ಜಿಯೋ ಆಪರಿಗೆ ಸೆಡ್ಡು ಹೊಡೆದ BSNL ಮಿನಿ ಡೇಟಾ ಪ್ಲಾನ್
ಈ ಮೂಲಕ ಸರಕಾರಿ ಸ್ವಾಮ್ಯದ BSNL ತನ್ನೆಡೆಗೆ ಸೆಳೆಯಲು ಮತ್ತು ತನ್ನ ಖಾಯಂ ಗ್ರಾಹಕರಿಗೆ ಹೆಚ್ಚಿನ ಲಾಭ ನೀಡಲು ಹೊರಟಿದೆ. ಈ ಆಪರ್ ಜಿಯೋಗೆ ಸೆಡ್ಡು ಹೊಡೆಯುವಂತಿದ್ದು, ತನ್ನ ಎರಡು ಪ್ಲಾನನ್ನು ಘೋಷಿಸಿದೆ. ಇದುವರೆಗೆ ಜಿಯೋ ಸಹ ಇಷ್ಟು ಕಡಿಮೆ ಬೆಲೆಗೆ ಡೇಟಾವನ್ನು ನೀಡುತ್ತಿಲ್ಲ.
- ರೂ 7 ಡೇಟಾ ಪ್ಲಾನ್ :-
ಈ ಪ್ಲಾನಿನಲ್ಲಿ ಗ್ರಾಹಕರು 7 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡರೆ ಒಂದು ದಿನದ ವ್ಯಾಲಿಡಿಟಿಯೊಂದಿಗೆ 1GB 3G ವೇಗದ ಡೇಟಾ ಬಳಕೆಯ ಅವಕಾಶವನ್ನು ಮಾಡಿಕೊಡಲಿದೆ. ಇದರಲ್ಲಿ ಯಾವುದೇ ರೀತಿಯ ವಾಯ್ಸ್ ಕರೆಯ ಸೌಲಭ್ಯ ದೊರೆಯದಿದ್ದರೂ ಇದ್ದು ಒಂದು ಉತ್ತಮ ಡೇಟಾ ಪ್ಲಾನ್ ಆಗಿದೆ.
- ರೂ 16 ಡೇಟಾ ಪ್ಲಾನ್ :-
ಇದು ಸಹ ಡೇಟಾ ಪ್ಲಾನ್ ಆಗಿದ್ದು, 16 ರೂಪಾಯಿಯ ರಿಚಾರ್ಜ್ನೊಂದಿಗೆ ದೊರೆಯುತ್ತದೆ. ಆದರೆ ಇಲ್ಲಿ 2 GB 3G ವೇಗದ ಡೇಟಾ ಬಳಕೆಯ ಅವಕಾಶ ನೀಡಲಾಗಿದೆ. ಒಂದು ದಿನದ ವ್ಯಾಲಿಡಿಟಿಯೊಂದಿಗೆ ಡೇಟಾ ಬಳಕೆಯ ಅವಕಾಶವನ್ನು ನೀಡಲಿದೆ. ಇಲ್ಲಿ ಯಾವುದೇ ರೀತಿಯ ವಾಯ್ಸ್ ಕರೆಯ ಸೌಲಭ್ಯ ದೊರೆಯುವುದಿಲ್ಲ.
ಈ ಎರಡು ಪ್ಲಾನ್ಗಳು ಜಿಯೋಗೆ ಸೆಡ್ಡು ಹೋಯುವಂತಿದ್ದು, ಈ ಮೂಲಕ BSNL ಜನಮನ್ನಣೆಯನ್ನು ಗಳಿಸುತ್ತಿದೆ. ಜಿಯೋ ನ 11ರುಪಾಯಿಯ ಪ್ಲಾನಿನಲ್ಲಿ ಕೇವಲ 400 MB ಡೇಟಾ ದೊರೆಯಲಿದೆ. ಆದರೆ ರೂಪಾಯಿ 7 ಮತ್ತು 16 ರ ಪ್ಲಾನ್ ಮೂಲಕ ಗ್ರಾಹಕರಿಗೆ ಹೆಚ್ಚಿನ ಡೇಟಾ ನೀಡಿ ತಾನು ಡಬ್ಬಲ್ ಲಾಭ ಮಾಡಿಕೊಳ್ಳಲು BSNL ಹೊರಟಿದೆ.
No comments