 :- ನಂತರ ಗ್ರಾಹಕರು ಭಾರತೀಯರೇ ಅಥವಾ ಏನ್ ಆರ್ ಐ ಗಳೇ ಎಂಬುದನ್ನು ದ್ರಢಪಡಿಸುವಂತೆ ಕೇಳಲಾಗುತ್ತದೆ.

ಹಂತ 3 :- ನಂತರ ತಮ್ಮ ಹನ್ನೆರೆಡು ಅಂಕೆಗಳ ಆಧಾರ ಸಂಖ್ಯೆಯನ್ನು ನೀಡಬೇಕಾಗುತ್ತದೆ.

ಹಂತ 4 :- ತಮ್ಮ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಗಳನ್ನು ಪರಿಶೀಲಿಸಿ ದ್ರಢಪಡಿಸಬೇಕಾಗುತ್ತದೆ.

ಹಂತ 5 :- ಆಧಾರ್  ಕಾರ್ಡಿನಲ್ಲಿ  ನೋಂದಾಯಿತ  ಮೊಬೈಲ್  ಸಂಖ್ಯೆಗೆ  ಒನ್  ಟೈಮ್  ಪಾಸ್ವರ್ಡ್ ನ್ನು [OTP] ಕಳುಹಿಸಲಾಗುತ್ತದೆ.

ಹಂತ 6 :-  ಪಠ್ಯ ಸಂದೇಶದ ರೂಪದಲ್ಲಿರುವ OTPಯನ್ನು ನೀಡಬೇಕು.

ಹಂತ 7 :- ನಿಮ್ಮ ಹೆಸರು, ಹುಟ್ಟಿದ ದಿನ, ಭಾವಚಿತ್ರಗಳನ್ನು ನೋಡಲು ಅವಕಾಶ ಮಾಡಿ ಕೊಡಲಾಗುತ್ತದೆ. ಅಂತೆಯೇ ತಮ್ಮ ಮೊಬೈಲ್ ಸಂಖ್ಯೆಯನ್ನು ದ್ರಢಪಡಿಸಲು ಕೇಳಲಾಗುತ್ತದೆ.

ಹಂತ 8 :- ನಂತರ ಸಂದೇಶದ ರೂಪದಲ್ಲಿರುವ OTPಯನ್ನು ನಮೂದಿಸಿ ಪ್ರತಿಕ್ರಿಯೆಯನ್ನು ಪೂರ್ಣಗೊಳಿಸಲಾಗುತ್ತದೆ.

ನಂತರ ನಿಮ್ಮ ಮೊಬೈಲ್ ನಂಬರಿಗೆ ಆಧಾರ್ ಹಾಗು ಸಿಮ್ ವೆರಿಫಿಕೇಷನ್ ಬಗ್ಗೆ ಒಂದು ಸಂದೇಶವನ್ನು ಕಲಿಸಲಾಗುತ್ತದೆ.


ಈರೀತಿಯಾಗಿ ಈ ಮೂರೂ ಟೆಲಿಕಾಮ್ ಆಪರೇಟರ್ ಗಳ  ಬಳಕೆದಾರರು ಸಿಮ್ ಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಬಹುದಾಗಿದ್ದು, ಇದು ಗ್ರಾಹಕರಿಗೆ ತುಂಬಾ ಸುಲಭದ ವಿಧಾನವಾಗಿದೆ.                                                                                                                                                                                                                                                                                 

No comments